
ಕಾರವಾರ : ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆಯಲ್ಲಿ ಯಾಂಕ್ರೀಕೃತ ಮೀನುಗಾರಿಕಾ ಬೋಟ್ ವೊಂದು ಮುಳುಗಡೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.

ಮೀನುಗಾರ ಸುನಿಲ್ ಎಂಬವರಿಗೆ ಸೇರಿದ ಸೈಂಟ್ ಅಂತೋನಿ ಹೆಸರಿನ ಬೋಟ್ ಬೆಳಗ್ಗೆ ಮೀನುಗಾರಿಕೆಗೆ ತೆರಳುತ್ತಿರುವ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.

ಸಮುದ್ರದ ಅಲೆಗಳ ಅಬ್ಬರಿಂದಲೇ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ದುರಂತ ನಡೆಯುತ್ತಿದ್ದಂತೆಯೇ ಬೋಟ್ ನಲ್ಲಿ ಸುಮಾರು 25 ಮಂದಿ ಮೀನುಗಾರರನ್ನು ಇತರ ಬೋಟಿನಲ್ಲಿದ್ದ ಮೀನುಗಾರರು ರಕ್ಷಣೆಯನ್ನು ಮಾಡಿದ್ದಾರೆ.

ಇದೀಗ ಅಳಿವೆಯಲ್ಲಿ ಮುಳುಗಡೆಯಾಗಿರುವ ಬೋಟ್ ಮೇಲಕ್ಕೆತ್ತಲು ಹರಸಾಹಸ ಪಡಲಾಗುತ್ತಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಹೊನ್ನಾವರ ಸಮುದ್ರದ ಅಳಿವೆಯಲ್ಲಿ ಕಳೆದ ದಶಕಗಲಿಂದ ಹೂಳು ತುಂಬಿದ್ದರಿಂದಲೇ ಕಳದದೊಂದು ದಶಕಗಳಿಂದಲೂ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿವೆ.

ಹೂಳು ತೆರವು ಮಾಡುವ ಕುರಿತು ಈಗಾಗಲೇ ಮೀನುಗಾರರು ಸಾಕಷ್ಟು ಬಾರಿ ಸರಕಾರಕ್ಕೆ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.