ಅಕ್ರಮ ಮದ್ದು ಮಾರಾಟಕ್ಕೆ ಅಂಕುಶ..! ವೈದ್ಯರ ಚೀಟಿಯಿಲ್ಲದೇ ಔಷಧಿ ನೀಡಿದ್ರೆ ಮೆಡಿಕಲ್​ ಶಾಪ್​ ಲೈಸೆನ್ಸ್​ ರದ್ದು

ತೂಕ ಇಳಿಕೆ ಎನ್ನುವುದು ಕಷ್ಟ ಸಾಧ್ಯವಾಗುವಂತಹ ಕೆಲಸ. ಇದಕ್ಕೆ ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಶೈಲಿ, ಬಾಯಿ ಚಪಲದ ನಿಯಂತ್ರಣ ಹೀಗೆ ನಾನಾ ಮಾರ್ಗಗಳಿವೆ. ಈ ಎಲ್ಲಾ ಮಾರ್ಗಗಳಲ್ಲಿ ಯಶಸ್ಸು ಕಂಡ ಬಳಿಕ ಮಾತ್ರ ತೂಕ ಇಳಿಕೆ ಸಾಧ್ಯ. ಆದರೆ ಅನೇಕರು ತೂಕ ಇಳಿಕೆಗೆ ಅಡ್ಡದಾರಿಯನ್ನು ಕಂಡುಕೊಂಡಿದ್ದು ಹಾರ್ಮೋನ್​ ನಿಯಂತ್ರಿಸುವ ಮಾತ್ರೆಯ (Weight Loss Medicine) ಸೇವನೆ ಮೂಲಕ ತ್ವರಿತ ತೂಕ ಇಳಿಕೆಯ ಮಾರ್ಗ ಕಂಡುಕೊಂಡಿದ್ದಾರೆ. ಅನೇಕ ಮೆಡಿಕಲ್​ಗಳಲ್ಲಿ ಇಂತಹ ಮಾತ್ರೆ ಲಭ್ಯವಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದೀಗ ಅಕ್ರಮ ತೂಕ ನಿಯಂತ್ರಣ ಔಷಧಿಗಳಿಗೆ ಲಗಾಮು ಹಾಕಲು ಮುಂದಾಗಿದೆ.

ಹಾರ್ಮೋನ್ ಆಧಾರಿತ ಔಷಧಿಗಳಾದ GLP-1 ರಿಸೆಪ್ಟರ್ ಅಗೋನಿಸ್ಟ್‌ಗಳ ಬಳಕೆ ಎಲ್ಲೆಂದರಲ್ಲಿ ಹೆಚ್ಚಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ಔಷಧ ನಿಯಂತ್ರಣ ಮಂಡಳಿ ಇದರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ವೈದ್ಯರ ಚೀಟಿ ಇಲ್ಲದೇ ಔಷಧಿಗಳನ್ನು ಮಾರಾಟ ಮಾಡಿದಲ್ಲಿ ಅಂತಹ ಮೆಡಿಕಲ್​ ಶಾಪ್​ಗಳ ಲೈಸೆನ್ಸ್​ ರದ್ದುಗೊಳಿಸಲು ನಿರ್ಧರಿಸಲಾಗಿದೆ.

ತ್ವರಿತ ತೂಕ ಇಳಿಕೆ ಎಂಬ ಜಾಹೀರಾತುಗಳನ್ನು ನೀಡಿ ಜನರನ್ನು ತೂಕ ಇಳಿಕೆಯ ಔಷಧಿ ಸೇವಿಸುವಂತೆ ಪ್ರೇರೇಪಿಸುವ ಜಾಹಿರಾತುಗಳ ಪ್ರದರ್ಶನಕ್ಕೂ ಕಡಿವಾಣ ಹಾಕಲಾಗಿದೆ. ವೈದ್ಯರು ಸೂಚನೆ ನೀಡದ ವಿನಃ ಯಾವುದೇ ಮೆಡಿಕಲ್ ಶಾಪ್‌ಗಳು, ಆನ್‌ಲೈನ್ ಫಾರ್ಮಸಿಗಳು ಮತ್ತು ಕ್ಲಿನಿಕ್‌ಗಳಲ್ಲಿ ಹಾರ್ಮೋನ್​ ಆಧಾರಿತ ತೂಕ ಇಳಿಕೆಯ ಯಾವುದೇ ಔಷಧಿಗಳನ್ನು ನೀಡುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಇಂತಹ ಔಷಧಿಗಳ ಅಕ್ರಮ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಲ್ಲಿ, ಕ್ರಿಮಿನಲ್​ ಮೊಕ್ಕದ್ದಮೆಯನ್ನು ಹೂಡುವುದರ ಜೊತೆಯಲ್ಲಿ ಪರವಾನಿಗೆ ರದ್ದು ಹಾಗೂ ಭಾರೀ ಮೊತ್ತದ ದಂಡ ಕೂಡ ವಿಧಿಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಖಡಕ್​ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಹೃದಯ ಜೋಪಾನ..! ಹದಿಹರೆಯದವರಲ್ಲಿ ಹೃದಯಾಘಾತ ಹಿಂದಿನ ಅಸಲಿ ಕಾರಣ ಬಯಲು

ಮಧುಮೇಹ ತಜ್ಞರು ಹಾಗೂ ಹೃದ್ರೋಗ ತಜ್ಞರ ಶಿಫಾರಸ್ಸಿನ ಮೇಲೆ ಸೆಮಾಗ್ಲುಟೈಡ್ನಂತಹ ಔಷಧಿಗಳನ್ನು ಗ್ರಾಹಕರಿಗೆ ನೀಡಬಹುದಾಗಿದೆ. ಆದರೆ ಸ್ವಯಂ ಚಿಕಿತ್ಸೆಗಾಗಿ ಮೆಡಿಕಲ್​ಗಳಲ್ಲಿ ಬೇಡಿಕೆಯಿಡುವ ಗ್ರಾಹಕರಿಗೆ ಇಂತಹ ಔಷಧಿಗಳನ್ನು ವಿತರಿಸುವುದು ಕಾನೂನು ಬಾಹಿರ ಕ್ರಮ ಆಗಿರಲಿದೆ. ಹೀಗಾಗಿ ಇನ್ಮೇಲೆ ತೂಕ ಇಳಿಕೆಯ ಔಷಧಿ ಖರೀದಿ ಮಾಡುವ ಮುನ್ನ ಗ್ರಾಹಕರು ಹಾಗೂ ಅಕ್ರಮವಾಗಿ ಇಂತಹ ಔಷಧಿಗಳನ್ನು ಮಾರಾಟ ಮಾಡುವ ಮೆಡಿಕಲ್​ ಶಾಪ್​​ ಮಾಲೀಕರು ಎಚ್ಚರಿಕೆಯಿಂದಿರುವುದು ಉತ್ತಮ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories