ಭಾನುವಾರ, ಏಪ್ರಿಲ್ 27, 2025
HomeSpecial StoryKarya Siddhi Anjaneya : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ...

Karya Siddhi Anjaneya : ತೆಂಗಿನಕಾಯಿ ನೀಡಿದ್ರೆ ಒಲಿತಾನೆ ರಾಮಭಂಟ : ವಾಯುಪುತ್ರನನ್ನು ನಂಬಿದ್ರೆ ಎಲ್ಲಾ ಕಾರ್ಯಸಿದ್ಧಿ

- Advertisement -

Karya Siddhi Anjaneya Temple : ದೇವಾಲಯದ ಕಲ್ಪನೆಯೇ ಅದ್ಬುತ. ಒಂದು ದೇವಾಲಯಕ್ಕಿಂತ ಮತ್ತೊಂದು ದೇವಾಲಯ ಭಿನ್ನ. ಒಂದು ಕಡೆ ಒಬ್ಬ ದೇವರ ಆಚರಣೆ ಒಂದು ತರಹ ಆದ್ರೆ. ಮತ್ತೊಂದು ದೇವಾಲಯ ದಲ್ಲಿ ಆತನ ರೂಪ ಸ್ವರೂಪ ಎರಡೂ ಬೇರೆ.ಆದ್ರೆ ಎರಡೂ ಕಡೆ ಆತನಿಗೆ ಬೇಕಾಗಿರೋ ದು ಮಾತ್ರ ಭಕ್ತಿ.

ಅದರಲ್ಲೂ ಆಂಜನೇಯನಿಗೆ ಭಕ್ತಿ ಸೇವೆ ಆಂದ್ರೆ ತುಂಬಾನೆ ಇಷ್ಟ . ಯಾಕಂದ್ರೆ ಆತನೇ ಇನ್ನೊಬ್ಬ ದೇವರ ಭಕ್ತ. ಭಕ್ತಿಯಲ್ಲಿ ಆತನನ್ನು ಸೋಲಿಸೋರು ಇಲ್ಲ ಅಂತ ಆತ ತೋರಿಸಿಕೊಟ್ಟಿದ್ದಾನೆ. ಹಾಗೇ ಅವನ ಭಕ್ತರನ್ನು ಆತ ಯಾವ ಕಾರಣಕ್ಕೂ ಕೈ ಬಿಡೋದಿಲ್ಲ. ಹೌದು, ಈಗ ಹೇಳ್ತಿರೋದು ಅದೇ ಆಂಜನೇಯ ದೇವಾಲಯವೊಂದರ (Karya Siddhi Anjaneya ) ಬಗ್ಗೆ. ಇಲ್ಲಿ ಭಕ್ತಿಯಿಂದ ಕೈ ಮುಗಿದರೆ ಈಡೇರದ ಕಾರ್ಯವೇ ಇಲ್ಲ. ಸಕಲ ಇಷ್ಟಾರ್ಥವನ್ನು ಈಡೇರಿಸೋಕೆ ಅಂತಾನೆ ಇಲ್ಲಿ ನಿಂತಿದ್ದಾನೆ. ಆದ್ರೆ ಇವನ್ನು ಒಲಿಕೊಳ್ಳೊಕೆ ವೃತ ಮಾಡಬೇಕು.

ಹೌದು, ಇಲ್ಲಿ ಹರಕೆ ಕಟ್ಟೋಕೆ ಒಂದು ನಿಯಮ ಇದೆ . ಅದು ತೆಂಗಿನಕಾಯಿಯ ಹರಕೆ. ಇಲ್ಲಿ ಹರಕೆ ಹೇಳೋರು ದೇವಾಲಯದ (Karya Siddhi Anjaneya ) ಕಂಬಿಗಳಿಗೆ ಕಾಯಿ ಕಟ್ಟಬೇಕು. ಅದರ ನಂತರ ವೃತವೊಂದನ್ನು ಕೂಡಾ ಮಾಡಬೇಕು ಅದಾದ ನಂತರವೇ ಸಿದ್ದಿ ಫಲಿಸೋದು. ಇನ್ನು ಈ ವೃತಕ್ಕೂ ಒಂದು ರೀತಿ ನೀತಿ ಇರುತ್ತೆ, ಹರಕೆ ಕಟ್ಟಿಕೊಳ್ಳೊರು ದೇವಾಯಲಕ್ಕೆ ಬರುವಾಗ ಕಾಯಿ ಅಂದರೆ ಪೂರ್ಣಫಲ ತರಬೇಕು.

ಪೂರ್ಣಫಲ ಇಲ್ಲವಾದರೆ ದೇವಾಲಯದಲ್ಲೇ ಇದನ್ನು ನೀಡುವ ಪದ್ದತಿ ಇದೆ. ಇದನ್ನು ಕೊಂಡು ಕೊಂಡು ದೇವರ ಮುಂದೆ ಸಂಕಲ್ಪ ಮಾಡಬೇಕು. ನಂತರ ಕಾಯಿಯನ್ನು ದೇವಾಲಯದ ಸುತ್ತಲಿನ ಕಂಬಿಗೆ ಕಟ್ಟಬೇಕು. 16 ದಿನದ ನಂತರ ಕಾಯಿಯನ್ನು ವಾಪಾಸ್ ತೆಗೆಯಲಾಗುತ್ತೆ.

ನಂತರ ಇದ್ದನ್ನು ಮನೆಗೆ ತಂದು ಸಿಹಿ ಮಾಡಿ ತಿನ್ನಬೇಕು . ಹೀಗೆ ಮಾಡಿದ್ರೆ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ ಭಕ್ತರದ್ದು. ಇನ್ನು ಕಾಯಿ ಯಾರದ್ದು ಅಂತ ಗೊಂದಲ ವಾಗದಿರಲು ಅದರ ಮೇಲೆ ಸಂಖ್ಯೆಯನ್ನು ಹಾಗೂ ದಿನಾಂಕವನ್ನು ಬರೆಯಲಾಗುತ್ತೆ.

ಇನ್ನು ಇಲ್ಲಿ ಹರಕೆ ಹೇಳೋರು ಸಂಕಲ್ಪದ ನಂತರ ಪ್ರದಕ್ಷಿಣೆಗೆ ಸಿದ್ಧರಾಗಬೇಕು. 16 ದಿನದಲ್ಲಿ ಪ್ರತೀ ದಿನ 108 ಬಾರಿ ಹನುಮಾನ್ ಚಾಲಿಸವನ್ನು ಪಠಿಸಬೇಕು.ಈ 16 ದಿನದಲ್ಲಿ 4 ದಿನ ತಲಾ 41 ಬಾರಿ ಪ್ರದಕ್ಷಿಣೆ ಹಾಕಬೇಕು. ತೆಂಗಿನ ಕಾಯಿ ಕಟ್ಟಿದ 16 ನೇ ದಿನ ಬಂದು ಕಟ್ಟಿದ ಕಾಯಿಯನ್ನು ತೆಗೆದು ಸಿಹಿ ತಯಾರಿಸಿ ತಿನ್ನಬೇಕು. ಆಗಲೇ ಎಲ್ಲ ಕಾರ್ಯ ಸಿದ್ದಿಸೋದು ಅಂತಾರೆ ಭಕ್ತರು 200 ಟನ್ ತೂಗುತ್ತೆ ರಾಮ ಭಕ್ತನ ವಿಗ್ರಹ.

ಆಂಜನೇಯನ ವಿಗ್ರಹ , ಏಕಶಿಲಾ ವಿಗ್ರಹವಾಗಿದ್ದು ಇದರ ತೂಕ ಸುಮಾರು 200 ಟನ್ . ಈ ಶಿಲ್ಪವನ್ನು ಕೆತ್ತಿಸಲು 10 ತಿಂಗಳು ಬೇಕಾಗಿದೆ. ಈ ದೇವಸ್ಥಾನವು ಅವಧೂತಾ ದತ್ತ ಪೀಠದಿಂದ ನಡೆಸಲ್ಪಡುತ್ತದೆ. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಇಲ್ಲಿ ಹನುಮಂ ತನನ್ನು ಸ್ಥಾಪಿಸಿದ್ದಾರೆ. ಇದರ ಜೊತೆಯಲ್ಲೇ ದತ್ತಾತ್ರೇಯ, ಗಣಪತಿ, ನವಗ್ರಹ, ಶಿವನ ಗುಡಿಯನ್ನೂ ಸ್ಥಾಪಿಸಲಾಗಿದೆ.

ಇನ್ನು ಪ್ರತೀ ಶುಕ್ರವಾರ ಅನಘಾ ಪೂಜೆ ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮುತ್ತೈದೆಯರು ಈ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಇಲ್ಲಿ ಹನುಮನಿಗೆ ಭಕ್ತರು ವಿಶೇಷವಾದ ಎಲೆಯ ಹಾರವನ್ನು ಅರ್ಪಿಸಲಾಗುತ್ತೆ. ಇನ್ನು ಇಲ್ಲಿ ಹನುಮ ಜಯಂತಿ ತುಂಬಾ ವಿಜ್ರಂಭಣೆ ಯಿಂದ ಆಚರಿಸಲಾಗುತ್ತೆ. 12 ದಿನಗಳ ಕಾಲ ಆಚರಿಸುವ ಉತ್ಸವದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗುತ್ತಾರೆ.

ಅಂದಹಾಗೆ ಈ ದೇವಾಲಯವಿರೋದು ರಾಜಧಾನಿ ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಗಿರಿನಗರದಲ್ಲಿರೋ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನವಿದು (Karya Siddhi Anjaneya ). ಇಲ್ಲಿಗೆ ತೆರಳಲು ಬೆಂಗಳೂರಿನ ಮೆಜೆಸ್ಟಿಕ್ ನಿಂದ ಗಿರಿನಗರಕ್ಕೆ ಸಾಕಷ್ಟು ಬಸ್ ಗಳಿವೆ. ಇನ್ನು ಒಲಾ ಹಾಗು ಆಟೋ ದಲ್ಲೂ ಇಲ್ಲಿಗೆ ತೆರಳಬಹುದು ಹಾಗಾದ್ರೆ ನಿಮಗೆ ಯಾವುದಾದ್ರು ಕಾರ್ಯಸಿದ್ದಿಯಾಗಗಬೇಕಿದ್ರೆ ಒಮ್ಮೆ ಈ ರಾಮಭಕ್ತನನ್ನು ಕಂಡು ಕೈಮುಗಿಯಿರಿ .

ಇದನ್ನೂ ಓದಿ : Natta Raameshwaram : ನತ್ತಾ ರಾಮೇಶ್ವರಂ : 11 ತಿಂಗಳು ನೀರಿನಲ್ಲಿಯೇ ಮುಳುಗಿರುತ್ತೆ ಶಿವಲಿಂಗ

ಇದನ್ನೂ ಓದಿ : Mujungavu temple : ಈ ಕಲ್ಯಾಣಿಯಲ್ಲಿ ಸ್ನಾನ ಮಾಡಿದ್ರೆ ಚರ್ಮ ರೋಗಕ್ಕೆ ಮುಕ್ತಿ !

( Karya Siddhi Anjaneya Temple is a coconut that is said to have acted in accordance with the beliefs of the devotees )

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular