ನಿತ್ಯಭವಿಷ್ಯ :13-09-2020

ಮೇಷರಾಶಿ
ಮಿತ್ರರಿಂದ ಸಹಾಯ, ದಾಂಪತ್ಯದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲವನ್ನು ಮುಂದುವರಿಸಿದ್ದಲ್ಲಿ ಉತ್ತಮ ಫ‌ಲಿತಾಂಶ ಪಡೆಯಲಿದ್ದಾರೆ. ಕಿರು ಸಂಚಾರ ವಿರುವುದು.ಧರ್ಮಕಾರ್ಯ ಶಕ್ತಿ, ಹಿರಿಯರಿಂದ ಹಿತವಚನ, ಹಣಕಾಸು ಪರಿಸ್ಥಿತಿ ಉತ್ತಮ, ಉತ್ತಮ ಅವಕಾಶ, ದುಷ್ಟರಿಂದ ದೂರವಿರಿ.

ವೃಷಭರಾಶಿ
ಆಯುಷ್ಯಕಾರಕನಾದ ಶನಿಯು ನಿಮಗೆ ರಕ್ಷಣೆ ನೀಡಲಿದ್ದಾನೆ. ದೇಹಾರೋಗ್ಯದಲ್ಲಿ ಏರುಪೇರು ಕಂಡು ಬಂದರೂ ಪುನಃಹ ಸರಿಯಾಗಿ ಎದ್ದೇಳುವಿರಿ. ವೈವಾಹಿಕ ಪ್ರಸ್ತಾವಗಳು ಕೂಡಿ ಬಂದು ಕಂಕಣಬಲ ಪ್ರಾಪ್ತಿಯಾದೀತು. ಶುಭವಿದೆ, ಮಾತಾಪಿತರಲ್ಲಿ ವಾತ್ಸಲ್ಯ ಧೈರ್ಯದಿಂದ ಮುನ್ನುಗ್ಗುವಿರಿ, ಪತ್ನಿಗೆ ಅನಾರೋಗ್ಯ, ಆದಾಯಕ್ಕಿಂತ ಖರ್ಚು ಜಾಸ್ತಿ ಶತ್ರು ಬಾಧೆ.

ಮಿಥುನರಾಶಿ
ಉದ್ಯೋಗ ಪ್ರಾಪ್ತಿ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ ವಾಹನ ಯೋಗ ದ್ರವ್ಯಲಾಭ, ದೈನಂದಿನ ವ್ಯವಚರಿಯಲ್ಲಿ ಏನೂ ಹೆಚ್ಚು ಕಮ್ಮಿಯಾಗದೆ ಸುಖದಲ್ಲೇ ಕಳೆದು ಹೋಗ ಲಿದೆ. ದಾಯಾದಿಗಳಿಂದ ಕಿರುಕುಳ ಕೂಡಿ ಬಂದೀತು. ನೆರೆಹೊರೆಯವ ರೊಂದಿಗೆ ಸ್ನೇಹಪರ ನಡತೆ ಇದ್ದೀತು. ಸಹಕಾರ ನೀಡಲಿರುವರು, ಮಂಗಳ ಕಾರ್ಯಗಳಲ್ಲಿ ಭಾಗಿ, ಗುರು ಹಿರಿಯರಲ್ಲಿ ಭಕ್ತಿ ಋಣಭಾದೆ ಅಕಾಲ ಭೋಜನ.

ಕಟಕರಾಶಿ
ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಸಾಲ ಮರುಪಾವತಿ, ಆಪ್ತರಿಂದ ತೊಂದರೆ, ಹಿತಶತ್ರುಗಳ ಕಾಟದಿಂದ ರೋಸಿ ಹೋದಿರಿ. ಜಾಗ್ರತೆ ಮಾಡಿರಿ. ನಯವಂಚಕರಿಂದಲೇ ಹಾನಿಗೊಳ ಗಾಗುವ ಪರಿಸ್ಥಿತಿ ಕಂಡು ಬರಲಿದೆ. ಮೋಡಿಯಿಂದ ಮರುಳಾಗಿ ಮೋಹ ಹೋಗದಿರಿ. ಪತಿಯ ಆಸೆಗೆ ಸಂಪೂರ್ಣ ಸಹಕಾರ ನೀಡಿರಿ, ಅನಾರೋಗ್ಯ, ಶತ್ರು ಬಾಧೆ, ಶ್ರಮಕ್ಕೆ ತಕ್ಕ ಫಲ, ಇತರರನ್ನು ನಿಂದಿಸುವಿರಿ, ಉದ್ವೇಗಕ್ಕೆ ಒಳಗಾಗುವಿರಿ.

ಸಿಂಹರಾಶಿ
ಅಧಿಕ ತಿರುಗಾಟ, ಹಣದ ವಿಷಯದಲ್ಲಿ ನಂಬಿಕೆದ್ರೋಹ ಸಾಧ್ಯತೆ, ಮನಕ್ಲೇಷ, ಚಿನ್ನದಂತಹ ಪತ್ನಿಯಿಂದ ನಿಮಗೆ ಸಹಕಾರ ಸಿಗಲಿದೆ. ಮಾತಿನಲ್ಲಿ ಕಠಿಣತೆ ಇದ್ದರೂ ಇನ್ನೊಬ್ಬರಿಗೆ ಮೋಸ ಮಾಡುವವರಲ್ಲಾ. ಇದೇ ಸಂತೃಪ್ತಿ ನಿಮಗೆ ಇರುವುದು. ದೇಹಾರೋಗ್ಯದಲ್ಲಿ ತುಂಬಾ ಬದಲಾವಣೆ ಇದ್ದೀತು, ಗೃಹ ಉಪಯೋಗಿ ವಸ್ತುಗಳ ಖರೀದಿ, ಮಾತಿನ ಮೇಲೆ ನಿಗಾ ಇರಲಿ, ದಾಂಪತ್ಯದಲ್ಲಿ ಸಂತೋಷ.

ಕನ್ಯಾರಾಶಿ
ಆರ್ಥಿಕ ಪರಿಸ್ಥಿತಿ ಸುಧಾರಣೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ನಿಮ್ಮ ವ್ಯಕ್ತಿತ್ವ ಅಂಗಸೌಷ್ಠವ ಹಾಗೂ ಮಾತಿನಿಂದ ಮೋಡಿ ಮಾಡುವ ನೀವು ಎಲ್ಲರನ್ನೂ ಮೆಚ್ಚಿಸುವಿರಿ. ಆದರೆ ಎಲ್ಲಾ ಕಾಲಕ್ಕೂ ಉಪಯೋಗಕ್ಕೆ ಬರಲಾರದು. ಜಾಗ್ರತೆ ಮಾಡಿರಿ. ಕುಟುಂಬಿಕರೊಂದಿಗೆ ಕಲಹವು ಸಲ್ಲದು, ತಾಳ್ಮೆಯಿಂದ ಕೆಲಸಗಳನ್ನು ಮಾಡಿ, ಮನೆಯವರಿಗಾಗಿ ಅಧಿಕ ಖರ್ಚು, ದೈನಂದಿನ ಜೀವನದಲ್ಲಿ ಸ್ವಲ್ಪ ಬದಲಾವಣೆ.

ತುಲಾರಾಶಿ
ಪರಸ್ಥಳ ವಾಸ, ವಿರೋಧಿಗಳಿಂದ ತೊಂದರೆ, ತಕ್ಕಡಿಯಂತೆ ಮೇಲೆ ಕೆಳಗಾಗಲಿರುವ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿರಿ. ಸಂಶಯ ಪ್ರವೃತ್ತಿಯ ನೀವು ಎಲ್ಲರನ್ನು ಅದೇ ದೃಷ್ಟಿಯಿಂದ ನೋಡದಿರಿ. ಭಾವನಾತ್ಮಕವಾಗಿ ದುಃಖಕ್ಕೆ ಒಳಗಾಗದಿರಿ, ಸ್ತ್ರೀ ಲಾಭ, ಆಕಸ್ಮಿಕ ಖರ್ಚು, ವ್ಯಾಪಾರದಲ್ಲಿ ನಂಬಿಕೆ ದ್ರೋಹ.

ವೃಶ್ಚಿಕರಾಶಿ
ಯತ್ನ ಕಾರ್ಯ ಅನುಕೂಲ, ಆರೋಗ್ಯದಲ್ಲಿ ಸುಧಾರಣೆ, ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಕಂಡು ಬಂದರೂ ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ಉತ್ತಮ ಅಭಿವೃದ್ಧಿಯು ಕಂಡು ಬರಲಿದೆ. ಮನೆಯಲ್ಲಿ ಪತ್ನಿ ಹಾಗೂ ಮಕ್ಕಳ ಸಂತೋಷದಲ್ಲಿ ಪಾಲ್ಗೊಳ್ಳಿರಿ, ವಿನಾಕಾರಣ ದ್ವೇಷ, ಮಕ್ಕಳಿಂದ ನಿಂದನೆ, ನೆಮ್ಮದಿ ಇಲ್ಲದ ಜೀವನ, ಸಾಧುಸಂತರಿಗೆ ಸಹಾಯ ಮಾಡಿ.

ಧನಸ್ಸುರಾಶಿ
ಉದ್ಯೋಗದಲ್ಲಿ ತೃಪ್ತಿ, ಯತ್ನ ಕಾರ್ಯ ಅನುಕೂಲ, ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗದಿಂದ ಸಂತೋಷ ಸಿಗಲಿದೆ. ಪತ್ನಿಯ ಉದ್ಯೋಗದ ಭೇಟೆಯು ಮುಂದುವರಿಯಲಿದೆ. ಸೃಜನಾತ್ಮಕವಾಗಿ ಸ್ಪಂದಿಸಿರಿ. ಮಾತಿನಿಂದ ಮೌನ ಲೇಸು. ಎಂಬುದನ್ನು ನೆನಪಿಟ್ಟು ಕೊಳ್ಳಿರಿ, ಹಿತ ಶತ್ರು ಕಾಟ, ದೂರ ಪ್ರಯಾಣ, ಬಂಧು ಮಿತ್ರರ ಸಹಕಾರ, ಅಧಿಕ ಖರ್ಚು, ಚಂಚಲ ಮನಸ್ಸು.

ಮಕರರಾಶಿ
ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ಅಲ್ಪ ಪ್ರಯತ್ನದಿಂದಲೇ ಕಾರ್ಯ ಸಿದ್ಧಿ, ಸಂಗೀತ ಸಾಹಿತ್ಯದಲ್ಲಿ ಆಸಕ್ತಿ, ಗೃಹ ಸಾಲ ಹಾಗೂ ವಾಹನ ಸಾಲಕ್ಕಾಗಿ ಸ್ವಲ್ಪ ಪರದಾಟ ಕಂಡು ಬಂದೀತು. ಆದರೂ ನಿಮಗೆ ಬೇಗ ಅದರ ವ್ಯವಸ್ಥೆಯಾಗಲಿದೆ. ದೃಢ ನಿರ್ಧಾರದಿಂದ ಮುನ್ನಡೆದರೆ ಒಳಿತು. ಅದರೂ ಪರದಾಟವು ತಪ್ಪದು, ಸ್ಥಿರಾಸ್ತಿಯಿಂದ ಲಾಭ, ಮಹಿಳಾ ಉದ್ಯಮಗಳಿಗೆ ಅನುಕೂಲ.

ಕುಂಭರಾಶಿ
ವ್ಯಾಪಾರದಲ್ಲಿ ನಷ್ಟ, ಕೆಲಸಗಳಲ್ಲಿ ನಿಧಾನಗತಿ, ಮನಕ್ಲೇಷ, ಮನೆಯಲ್ಲಿ ವಿನಾಕಾರಣ ಕಲಹ, ಧನ, ಕನಕಗಳ ಖರೀದಿಯು ಕಂಡು ಬಂದೀತು. ಮನೆಯಾಕೆಗೆ ಸಂತೃಪ್ತಿಯಾದೀತು. ಮಕ್ಕಳಿಂದ ಜಾಗದ ಖರೀದಿ ಇದ್ದೀತು. ಜಾಗ್ರತೆಯಿಂದ ಮುನ್ನಡೆಯಿರಿ.ದೇಹಾರೋಗ್ಯ ಕ್ಕಾಗಿ ಸ್ವಲ್ಪ ಖರ್ಚುವೆಚ್ಚ ಬಂದೀತು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಸಣ್ಣಪುಟ್ಟ ವಿಷಯಗಳಿಂದ ಆತಂಕ.

ಮೀನರಾಶಿ
ನೌಕರಿಯಲ್ಲಿ ನಿಷ್ಠುರ, ಬಂಧುಗಳ ಭೇಟಿ, ಅಧಿಕ ಅಲೆದಾಟ, ಶತ್ರು ಕಾಟ, ಮಾತು ಕಮ್ಮಿ ಇದ್ದರೂ ಕೆಲವೊಮ್ಮೆ ಅತೀ ಮಾತುಗಳನ್ನು ಅಡುವಿರಿ. ಬೇಗನೆ ಇತರರೊಂದಿಗೆ ಬೆರೆಯುವ ನಿಮಗೆ ಬೇಗನೆ ನಿಷ್ಠುರ ಮಾಡಿಕೊಳ್ಳುವ ತಪ್ಪು ನಿರ್ಧಾರವನ್ನು ಮಾಡುವಿರಿ, ತಾಳ್ಮೆಬೇಕು, ನಯವಾದ ಮಾತುಗಳಿಂದ ಲಾಭ, ಆಸ್ತಿ ವಿಷಯದಲ್ಲಿ ಮೌನವಹಿಸಿ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories

Leave a Reply

Your email address will not be published. Required fields are marked *