ಬೆಂಗಳೂರು : ಮಹರ್ಷಿವಾಣಿ ಕಾರ್ಯಕ್ರಮದ ಮೂಲಕವೇ ಮನೆ ಮಾತಾಗಿರುವ ಆನಂದ ಗುರೂಜಿ ಅವರ ಹೆಸರಲ್ಲಿ ವಂಚನೆ ನಡೆಯುತ್ತಿದೆ. ಆನಂದ ಗುರೂಜಿ ಅವರ ಹೆಸರನ್ನು ಹಲವರು ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಂಡು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಹೀಗಾಗಿ ಜನರು ಇಂತಹ ಜನರಿಂದ ಎಚ್ಚರವಾಗಿರಿ ಅಂತಾ ಖುದ್ದು ಆನಂದ ಗುರೂಜಿ ಅವರೇ ಮನವಿ ಮಾಡಿದ್ದಾರೆ.

ಕಳೆದೊಂದು ದಶಕಗಳಿಂದಲೂ ಮಹರ್ಷಿ ಆನಂದ ಗುರೂಜಿ ಅವರು ಕನ್ನಡಿಗರ ಮನೆ ಮಾತಾಗಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಹಶ್ರೀ ವಾಣಿ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಯನ್ನು ಆಲಿಸಿ, ಪರಿಹಾರವನ್ನು ದೊರಕಿಸಿಕೊಡುವ ಕಾಯಕ ವನ್ನು ಮಾಡುತ್ತಿದ್ದಾರೆ. ಮಾತ್ರವಲ್ಲ ಗೋ ಹತ್ಯೆಯನ್ನು ವಿರೋಧಿಸುತ್ತಲೇ ಹಿಂದೂ ಪರ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಆದ್ರೀಗ ಆನಂದ ಗುರೂಜಿ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ನಡೆಯುತ್ತಿದೆ.
ಹಲವರು ಆನಂದ ಗುರೂಜಿ ಅವರನ್ನು ಭೇಟಿ ಮಾಡಿಸುವುದಾಗಿ ಜನರಿಂದ ಹಣವನ್ನು ಪಡೆಯುತ್ತಿದ್ರೆ,ಇನ್ನೂ ಕೆಲವರು ಆನಂದ ಗುರೂಜಿ ಅವರ ಹೆಸರಲ್ಲಿ ಸುಳ್ಳು ಭವಿಷ್ಯವನ್ನು ಪ್ರಕಟಿಸಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಹೀಗಾಗಿ ಯಾರೂ ಕೂಡ ವಂಚನೆಗೆ ಒಳಗಾಗಬಾರದು ಅಂತಾ ಆನಂದ ಗುರೂಜಿ ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ತನ್ನ ಹೆಸರಲ್ಲಿ ಯಾರಾದ್ರೂ ವಂಚನೆ ನಡೆಸಿದ್ರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡುವಂತೆಯೂ ಅಭಿಮಾನಿಗಳಿಗೆ ಸೂಚನೆಯನ್ನು ನೀಡಿದ್ದಾರೆ.