Beauty Secret : ಶ್ರೀಗಂಧದಲ್ಲಿನ ಸೌಂದರ್ಯ ರಹಸ್ಯ ಏನು ಗೊತ್ತಾ ?

Beauty Secret : ಶ್ರೀ ಗಂಧ ದೇವರಿಂದ ಹಿಡಿದು ಜನಸಾಮಾನ್ಯರಿಗೂ ಪ್ರಿಯವಾದುದು. ಪುರಾತನ ಕಾಲದಲ್ಲಿಯೇ ನಮ್ಮ ಹಿರಿಯರು ಶ್ರೀಗಂಧದ ಮಹತ್ವವನ್ನು ಅರಿತ್ತಿದ್ದರು. ಆದರಿಂದಲೇ ಶ್ರೀಗಂಧವನ್ನು ಸರ್ವ ಶ್ರೇಷ್ಠ ಎಂದಿರುವುದು. ಶ್ರೀಗಂಧದಲ್ಲಿ ಮುಖ್ಯವಾಗಿ ಸೌಂದರ್ಯವನ್ನು ಕಾಪಾಡಿಕೊಂಡು ವೃಧಿಸುವ ಗುಣ ಇದೆ. ಸೌಂದರ್ಯವನ್ನು ಹೆಚ್ಚಿಸಲು ಅಥವಾ ಕಾಪಾಡಿಕೊಳ್ಳಲು ಶ್ರೀಗಂಧವನ್ನು ಹೇಗೆಲ್ಲಾ ಉಪಯೋಗಿಸ ಬಹುದು ಎಂದು ನಾವು ಹೇಳುತ್ತೇವೆ.

ಶ್ರೀಗಂಧ ಮತ್ತು ಅರಿಶಿನದ ಮಾಸ್ಕ್ : ಐದು ಚಮಚ ಶ್ರೀಗಂಧದ ಹುಡಿಗೆ ಎರಡು ಚಮಚ ಅರಿಶಿನ ಹುಡಿಯನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಗೆ ಕೂಡ ಇದನ್ನು ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಮೊಡವೆಯ ಸಮಸ್ಯೆ ಇರುವವರಿಗೆ ಈ ಮಾಸ್ಕ್ ಒಳ್ಳೆಯದು. ಮೊಡವೆ, ಕಲೆಗಳು ಮತ್ತು ಗುಳ್ಳೆಗಳನ್ನು ಇದನ್ನು ನಿವಾರಿಸುತ್ತದೆ.

ಇದನ್ನೂ ಓದಿ: ಮೇಕಪ್‌ ತೆಗೆಯದೇ ರಾತ್ರಿ ಮಲಗುತ್ತೀರಾ ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ

ಶ್ರೀಗಂಧ ಮತ್ತು ಗುಲಾಬಿ ನೀರು : ಶ್ರೀಗಂಧ ಮತ್ತು ಗುಲಾಬಿ ನೀರಿನ ಮಾಸ್ಕ್ ಒಣ ಹಾಗೂ ಚರ್ಮ ಎದ್ದುಬರುವ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿದೆ. ಐದು ಚಮಚ ಶ್ರೀಗಂಧದ ಹುಡಿಗೆ ಗುಲಾಬಿ ನೀರನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮುಖ ಹಾಗೂ ಕುತ್ತಿಗೆಗೆ ಇದನ್ನು ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶ್ರೀಗಂಧದ ಹುಡಿ ಮತ್ತು ಗುಲಾಬಿ ನೀರು ಚರ್ಮಕ್ಕೆ ತೇವಾಂಶವನ್ನು ನೀಡಿ ಪೋಷಿಸುತ್ತದೆ.

ಶ್ರೀಗಂಧ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಮಾಸ್ಕ್ : ಐದು ಚಮಚ ಶ್ರೀಗಂಧದ ಹುಡಿ ಮತ್ತು ಎರಡು ಚಮಚ ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ. ಒಂದು ಚಮಚ ಜೇನುತುಪ್ಪ ಮತ್ತು ಹಾಲನ್ನು ಹಾಕಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಈ ಮಾಸ್ಕ್ ನ್ನು ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ನೀರಿನಿಂದ ತೊಳೆಯಿರಿ. ಶ್ರೀಗಂಧದ ಹುಡಿ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆಯ ಹುಡಿಯ ಮಾಸ್ಕ್ ಆರೋಗ್ಯಕರ ಹಾಗೂ ಕಾಂತಿಯುತ ಚರ್ಮವನ್ನು ನೀಡುವುದು.

ಇದನ್ನೂ ಓದಿ: Beauty tips : ತಿಂದು ಎಸೆಯುವ ಬಾಳೆಹಣ್ಣಿನ ಸಿಪ್ಪೆಯಿಂದ ಅರಳುತ್ತೆ ಮುಖದ ಕಾಂತಿ

ಶ್ರೀಗಂಧ ಮತ್ತು ಅಕ್ಕಿನೀರಿನ ಮಾಸ್ಕ್ : ಶ್ರೀಗಂಧ ಮತ್ತು ಅಕ್ಕಿ ನೀರಿನ ಮಾಸ್ಕ್ ನಿಂದ ಒಣಚರ್ಮದ ಸಮಸ್ಯೆಯನ್ನು ನಿವಾರಿಸಬಹುದು ಮತ್ತು ಕಪ್ಪು ಕಲೆಗಳನ್ನು ಇದು ಹೋಗಲಾಡಿಸುವುದು. ನೀವು ಯುವಕರಾಗಿ ಕಾಣಲು ಮತ್ತು ಕಾಂತಿಯುತ ಚರ್ಮಕ್ಕೆ ಇದು ಪರಿಣಾಮಕಾರಿ. ಸ್ವಲ್ಪ ಶ್ರೀಗಂಧದ ಹುಡಿ ಮತ್ತು ಅದಕ್ಕೆ ಒಂದು ಕಪ್ ಅಕ್ಕಿ ನೀರನ್ನು ಹಾಕಿಕೊಂಡು ಮಿಶ್ರಣ ಮಾಡಿ ಒಳ್ಳೆಯ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

(Do you know the beauty secret in sandalwood?)

Comments are closed.