ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ಸರ್ಜಾ ಮನೆಗೆ ಚಿತ್ರರಂಗದ ತಾರೆಯರು ಆಗಮಿಸಿದ್ರು. ಮಸಾಲೆ ದೋಸೆ ಸವಿಯುತ್ತಾ, ಗರ್ಭಿಣಿ ಮೇಘನಾ ಅವರ ಕುಲಶೋಪಚರಿಯನ್ನು ವಿಚಾರಿಸಿದ್ರು.

ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್ ಸರ್ಜಾ ತವರು ಮನೆಯಲ್ಲಿದ್ದಾರೆ. ಮೇಘನಾ ತಂದೆ ಹಿರಿಯ ನಟ ಸುಂದರ್ ರಾಜ್ ಹಾಗೂ ತಾಯಿ ಪ್ರಮಿಳಾ ಅವರು ಮಗಳ ಆರೋಗ್ಯ ಕಾಳಜಿ ಮಾಡುತ್ತಿದ್ದಾರೆ.

ಇದೀಗ ಹಿರಿಯ ನಟಿಯರಾದ ಶ್ರುತಿ, ಸುಧಾರಾಣಿ, ಮಾಳವಿಕಾ ಹಾಗೂ ಶ್ರುತಿ ಅವರ ಪುತ್ರಿ ಮಿಲಿ ಅವರು ಭೇಟಿ ಕೊಟ್ಟು ಹಲವು ಗಂಟೆಗಳ ಕಾಲ ಮಾತುಕತೆ, ಹರಟೆಯಲ್ಲಿ ಕಾಲ ಕಳೆದಿದ್ದಾರೆ. ಹಿರಿಯ ನಟಿಯರ ಭೇಟಿಯ ಪೋಟೊಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಮೇಘನಾ ರಾಜ್ ಮನೆಗೆ ಭೇಟಿಕೊಟ್ಟಿರುವ ಕುರಿತು ಮಾಳವಿಕಾ ಅವಿನಾಶ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮೇಘನಾ ರಾಜ್ ಅವರ ಮನೆಯಲ್ಲಿ ಕಳೆದ ಸುಂದರ ಕ್ಷಣಗಳ ಪೋಟೊಗಳನ್ನು ಅಪ್ ಲೋಡ್ ಮಾಡಿರುವ ಮಾಳವಿಕ ಅವರು ನಾನು ಬಾಲ ನಟಿಯಾಗಿದ್ದಾಗಿನಿಂದ ಸುಂದರ್ ರಾಜ್ ಅವರನ್ನು ಬಲ್ಲೆ. ನಾವಿಬ್ಬರೂ ಪ್ರತ್ಯೇಕವಾಗಿ ಹಾಗೂ ಒಟ್ಟಿಗೆ ಚಲನಚಿತ್ರ ಭ್ರಾತೃತ್ವದಲ್ಲಿ ತುಂಬಾ ಪ್ರಯಾಣಿಸಿದ್ದೇವೆ ಎಂದು ಹೇಳಿದ್ದಾರೆ.