ಡೇಟಿಂಗ್​ ಆ್ಯಪ್​ ಬಳಸುವವರೇ ಎಚ್ಚರ ..ಎಚ್ಚರ..! ಮದುವೆಯಾಗುವುದಾಗಿ ನಂಬಿಸಿ ಟೆಕ್ಕಿಂಗ್​ ಪಂಗನಾಮ

ಇತ್ತೀಚಿನ ದಿನಗಳಲ್ಲಿ ಡೇಟಿಂಗ್​ ಆ್ಯಪ್​ಗಳನ್ನು ಬಳಕೆ ಮಾಡುವ ಯುವ ಸಮೂಹದ ಸಂಖ್ಯೆ ಹೆಚ್ಚುತ್ತಿದೆ. ಆದರೆ ಈ ಡೇಟಿಂಗ್​ ಆ್ಯಪ್​ಗಳಲ್ಲಿಯೂ (Dating apps crime) ಸೈಬರ್​ ವಂಚಕರು ಸಕ್ರಿಯರಾಗಿದ್ದು ಮೋಸದ ಜಾಲಕ್ಕೆ ಅಮಾಯಕರನ್ನು ಬೀಳಿಸುತ್ತಿದ್ದಾರೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಇಂತಹದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು , ಡೇಟಿಂಗ್​ ಆ್ಯಪ್​ನಲ್ಲಿ ಮದುವೆಯಾಗುತ್ತೇನೆಂದು ನಂಬಿಸಿದ ಮಹಿಳೆಯು ಟೆಕ್ಕಿಯೊಬ್ಬರಿಂದ 18 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿ ಕಣ್ಮರೆಯಾಗಿದ್ದಾಳೆ..!

ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್​ ಕ್ರೈಂ ಠಾಣೆಯಲ್ಲಿ ಈ ಸಂಬಂಧ ಪ್ರಕರಣದ ದಾಖಲಾಗಿದೆ. ಡೇಟಿಂಗ್​ ಆ್ಯಪ್​ ಬಳಕೆ ಮಾಡುತ್ತಿದ್ದ ಯುವ ಇಂಜಿನಿಯರ್​ ಒಬ್ಬರನ್ನು ಈ ಮಹಿಳೆ ಪರಿಚಯ ಮಾಡಿಕೊಂಡಿದ್ದಳು ಎನ್ನಲಾಗಿದೆ. ಈ ಪರಿಚಯ ಸ್ನೇಹಕ್ಕೆ ತಿರುಗಿ ಬಳಿಕ ಮದುವೆಯ ಹಂತದವರೆಗೂ ಮಾತುಕತೆಯಾಗಿತ್ತು. ತನ್ನನ್ನು ತಾನು ಇನ್ವೆಸ್ಟ್​ಮೆಂಟ್​ ಎಕ್ಸ್​ಪರ್ಟ್ ಎಂದು ಪರಿಚಯಿಸಿಕೊಂಡಿದ್ದ ವಂಚಕಿ, ಕ್ರಿಪ್ರೋ ಕರೆನ್ಸಿ, ಟ್ರೇಡಿಂಗ್​ಗಳ ಮೂಲಕ ಹಣ ದ್ವಿಗುಣ ಮಾಡುವ ಚಾಕಚಕ್ಯತೆ ನನ್ನಲ್ಲಿದೆ ಎಂದು ಹೇಳಿಕೊಂಡಿದ್ದಳು.

ಇದನ್ನೂ ಓದಿ: ಉಡುಪಿ : ಟ್ರೆಡಿಂಗ್ ಆ್ಯಪ್ ಹೆಸರಿನಲ್ಲಿ 11.75 ಲಕ್ಷ ರೂಪಾಯಿ ವಂಚನೆ

ವಂಚಕಿಯ ಮಾತನ್ನು ನಂಬಿದ್ದ ಇಂಜಿನಿಯರ್​ ತಾನು ಕೂಡ ಕೋಟ್ಯಾಧಿಪತಿಯಾಗಬಹುದೆಂಬ ಕನಸು ಕಂಡಿದ್ದರು. ಆಕೆಯ ಮಾತಿನಂತೆ ತನ್ನ ಬ್ಯಾಂಕ್​ ಖಾತೆಯಿಂದ ಆಕೆಗೆ 18.25 ಲಕ್ಷ ರೂಪಾಯಿಗಳನ್ನು ಹಂತ ಹಂತವಾಗಿ ಟೆಕ್ಕಿ ನೀಡಿದ್ದರು ಎನ್ನಲಾಗಿದೆ. ಹಣ ಪಡೆದುಕೊಂಡ ಬಳಿಕ ವಂಚಕಿಯು ತನ್ನ ವರಸೆ ಬದಲಾಯಿಸಿದ್ದಾಳೆ. ಲಾಬಾಂಶ ಹಾಗಿರಲಿ , ಕೊಟ್ಟ ಹಣ ಮರಳಿ ಕೊಡು ಎನ್ನುವಾಗಲೂ ಆಕೆ ನುಣುಚಿಕೊಳ್ಳಲು ಆರಂಭಿಸಿದ್ದಾಳೆ.ಕೊನೆಗೊಂದು ದಿನ ಟೆಕ್ಕಿಯ ನಂಬರ್​ನ್ನೇ ಡಿಲೀಟ್​ ಮಾಡಿ ಎಸ್ಕೇಪ್​ ಆಗಿದ್ದಾಳೆ.

ಈ ಸಂಬಂಧ ಸೈಬರ್ ಠಾಣೆಯಲ್ಲಿ ಟೆಕ್ಕಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಮಹಿಳೆಯ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಡೇಟಿಂಗ್​ ಆ್ಯಪ್​ಗಳಲ್ಲಿ ಸಿಗುವವರನ್ನು ನಂಬಿ ಈ ರೀತಿ ಮೋಸ ಹೋಗಬೇಡಿ. ಆರ್ಥಿಕ ಸಲಹೆ ನೀಡುವವರ ಬಗ್ಗೆ ಜಾಗೂರಕರಾಗಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories