Vivo X300s Launch: 7100mAh ಬ್ಯಾಟರಿ, 200MP ಕ್ಯಾಮೆರಾ! ವಿವೋನ ಈ ಹೊಸ ಫೋನ್ ವೈಶಿಷ್ಟ್ಯ ಕೇಳಿದರೆ ಬೆರಗಾಗ್ತೀರಾ
ಮೆಗಾ ಇವೆಂಟ್‌ನಲ್ಲಿ Vivo X300s, X300 Ultra ಮತ್ತು Vivo Pad 6 Pro ಸಾಧನಗಳನ್ನು ಅಧಿಕೃತವಾಗಿ ಅನಾವರಣಗೊಳಿಸುತ್ತಿದೆ. ಈ ಪೈಕಿ 'ವಿವೋ X300s' ತನ್ನ ದೈತ್ಯ ಬ್ಯಾಟರಿ ಮತ್ತು ಅದ್ಭುತ ಕ್ಯಾಮೆರಾ ಫೀಚರ್‌ಗಳಿಂದಾಗಿ ಟೆಕ್ ಜಗತ್ತಿನ ಗಮನ ಸೆಳೆದಿದೆ.

vivo x300s : ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಿವೋ (Vivo) ಕಂಪನಿ ಇಂದು ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ಚೀನಾದಲ್ಲಿ ಇಂದು ನಡೆಯಲಿರುವ ಮೆಗಾ ಇವೆಂಟ್‌ನಲ್ಲಿ Vivo X300s, X300 Ultra ಮತ್ತು Vivo Pad 6 Pro ಸಾಧನಗಳನ್ನು ಅಧಿಕೃತವಾಗಿ ಅನಾವರಣಗೊಳಿಸುತ್ತಿದೆ. ಈ ಪೈಕಿ ‘ವಿವೋ X300s’ ತನ್ನ ದೈತ್ಯ ಬ್ಯಾಟರಿ ಮತ್ತು ಅದ್ಭುತ ಕ್ಯಾಮೆರಾ ಫೀಚರ್‌ಗಳಿಂದಾಗಿ ಟೆಕ್ ಜಗತ್ತಿನ ಗಮನ ಸೆಳೆದಿದೆ.
ದೈತ್ಯ ಬ್ಯಾಟರಿ ಮತ್ತು ಫಾಸ್ಟ್ ಪರ್ಫಾರ್ಮೆನ್ಸ್
ಈ ಫೋನ್‌ನ ಪ್ರಮುಖ ಆಕರ್ಷಣೆಯೇ ಇದರ 7100mAh ಸಾಮರ್ಥ್ಯದ ಬೃಹತ್ ಬ್ಯಾಟರಿ. ದೀರ್ಘಕಾಲದವರೆಗೆ ಫೋನ್ ಬಳಸುವವರಿಗೆ ಇದು ವರದಾನವಾಗಲಿದೆ. ಕಾರ್ಯಕ್ಷಮತೆಗಾಗಿ ಇದರಲ್ಲಿ ಅತ್ಯಾಧುನಿಕ MediaTek Dimensity 9500 ಚಿಪ್‌ಸೆಟ್ ಬಳಸಲಾಗಿದ್ದು, ವಿವೋನ ಸ್ವಂತ V3+ ಇಮೇಜಿಂಗ್ ಚಿಪ್ ಕೂಡ ಇದೆ. ಇದು ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಅಪ್ರತಿಮ ವೇಗ ನೀಡುತ್ತದೆ.
ಫೋಟೋಗ್ರಫಿ ಪ್ರಿಯರಿಗೆ ಹಬ್ಬ!
ಕ್ಯಾಮೆರಾ ವಿಚಾರದಲ್ಲಿ ವಿವೋ ಈ ಬಾರಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
- ರಿಯರ್ ಕ್ಯಾಮೆರಾ: 200MP ಪ್ರಾಥಮಿಕ ಸೆನ್ಸರ್ (OIS ಸೌಲಭ್ಯದೊಂದಿಗೆ), 50MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50MP ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿದೆ.
- ಸೆಲ್ಫಿ ಕ್ಯಾಮೆರಾ: ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದ್ದು, ವಿಡಿಯೋ ಕಾಲ್ ಮತ್ತು ಸೆಲ್ಫಿಗಳಿಗೆ ಇದು ಅತ್ಯುತ್ತಮವಾಗಿದೆ.
ಡಿಸ್‌ಪ್ಲೇ ಮತ್ತು ಇತರ ಫೀಚರ್ಸ್
- ಡಿಸ್‌ಪ್ಲೇ: 6.78-ಇಂಚಿನ ಫ್ಲಾಟ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದು ಝೈಸ್ (Zeiss) ಕಲರ್ ಟೆಕ್ನಾಲಜಿಯಿಂದ ಕೂಡಿದೆ.
- ಕೂಲಿಂಗ್ ಸಿಸ್ಟಮ್: ಫೋನ್ ಬಿಸಿಯಾಗದಂತೆ ತಡೆಯಲು ಇದರಲ್ಲಿ ‘ವಿಸಿ ಲಿಕ್ವಿಡ್ ಕೂಲಿಂಗ್’ (VC Liquid Cooling) ತಂತ್ರಜ್ಞಾನ ಅಳವಡಿಸಲಾಗಿದೆ.
- ಆಡಿಯೋ: ಸಿನಿಮಾ ಮಾದರಿಯ ಅನುಭವಕ್ಕಾಗಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳನ್ನು ನೀಡಲಾಗಿದೆ.
ಬ್ಯಾಟರಿ ಬಾಳಿಕೆ, ಅದ್ಭುತ ಫೋಟೋಗ್ರಫಿ ಮತ್ತು ವೇಗದ ಪ್ರೊಸೆಸರ್ ಬಯಸುವವರಿಗೆ Vivo X300s 2026ರ ಅತ್ಯುತ್ತಮ ಫ್ಲ್ಯಾಗ್‌ಶಿಪ್ ಫೋನ್ ಎನಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
vivo x300s launch today specs price 7100mah battery 200mp camera



