ನಿತ್ಯಭವಿಷ್ಯ : 03-09-2020

0

ಮೇಷರಾಶಿ
ಆರ್ಥಿಕ ಸಮಸ್ಯೆ ಬಗೆಹರಿಯುವವು, ಉತ್ತಮ ಹೆಸರು ಕೀರ್ತಿ ಪ್ರಾಪ್ತಿ, ಆರ್ಥಿಕವಾಗಿ ಸ್ಥಿರತೆಯು ಕಂಡು ಬರಲಿದೆ. ಸಾಮಾಜಿಕವಾಗಿ ಕೆಲಸಕಾರ್ಯಗಳು ಬಿರುಸಿನಿಂದ ನಡೆದಾವು. ಹೆಚ್ಚಿನ ವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ. ಆಗಾಗ ದೇವತಾ ಕಾರ್ಯಗಳಿಂದ ಸಮಾಧಾನವಾದೀತು, ಪ್ರತಿಷ್ಠೆ ಮಾನ ಸನ್ಮಾನಗಳು, ಪ್ರಯಾಣದಲ್ಲಿ ಅನುಕೂಲ.

ವೃಷಭರಾಶಿ
ಪತ್ರ ವ್ಯವಹಾರಗಳಲ್ಲಿ ಅನುಕೂಲ, ಬಂಧು ಬಾಂಧವರಿಂದ ಸಹ್ಯವಲ್ಲದ ಮಾತು, ಗೃಹ, ಉದ್ಯೋಗ ಸ್ಥಳ ಬದಲಾವಣೆ, ವೃತ್ತಿರಂಗದಲ್ಲಿ ನಿಮ್ಮ ಕಾರ್ಯವೈಖರಿ ಪ್ರಶಂಸೆ ಸಲ್ಲಲಿದೆ. ಕಾರ್ಯರಂಗದಲ್ಲಿ ಬಾಕಿ ಉಳಿದಿರುವ ಕೆಲಸಗಳು ನಡೆಯಲಿವೆ. ವಿವಾಹ ಪ್ರಸ್ತಾವಗಳು ಕಂಕಣಬಲ ತಂದೀತು. ಕೌಟುಂಬಿಕ ವ್ಯವಹಾರವು ಚೆನ್ನಾಗಿರುತ್ತದೆ.

ಮಿಥುನರಾಶಿ
ಕಾರ್ಯರಂಗದಲ್ಲಿ ನಿಮ್ಮ ಚತುರತೆ ಕಂಡು ಬಂದರೂ ಮನಸ್ಸಿಗೆ ಸಮಾಧಾನ ತರದೆ ನಿಷ್ಪಲವಾದೀತು. ವ್ಯಾಪಾರ, ವ್ಯವಹಾರದಲ್ಲಿ ಲಾಭ ನಷ್ಟಗಳು ಸುಧಾರಿಸಿಕೊಂಡು ಹೋಗಬಹುದಾಗಿದೆ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಲಾಭ, ಫೈನಾನ್ಸ್, ಷೇರು ಮಾರುಕಟ್ಟೆ ಕ್ಷೇತ್ರದವರಿಗೆ ಧನಾಗಮನ.

ಕಟಕರಾಶಿ
ಸ್ವಂತ ಉದ್ಯಮ ವ್ಯಾಪಾರಕ್ಕೆ ಅನುಕೂಲ, ಅಪಮಾನ, ಅಪನಿಂದನೆಗೆ ಒಳಗಾಗುವಿರಿ, ಕಾರ್ಯಜಯ, ಕಾರ್ಯರಂಗದಲ್ಲಿ ಆಗಾಗ ಅಡೆತಡೆಗಳು ತೋರಿ ಬರಲಿವೆ. ಶ್ರೀದೇವರ ದರ್ಶನ ಭಾಗ್ಯವಿರದಿದ್ದರೂ ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆ ಯಾದೀತು. ರೈತರಿಗೆ ಗೋಸಂಪತ್ತು ವೃದ್ಧಿಯಾದರೂ ಕೃಷಿಯಲ್ಲಿ ಪರಿಶ್ರಮಬೇಕು.

ಸಿಂಹರಾಶಿ
ಮಕ್ಕಳಿಂದ ಧನಾಗಮನ, ಮಕ್ಕಳಿಂದ ಸಹಕಾರ, ಆಗಾಗ ಧನಾಗಮನ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣವು ಬಂದು ಸಂತುಷ್ಟರಾಗುವಿರಿ. ಇಷ್ಟ ಮಿತ್ರರ ಸಮಾಗಮದಿಂದ ಸಂತೋಷವಾಗಲಿದೆ. ದಿನಾಂತ್ಯದಲ್ಲಿ ಶುಭವಿದೆ, ಆಕಸ್ಮಿಕ ಅವಘಡಗಳಿಂದ ಅನಾರೋಗ್ಯ, ಮೈಕೈ ನೋವು, ಅಜೀರ್ಣ ದೋಷ.

ಕನ್ಯಾರಾಶಿ
ಅಧಿಕ ನಷ್ಟ, ಲಾಭದ ಪ್ರಮಾಣ ಕುಂಠಿತವಾಗುವುದು, ನಿಮ್ಮ ಕಾರ್ಯಸಾಧನೆ ಸಹೋದ್ಯೋಗಿಗಳಿಗೆ ಅಷ್ಟೊಂದು ಸಮಾಧಾನ ವಾಗಲಾರದು. ಆಹಾರ ಪದ್ಧತಿಯಲ್ಲಿ ಬದಲಾವಣೆ ತೋರಿ ಬಂದು ಸಮಸ್ಯೆ ತಂದೀತು. ವೃತ್ತಿರಂಗದಲ್ಲಿ ತಪ್ಪು ಆಭಿಪ್ರಾಯ ಮೂಡಿ ಬರಲಿದೆ, ಸಾಲದ ಚಿಂತೆ ನಿದ್ರಾಭಂಗ, ದಾಂಪತ್ಯ ಕಲಹ.

ತುಲಾರಾಶಿ
ಸಾಲ ತೀರಿಸುವ ಸುಸಂದರ್ಭ, ಉದ್ಯೋಗ ಸ್ಥಳದಲ್ಲಿ ಆರ್ಥಿಕ ಸಮಸ್ಯೆ ಇಲ್ಲ, ಅನಾವಶ್ಯಕವಾಗಿ ಧನವ್ಯಯ ಕಂಡು ಬಂದೀತು. ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ. ಮಾತಿನಿಂದ ತಪ್ಪು ಅಭಿಪ್ರಾಯ ತೋರಿ ಬಂದೀತು. ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡಿದರೂ ಸಾಲದಾದೀತು, ಸ್ವಂತ ವ್ಯಾಪಾರ ವ್ಯವಹಾರ ಪ್ರಾರಂಭಕ್ಕೆ ಅನುಕೂಲ.

ವೃಶ್ಚಿಕರಾಶಿ
ಪ್ರಯಾಣದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ, ಬಹುದಿನಗಳ ಬಳಿಕ ಉತ್ತಮ ಲವಲವಿಕೆ ಕಂಡು ಬರಲಿದೆ. ಸಾಂಸಾರಿಕವಾಗಿ ಸ್ವಲ್ಪ ಸಮಸ್ಯೆಗಳು ಪರಿಹಾರವಾದಾವು. ಏಜೆಂಟರು ಕಮೀಶನ್‌ನಲ್ಲಿ ಏರುಗತಿಯನ್ನು ಕಾಣಿಯಾರು. ಬೆನ್ನು ನೋವಿಗೆ ಉಪಶಮನ ಮಾಡಿರಿ, ಸರ್ಕಾರಿ ಉದ್ಯೋಗಸ್ಥರಿಗೆ ಸಕಾಲ, ರಾಜಕೀಯ ವ್ಯಕ್ತಿಗಳಿಗೆ ಅನುಕೂಲ.

ಧನಸ್ಸುರಾಶಿ
ಆಕಸ್ಮಿಕ ಪ್ರಯಾಣ, ಸ್ಥಿರಾಸ್ತಿ ಮತ್ತು ವಾಹನ ಯೋಗ,ನಿಮಗೆ ಕಿರು ಸಂಚಾರವನ್ನು ತಂದೀತು. ಖುಶಿಯಿಂದ ಅನುಭವಿಸಿರಿ. ಪತ್ನಿಯ ಸುಖ, ಸಂತೋಷ ನಿಮ್ಮದಾದೀತು. ಹೊಟ್ಟೆಯ ಬಗ್ಗೆ ಸ್ವಲ್ಪ ಜಾಗ್ರತೆ ಮಾಡಿರಿ. ಮನೆಯ ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರು, ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಜಯ,

ಮಕರರಾಶಿ
ಆರೋಗ್ಯ ಸಮಸ್ಯೆಗಳು ಎದುರಾಗುವುದು, ಗೃಹ ಬದಲಾವಣೆಯಂತಹ ಸಂದರ್ಭ ಬರಬಹುದು. ಆದರೂ ಬೇಸರಿಸದಿರಿ. ಮುಂದೆ ಒಳ್ಳೆಯದಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಗೊಂದಲಗಳು ತೋರಿ ಬಂದೀತು. ಅದನ್ನು ಸರಿತೂಗಿಸಲು ಕಲಿಯಿರಿ, ಅನಿರೀಕ್ಷಿತವಾಗಿ ಸ್ಥಳ ಮತ್ತು ಗೃಹ ಬದಲಾವಣೆ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ.

ಕುಂಭರಾಶಿ
ಸಾಲ ಬಾಧೆಯಿಂದ ಮುಕ್ತಿ, ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ, ಇದ್ದುದರಲ್ಲೇ ಸಮಾಧಾನವನ್ನು ಅನುಭವಿಸಿರಿ. ನಿಮಗೆ ಒಳ್ಳೆಯ ಕಾಲವು ಕೂಡಿ ಬರುವುದು. ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಬೇಡ. ತಪಾಸಣೆ ಮಾಡಿಸಿರಿ. ಗೃಹದಲ್ಲಿ ಸ್ವಲ್ಪ ಸುಖಶಾಂತಿ ನೆಲೆಸೀತು, ಉದ್ಯೋಗದ ಸಿಹಿ ಸುದ್ದಿ ಕೇಳುವಿರಿ.

ಮೀನರಾಶಿ
ಮಕ್ಕಳಿಗೋಸ್ಕರ ಸಾಲ, ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದ ಹಿರಿಯರ ಸಹಕಾರವು ನಿಮಗಿದೆ. ಆದರೆ ಆದನ್ನು ದುರುಪಯೋಗಿಸಿಕೊಳ್ಳಬೇಡಿರಿ. ಹಿರಿಯರ ಅನುಭವದ ಮಾತಿಗೆ ಕಿವಿಗೊಡಿರಿ. ಅದರಿಂದ ನಿಮಗೆ ಒಳಿತೇ ಆಗುವುದು, ಉದ್ಯೋಗದಲ್ಲಿ ನಷ್ಟ ಸಾಧ್ಯತೆ.

Leave A Reply

Your email address will not be published.