ನವದೆಹಲಿ : ಸದಾ ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರೊಂದಿಗೆ ಸಂಪರ್ಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ಗೆ ಲಿಂಕ್ ಮಾಡಲಾಗಿರುವ ಟ್ವಿಟರ್ ಖಾತೆಯನ್ನು ಗುರುವಾರ ಮುಂಜಾನೆ ಹ್ಯಾಕ್ ಮಾಡಲಾಗಿದ್ದು, ಕ್ರಿಪ್ಟೋಕರೆನ್ಸಿಯನ್ನು ಕೋರಿ ಮಾಡಿರುವ ನಕಲಿ ಟ್ವೀಟ್ಗಳನ್ನು ಈಗ ತೆಗೆದು ಹಾಕಲಾಗಿದೆ. ಇನ್ನು ಬಿಟ್ ಕಾಯಿನ್ಗೆ ಸಂಬಂಧಿಸಿದ ಟ್ವೀಟ್ಗಳ ಸರಣಿಯಲ್ಲಿ, ಪಿಎಂ ನರೇಂದ್ರ ಮೋದಿಯವರ ಟ್ವಿಟ್ಟರ್ ಖಾತೆಯಲ್ಲಿ “ಕೋವಿಡ್ -19 ಗಾಗಿ ಪಿಎಂ ನ್ಯಾಷನಲ್ ರಿಲೀಫ್ ಫಂಡ್ಗೆ ಉದಾರವಾಗಿ ದೇಣಿಗೆ ನೀಡುವಂತೆ ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ, ಈಗ ಭಾರತ ಕ್ರಿಪ್ಟೋ ಕರೆನ್ಸಿಯಿಂದ ಪ್ರಾರಂಭವಾಗುತ್ತದೆ , 0xae073DB1e5752faFF169B1ede7E8E94bF7f80Be6 ಗೆ ದಾನ ಮಾಡಿ. ” ಎಂಬ ಸಂದೇಶಗಳನ್ನು ಟ್ವೀಟ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಮಾಡಿರುವ ಟ್ವಿಟರ್ ಖಾತೆಯಲ್ಲಿ ಸುಮಾರು 2.5 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಇದೀಗ ಪ್ರಧಾನಿ ಅವರ ವೈಯಕ್ತಿಕ ವೆಬ್ ಸೈಟ್ ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವುದನ್ನು ಸ್ವತಃ ಟ್ವಿಟರ್ ಒಪ್ಪಿಕೊಂಡಿದೆ. ಅಲ್ಲದೇ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ಸಕ್ರೀಯವಾಗಿ ತನಿಖೆಯನ್ನು ನಡೆಸುತ್ತಿದ್ದೇವೆ. ಈ ಸಮಯದಲ್ಲಿ ಹೆಚ್ಚುವರಿ ಖಾತೆಗಳ ಮೇಲೆ ಪರಿಣಾಮ ಬೀರುವ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಲಾಗಿದೆ.
.