ಕಳೆದೆ 2 ತಿಂಗಳಲ್ಲಿ ದೇಶದಲ್ಲಿ ನಾಪತ್ತೆಯಾದ್ರು 1.48 ಕೋಟಿ ಮೊಬೈಲ್ ಬಳಕೆದಾರರು ! ಕಾರಣವಾದ್ರೂ ಏನು ಗೊತ್ತಾ ?

0

ನವದೆಹಲಿ : ತಂತ್ರಜ್ಞಾನ ಬೆಳೆಯುತ್ತಿದ್ದಂತೆಯೇ ಮೊಬೈಲ್ ಬಳಕೆದಾರರ ಸಂಖ್ಯೆಯೂ ಹೆಚ್ಚುತ್ತಿದೆ. ಹಳ್ಳಿ ಹಳ್ಳಿಯಲ್ಲಿಯೂ ಜನರು ಸ್ಮಾರ್ಟ್ ಪೋನ್ ಬಳಕೆ ಮಾಡುವಷ್ಟರ ಮಟ್ಟಿಗೆ ಮುಂದುವರಿದಿದ್ದಾರೆ. ಆದ್ರೀಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದ್ದು ದೇಶದಲ್ಲಿ ಬರೋಬ್ಬರಿ 1.38 ಕೋಟಿ ಮೊಬೈಲ್ ಬಳಕೆದಾರರೇ ಇದೀಗ ನಾಪತ್ತೆಯಾಗಿದ್ದಾರೆ !

ಹೌದು, ದೇಶದಲ್ಲಿ ಮೊಬೈಲ್ ಬಳಕೆದಾರರ ಕುರಿತು ಸಂಶೋಧನೆ ಹಾಗೂ ಸಮೀಕ್ಷಾ ಸಂಸ್ಥೆಯೊಂದು ಸಮೀಕ್ಷೆಯೊಂದನ್ನು ನಡೆಸಿದೆ. ಈ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮೊಬೈಲ್ ಫೋನ್ ಬಳಕಕೆದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ.

ಕಳೆದೆರಡು ಎರಡು ತಿಂಗಳ ಅವಧಿಯಲ್ಲಿ ಅಂದಾಜು 1.48 ಕೋಟಿ ಬಳಕೆದಾರರು ಕಡಿಮೆಯಾಗಿದ್ದಾರೆ. ಅದ್ರಲ್ಲೂ ದೇಶದಲ್ಲಿ ಮೊಬೈಲ್ ಹಾಗೂ ಲ್ಯಾಂಡ್ಲೈನ್ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದೆ ಎಂದು ವರದಿ ಹೇಳುತ್ತಿದೆ.

ಕಳೆದ ಕೆಲ ತಿಂಗಳಿನಿಂದಲೂ ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಮುಖವನ್ನು ಕಾಣುತ್ತಿದೆ. 2020ರ ಎಪ್ರೀಲ್ ತಿಂಗಳಿನಲ್ಲಿ 82 ಲಕ್ಷ ಬಳಕೆದಾರರು ಕಡಿಮೆಯಾಗಿದ್ದರೆ, ಮೇ ತಿಂಗಳಲ್ಲಿ 56 ಲಕ್ಷ ಬಳಕೆದಾರರ ಸಂಖ್ಯೆ ಕಡಿಮೆಯಾಗಿದೆ. ಅದ್ರಲ್ಲೂ ಕಳೆದೆರಡು ತಿಂಗಳ ಅವಧಿಯಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯನ್ನು ಕಂಡಿದೆ.

ದೇಶದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯನ್ನು ಕಾಣಲು ಕಾರಣವಾಗಿರೋದು ಕೊರೊನಾ ವೈರಸ್ ಮಹಾಮಾರಿ. ಕೊರೊನಾ ಮಹಾಮಾರಿ ಇದೀಗ ಟೆಲಿಕಾಂ ಕ್ಷೇತ್ರದ ಮೇಲೆ ಭಾರಿ ಪ್ರಮಾಣದಲ್ಲಿಯೇ ಹೊಡೆತವನ್ನು ಕೊಟ್ಟಿದೆ.

ಮೊಬೈಲ್ ಬಳಕೆದಾರರು ಮಾತ್ರವಲ್ಲ ಇಂಟರ್ನೆಟ್, ವೈರ್ಲೆಸ್ ಇಂಟರ್ನೆಟ್ ಬಳಕೆದಾರರ ಸಂಖ್ಯೆಯೂ ಇಳಿಕೆಯನ್ನು ಕಂಡಿದ್ದು, ಲಾಕ್ ಡೌನ್ ಅವಧಿಗೆ ಹೋಲಿಕೆ ಮಾಡಿದ್ರೆ ತದನಂತರದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯನ್ನು ಕಾಣುತ್ತಿದೆ.

ಕೊರೊನಾ ವೈರಸ್ ಸೋಂಕಿನಿಂದಾಗಿ ಕೋಟ್ಯಾಂತರ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ನಗರದ ಪ್ರದೇಶದಲ್ಲಿ ಉಳಿದುಕೊಂಡಿದ್ದ ಜನರು ಉದ್ಯೋಗ ಕಡಿತವಾಗುತ್ತಲೇ ತಮ್ಮೂರಿನತ್ತ ತೆರಳಿದ್ದಾರೆ.

ಉದ್ಯೋಗ ಕಡಿ, ಆದಾಯವಿಲ್ಲದೇ ಜನರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದ್ದಾರೆ ಎನ್ನುತ್ತಿದೆ ಭಾರತೀಯ ಸಂಶೋಧನೆ ಮತ್ತು ಸಮೀಕ್ಷಾ ಸಂಸ್ಥೆಯ ವರದಿ. ಇನ್ನು ಸಮೀಕ್ಷಾ ವರದಿ ನೀಡಿರುವ ವರದಿಯನ್ನು ದೂರ ಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್) ಕೂಡ ಪುಷ್ಠೀಕರಿಸಿದೆ.

ಒಟ್ಟಿನಲ್ಲಿ ಕೊರೊನಾ ಅನ್ನೋ ಹೆಮ್ಮಾರಿ ದೇಶದ ಆರ್ಥಿಕತೆಯ ಮೇಲೆ ಪರಿಣಾಮವನ್ನುಂಟು ಮಾಡಿರುವುದು ಮಾತ್ರವಲ್ಲ ಜನರ ಬದುಕಿಗೂ ಕೊಳ್ಳಿಯೇಟುಕೊಟ್ಟಿದೆ.

Leave A Reply

Your email address will not be published.