
ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಬೆನ್ನಲ್ಲೇ ಡ್ರಗ್ಸ್ ಮಾಫಿಯಾದ ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲೀಗ ಎನ್ ಸಿಬಿ ಅಧಿಕಾರಿಗಳು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿಯ ಮುಂಬೈನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಸುಶಾಂತ್ ಸಿಂಗ್ ಸಾವು ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ ಗೆ ಡ್ರಗ್ಸ್ ನೀಡುತ್ತಿದ್ದಳು ಅನ್ನೋದು ತನಿಖೆಯ ವೇಳೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎನ್ ಸಿಬಿ ಅಧಿಕಾರಿಗಳು ಪ್ರಕರಣ ಬೆನ್ನುಬಿದ್ದಿದ್ದಾರೆ.

ಇಂದು ಬೆಳಗ್ಗೆ 6.30ರ ಸುಮಾರಿಗೆ ರಿಯಾ ಚಕ್ರವರ್ತಿಯ ಮುಂಬೈ ನಿವಾಸದ ಮೇಲೆ ದಾಳಿ ನಡೆದಿದೆ. ಎನ್ ಸಿಬಿಯ 5 ಮಂದಿ ಅಧಿಕಾರಿಗಳ ತಂಡ ಈ ದಾಳಿ ನಡೆದಿದೆ. ಓರ್ವ ಮಹಿಳಾ ಅಧಿಕಾರಿಯೂ ಕೂಡ ತಂಡದಲ್ಲಿದ್ದು, ಮನೆಯ ಇಂಚಿಂಚೂ ಪರಿಶೀಲನೆ ನಡೆಸಲಾಗುತ್ತಿದೆ.

ರಿಯಾ ಚಕ್ರವರ್ತಿ ಮನೆ ಸೇರಿದಂತೆ ಮುಂಬೈನ ಹಲವು ಕಡೆಗಳಲ್ಲಿಯೂ ಸಿಸಿಬಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ. ಸುಶಾಂತ್ ಸಿಂಗ್ ಆಪ್ತನಾಗಿರುವ ಸ್ಯಾಮುವೆಲ್ ಮಿರಾಂದಾ ಹಾಗೂ ರಿಯಾ ಚಕ್ರವರ್ತಿ ಅವರ ಸಹೋದರ ಶೋವಿಕ್ ಚಕ್ರವರ್ತಿ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ.

ಮಿರಾಂದಾ ಹಾಗೂ ಶೋವಿಕ್ ಸುಶಾಂತ್ ಸಾವಿನ ಪ್ರಕರಣದಲ್ಲಿ ಭಾಗಿಯಾಗಿದ್ರಾ ಜೊತೆಗೆ ಡ್ರಗ್ಸ್ ಮಾಫಿಯಾದಲ್ಲಿ ರಿಯಾ ಚಕ್ರವರ್ತಿಯ ಜೊತೆಗೆ ಕೈಜೋಡಿಸಿದ್ರಾ ಅನ್ನುವ ಹಿನ್ನೆಲೆಯಲ್ಲಿ ಸಾಕ್ಷಿಯನ್ನು ಕಲೆಹಾಕುತ್ತಿರುವ ಎನ್ ಸಿಬಿ ಅಧಿಕಾರಿಗಳು ಮುಂಬೈ ಪೊಲೀಸರ ಸಹಕಾರದೊಂದಿಗೆ ಈ ದಾಳಿಯನ್ನು ನಡೆಸಿದ್ದು, ಮುಂಬೈನ ಹಲವರ ಮನೆಗಳ ಮೇಲೆ ಈ ದಾಳಿ ಮುಂದುವರಿಯುವ ಸಾಧ್ಯತೆಯಿದೆ.