Vaibhav Suryavanshi: 15ಕ್ಕೆ ಕಾಲಿಟ್ಟ ಬಿಹಾರದ ರನ್ ಮಷೀನ್ ವೈಭವ್ ಸೂರ್ಯವಂಶಿ ! ಇನ್ಮುಂದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಅಡ್ಡಿಯಾಗಲ್ಲ ಐಸಿಸಿ ನಿಯಮ
aibhav Suryavanshi ಅದ್ಭುತವಾಗಿ ಆಡುತ್ತಿದ್ದರೂ ಅವರಿಗೆ ಭಾರತದ ಸೀನಿಯರ್ ತಂಡದಲ್ಲಿ (International Debut) ಸ್ಥಾನ ಪಡೆಯಲು ಒಂದು ತಾಂತ್ರಿಕ ಸಮಸ್ಯೆ ಇತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2020ರಲ್ಲಿ ತಂದ ನಿಯಮದ ಪ್ರಕಾರ, ಯಾವುದೇ ಆಟಗಾರ ಅಂತರಾಷ್ಟ್ರೀಯ ಪಂದ್ಯವಾಡಲು ಕನಿಷ್ಠ 15 ವರ್ಷ ತುಂಬಿರಬೇಕು.
ಭಾರತೀಯ ಕ್ರಿಕೆಟ್‌ನ ಭವಿಷ್ಯದ ಸೂಪರ್ ಸ್ಟಾರ್’ ಎಂದೇ ಖ್ಯಾತಿ ಪಡೆದಿರುವ ವೈಭವ್ ಸೂರ್ಯವಂಶಿ (Vaibhav Suryavanshi) ಅವರಿಗೆ ಇಂದು ಅತ್ಯಂತ ವಿಶೇಷವಾದ ದಿನ. ಇಂದು (ಮಾರ್ಚ್ 27, 2026) ವೈಭವ್ ತಮ್ಮ 15ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟುಹಬ್ಬ ಕೇವಲ ಸಂಭ್ರಮಕ್ಕೆ ಮಾತ್ರವಲ್ಲ, ಅವರ ಕ್ರಿಕೆಟ್ ಬದುಕಿನ ಅತಿದೊಡ್ಡ ಮೈಲಿಗಲ್ಲಿಗೆ ದಾರಿಯಾಗಲಿದೆ
ಹುಟ್ಟುಹಬ್ಬದ ದಿನದಂದೇ ವೈಭವ್ ಸೂರ್ಯವಂಶಿ ಕ್ರಿಕೆಟ್ ಬದುಕಿನಲ್ಲಿ ಮಹತ್ವದ ತಿರುವು ಪಡೆದುಕೊಂಡಿದ್ದಾರೆ. ಐಸಿಸಿ ನಿಯಮದ ಪ್ರಕಾರ ವೈಭವ್ ಸೂರ್ಯವಂಶಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಆದ್ರೆ ಬಿಸಿಸಿಐ ನಿಯಮ ಇನ್ಮುಂದೆ ವೈಭವ್ ಅಡ್ಡಿಯಾಗೋದಿಲ್ಲ.
ಏನಿದು ಐಸಿಸಿ (ICC) ನಿಯಮದ ಅಡ್ಡಿ?
ಇಷ್ಟು ದಿನ ವೈಭವ್ ಅದ್ಭುತವಾಗಿ ಆಡುತ್ತಿದ್ದರೂ ಅವರಿಗೆ ಭಾರತದ ಸೀನಿಯರ್ ತಂಡದಲ್ಲಿ (International Debut) ಸ್ಥಾನ ಪಡೆಯಲು ಒಂದು ತಾಂತ್ರಿಕ ಸಮಸ್ಯೆ ಇತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2020ರಲ್ಲಿ ತಂದ ನಿಯಮದ ಪ್ರಕಾರ, ಯಾವುದೇ ಆಟಗಾರ ಅಂತರಾಷ್ಟ್ರೀಯ ಪಂದ್ಯವಾಡಲು ಕನಿಷ್ಠ 15 ವರ್ಷ ತುಂಬಿರಬೇಕು. ಇಂದು 15ನೇ ವಯಸ್ಸಿಗೆ ಕಾಲಿಟ್ಟಿರುವ ವೈಭವ್, ಈಗ ಅಧಿಕೃತವಾಗಿ ಟೀಮ್ ಇಂಡಿಯಾ ಪರ ಆಡಲು ಅರ್ಹತೆ ಪಡೆದಿದ್ದಾರೆ.
Also Read : ಐಪಿಎಲ್ ಆರಂಭಕ್ಕೂ ಮೊದಲೇ ಆರ್ಸಿಬಿ ಅಭಿಮಾನಿಗಳಿಗೆ ಮೆಟ್ರೋ ಗುಡ್ನ್ಯೂಸ್
ಅಂಡರ್-19 ವಿಶ್ವಕಪ್‌ನಲ್ಲಿ ಸೃಷ್ಟಿಸಿದ ರಣಕೌತುಕ.
ಇತ್ತೀಚೆಗೆ ಹರಾರೆಯಲ್ಲಿ ನಡೆದ ಅಂಡರ್-19 ವಿಶ್ವಕಪ್ 2026 ರ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ವೈಭವ್ ಅಬ್ಬರಿಸಿದ್ದರು. ಕೇವಲ 80 ಎಸೆತಗಳಲ್ಲಿ 175 ರನ್ ಚಚ್ಚುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್‌ಗಳಿದ್ದವು. ಇವರ ಬ್ಯಾಟಿಂಗ್ ವೈಖರಿ ಕಂಡು ದಿಗ್ಗಜ ಕ್ರಿಕೆಟಿಗರೇ ಬೆರಗಾಗಿದ್ದಾರೆ.
ವೈಭವ್ ಸೂರ್ಯವಂಶಿ : ಐಪಿಎಲ್‌ನಲ್ಲಿ ದಾಖಲೆಯ ಶತಕ
ವೈಭವ್ ಕೇವಲ ದೇಶೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಐಪಿಎಲ್‌ನಲ್ಲೂ ಅಬ್ಬರಿಸಿದ್ದಾರೆ. ಪ್ರಸ್ತುತ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಭಾಗವಾಗಿರುವ ಇವರು:
Also Read : IPL 2026 : ಯಾರ ಕೈ ಸೇರಲಿದೆ ಈ ಬಾರಿ ಐಪಿಎಲ್ ಕಪ್ ? ಎಲ್ಲಾ 10 ತಂಡಗಳ ಬಲಿಷ್ಠ ಪ್ಲೇಯಿಂಗ್ 11
- 2025ರ ಐಪಿಎಲ್‌ನಲ್ಲಿ ಗುಜರಾತ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
- ಇದು ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರನೊಬ್ಬ ಬಾರಿಸಿದ ಅತಿ ವೇಗದ ಶತಕವಾಗಿದೆ.
- ಕಳೆದ ಸೀಸನ್‌ನ 7 ಪಂದ್ಯಗಳಲ್ಲಿ 252 ರನ್ ಗಳಿಸಿ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಅದ್ಭುತ ಅಂಶಗಳು:
- 18 ಟಿ20 ಪಂದ್ಯಗಳನ್ನು ಆಡಿರುವ ವೈಭವ್ ಸೂರ್ಯವಂಶ ಇದುವರೆಗೆ 701 ರನ್ ಬಾರಿಸಿದ್ದಾರೆ. ಅದ್ರಲ್ಲೂ 204.37 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. 3 ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
- ಲಿಸ್ಟ್ A ನಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿದ್ದು, 353 ರನ್ ಬಾರಿಸಿದ್ರೆ, 1 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ.
- ಅದ್ರಲ್ಲೂ U-19 ವಿಶ್ಬಕಪ್ Final ಪಂದ್ಯದಲ್ಲಿ ಬರೋಬ್ಬರಿ 175ರನ್ ಸಿಡಿಸುವ ಮೂಲಕ ಇಂಗ್ಲೆಂಡ್ ಗೆಲುವು ತಂದುಕೊಟ್ಟು, ಭಾರತಕ್ಕೆ ವಿಶ್ವಕಪ್ ಮುಡಿಗೇರಿಸಿದ್ದಾರೆ.
ಸದ್ಯ ಐಪಿಎಲ್ 2026 ಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿರುವ ವೈಭವ್, ಶೀಘ್ರದಲ್ಲೇ ಟೀಮ್ ಇಂಡಿಯಾದ ನೀಲಿ ಜರ್ಸಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳಿವೆ. 15 ವರ್ಷದ ಈ ಬಾಲಕನ ಬ್ಯಾಟಿಂಗ್ ಪವರ್ ನೋಡಲು ಇಡೀ ಭಾರತ ಕಾತರದಿಂದ ಕಾಯುತ್ತಿದೆ.
vaibhav suryavanshi birthday icc age rule international debut



