ಕೊರೊನಾ ಹಿನ್ನೆಲೆ ಅತಂತ್ರವಾದ ನಾಡಹಬ್ಬ ಆಚರಣೆ : ಸೆ. 8ರಂದು ನಡೆಯುತ್ತೆ ದಸರಾ ಉನ್ನತಮಟ್ಟದ ಸಭೆ

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಇದೀಗ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೇಲೆ ಬಿದ್ದಿದೆ. ಈ ಬಾರಿ ನಾಡಹಬ್ಬ ದಸರಾ ನಡೆಯುತ್ತೋ ಇಲ್ಲವೋ ಅನ್ನೋ ಗೊಂದಲ ಏರ್ಪಟ್ಟಿದೆ. ಈ ನಡುವಲ್ಲೇ ದಸರಾ ಉನ್ನತ ಮಟ್ಟದ ಸಭೆ ಸಪ್ಟೆಂಬರ್ 8ಕ್ಜೆ ನಿಗದಿಯಾಗಿದೆ.

ವರ್ಷಂಪ್ರತಿ ಮೈಸೂರು ದಸರಾ ಮಹೋತ್ಸವವನ್ನು ನಾಡಹಬ್ಬವಾಗಿ ಬಹು ಅದ್ದೂರಿಯಿಂದ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ನಾಡ ಹಬ್ಬಕ್ಕೆ ಕೊರೊನಾ ಕರಿನೆರಳು ಚಾಚಿದೆ. ದಸರಾ ಮಹೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಬೇಕೆ ಅಥವಾ ಸಾಂಪ್ರದಾಯಿಕ ವಾಗಿ ಅಚರಿಸಬೇಕೆ ಎನ್ನುವ ಕುರಿತು ಗೊಂದಲ ಏರ್ಪಟ್ಟಿದೆ.

ಈ ಬಾರಿಯ ದಸರಾ ಮಹೋತ್ಸವಕ್ಕೆ ಸಿದ್ದತೆ ನಡೆಸಿರುವ ಮೈಸೂರು ಜಿಲ್ಲಾಡಳಿತ ಯಾವ ರೀತಿಯಲ್ಲಿ ದಸರಾ ಮಹೋತ್ಸವ ಆಚರಿಸಬೇಕೆಂಬ ಗೊಂದಲದಲ್ಲಿದೆ.

ಇನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿಯನ್ನು ಅರಮನೆಯ ಒಳಗೆ ಮೆರವಣಿಗೆಗೆ ಸೀಮಿತಗೊಳಿಸಬೇಕೆ. ದಸರಾ ಮಹೋತ್ಸವಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಬೇಕೆ ? ದಸರಾ ಉದ್ಘಾಟನೆ ಮತ್ತು ಜಂಬೂ ಸವಾರಿ ಹೇಗೆ ಮಾಡಬೇಕು ? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿವೆ.

ಈ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌದದಲ್ಲಿ ಸಪ್ಟೆಂಬರ್ 8ರಂದು ದಸರಾ ಉನ್ನತ ಮಟ್ಟ ಸಭೆಯನ್ನು ಕರೆಯಲಾಗಿದೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಚಾಮರಾಜನಗರ ನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ.

ಅಲ್ಲದೇ ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು, ಮೈಸೂರು ಮೇಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಲಿ ದ್ದಾರೆ.

ದಸರಾ ಆಚರಣೆಯ ಕುರಿತು ಈಗಾಗಲೇ ಮೈಸೂರು ಜಿಲ್ಲಾಡಳಿತ ಹಲವು ಪ್ಲ್ಯಾನ್ ಗಳನ್ನು ಮಾಡಿಕೊಂಡಿದ್ದು, ಆ ಪ್ಲ್ಯಾನ್ ಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

Leave A Reply

Your email address will not be published.