ಬಾಲಿವುಡ್ ನಲ್ಲಿ ಡ್ರಗ್ ಘಾಟು – ಲಾಯರ್ ಭೇಟಿ ಮಾಡಿದ ಬಿ ಟೌನ್ ಖ್ಯಾತ ನಟರು

0

ಡ್ರಗ್ ನಶೆಯ ಘಾಟು ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹರಡುತ್ತಿದೆ. ಸ್ಯಾಂಡಲ್ ವುಡ್ನ ನಶೆಯ ರಹಸ್ಯವನ್ನು ಬಯಲು ಮಾಡ್ತಿರೋ ಎನ್ ಸಿಬಿ ಒಬ್ಬೊಬ್ಬರಿಗೆ ನೋಟೀಸ್ ಕೊಡ್ತಿದೆ. ಇದರಿಂದ ಇಡೀ ಚಿತ್ರ ರಂಗ ಬೆಚ್ಚಿಬೀಳುತ್ತಿರೋದಂತು ಸತ್ಯ . ಇದೀಗ ಇದರ ಸ್ಮೆಲ್ ಕಿರು ತೆರೆಯ ಕಲಾವಿದರಿಗೂ ವ್ಯಾಪಿಸಿದೆ.

ಮತ್ತೊಂದೆಡೆ ಬಾಲಿವುಡ್ ನಟನಟಿಯರಿಗೂ ಇದೀಗ ಡ್ರಗ್ ಭೀತಿ ಶುರವಾದಂತಿದೆ. ಬಾಲಿವುಡ್ ನ ಹಸೀನಾ ಅನ್ನಿಸಿಕೊಂಡಿರುವ ದೀಪಿಕಾ ಮೇಲೆ ಆರೋಪ ಕೇಳಿ ಬಂದಿರೋ ಬೆನ್ನಲ್ಲೇ ಇಡೀ ಬಾಲಿವುಡ್ ಕನಲಿಹೋಗಿದೆ ಎನ್ನಲಾಗ್ತಿದೆ. ಹಲವು ನಟರು ನಟಿಯರು ಈ ಕುರಿತಂತೆ ಆತಂಕಗೊಂಡಿದ್ದಾರೆ ಅನ್ನೋ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಬಾಲಿವುಡ್ ನ ಗೆಟ್ ಟುಗೆದರ್ ಗಳಲ್ಲಿ ಡ್ರಗ್ ಇರುತ್ತೆ ಅನ್ನೋ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ದೀಪಿಕಾ ಚಾಟ್ ನಲ್ಲಿ ಡ್ರಗ್ ಕುರಿತಂತೆ ಇರೋದು ಬಯಲಾದ ಬೆನ್ನಲ್ಲೇ ಉಳಿದ ನಟ ನಟಿಯರಿಗೆ ನಡುಕ ಶುರುವಾಗಿದೆ ಎನ್ನಲಾಗ್ತಿದೆ.

ಹಲವು ನಟರು ತಮ್ಮ ಮೇಲೆ ಎಲ್ಲಿ ಆರೋಪ ಬರುತ್ತೋ ಅಂತ ಆತಂಕಗೊಂಡಿದ್ದಾರಂತೆ. ತಮಗೆ ನೋಟೀಸ್ ಬರಬಹುದು ಅನ್ನೋ ಗುಮಾನಿ ಇರೋ ಹಿನ್ನೆಲೆಯಲ್ಲಿ ಬಾಲಿವುಡ್ ನ ೬ ಮಂದಿ ಖ್ಯಾತ ನಟರು ತಮ್ಮ ಲಾಯರ್ ನ್ನು ಭೇಟಿ ಮಾಡಿದ್ದಾರೆ ಅನ್ನೋ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇನ್ನು ದೀಪಿಕಾ ವಿಚಾರಕ್ಕೆ ಬರೋದಾದ್ರೆ ದೀಪಿಕಾ ತನ್ನ ಮ್ಯಾನೇಜರ್ ಜೊತೆ ನಡೆಸಿದ ಚಾಟ್ ಇದೀಗ ವೈರಲ್ ಆಗಿದೆ. ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಬಳಿ ಮಾಲ್ ಇದ್ಯಾ ಅಂತ ಕೇಳಿದ್ದಾರೆ. ಜೊತೆಗೆ ಹ್ಯಾಶ್ ಅಲ್ವಾ ಅಂತ ಪ್ರಶ್ನಿಸಿದ್ದಾರೆ. ಇನ್ನು ಕೋಕೋ ಗೆ ಎಷ್ಟು ಹೊತ್ತಿಗೆ ಬರುತ್ತಿರಾ ಅಂತ ಪ್ರಶ್ನಿಸಿದ್ರು ಎನ್ನಲಾಗ್ತಿದೆ.

ಈ ಕುರಿತಂತೆ ಕರೀಷ್ಮಾಪ್ರಕಾಶ್ ಗೆ ಎನ್ ಸಿ ಬಿ ನೋಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇನ್ನು ನಟಿ ದೀಪಿಕಾಗೂ ನೋಟೀಸ್ ಬರೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇನ್ನು ನಟಿ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ವಿರೋಧ ಕೇಳಿ ಬರುತ್ತಿದೆ. ದೀಪಿಕಾ ಜೈಲು ಸೇರುತ್ತಾರಾ ಅನ್ನೋ ಪ್ರಶ್ನೆಯನ್ನು ಅವರ ಪ್ಯಾನ್ ಮಾಡ್ತಿದಾರೆ. ಒಟ್ಟಾರೆ ಡ್ರಗ್ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನು ಅಲ್ಲಾಡಿಸಿರೋದು ಸುಳ್ಳಲ್ಲ.

Leave A Reply

Your email address will not be published.