ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯಭವಿಷ್ಯ : 01-10-2020

ನಿತ್ಯಭವಿಷ್ಯ : 01-10-2020

- Advertisement -

ಮೇಷರಾಶಿ
ಅತೀ ಕೆಲಸದ ಒತ್ತಡದಿಂದ ಮನಸ್ಸು ಆರಾಮ ಬಯಸಬಹುದು. ಆಧ್ಯಾತ್ಮಿಕ ಚಿಂತನೆ, ಅಧಿಕ ಖರ್ಚು, ಮಾನಸಿಕ ಆಘಾತ, ಪುಣ್ಯಕ್ಷೇತ್ರ ದರ್ಶನ. ಸಂಚಾರಕ್ಕಾಗಿ ದೂರದಿಂದ ಒತ್ತಡ ಬರಬಹುದು. ಆರೋಗ್ಯದ ಹಿತದೃಷ್ಟಿಯಿಂದ ಸ್ವಲ್ಪ ತಪಾಸಣೆ ಮಾಡುವುದು ಆವಶ್ಯಕ.

ವೃಷಭರಾಶಿ
ಜೀವನದಲ್ಲಿ ಧನಾತ್ಮಕ ಹಾಗೂ ಗುಣಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಿರಿ. ಬಂಧು ಬಾಂಧವರಿಂದ ಅನುಕೂಲ, ಪಾಲುದಾರಿಕೆಯಲ್ಲಿ ಕಿರಿಕಿರಿ, ಮಾನಸಿಕವಾಗಿ ಸಂಕಟಗಳು. ಮನಸ್ಸು ತುಂಬಾ ಚಂಚಲತೆಯಿಂದ ಕೂಡಿರುತ್ತದೆ. ಆದರೂ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಏರುಪೇರು ಕಂಡು ಬಂದು ಚಿಂತೆ ಆದೀತು.

ಮಿಥುನರಾಶಿ
ನಿಮ್ಮ ಚಿಂತನೆ ಹಾಗೂ ಭಾವನೆಗಳು ನಿಮ್ಮನ್ನು ಭಾವುಕರನ್ನಾಗಿಸಲಿವೆ. ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಕೋರ್ಟುಗಳಲ್ಲಿ ತೊಂದರೆ. ಮನಸ್ಸನ್ನು ನಿಮ್ಮ ಹತೋಟಿಯಲ್ಲಿಡಿರಿ. ಆರ್ಥಿಕವಾಗಿ ಮುಗ್ಗಟ್ಟು ನಿವಾರಣೆಯಾಗಲಿದೆ. ಕಿರು ಸಂಚಾರ ಬಂದೀತು.

ಕಟಕರಾಶಿ
ಆರ್ಥಿಕವಾಗಿ ಸ್ವಲ್ಪ ಕೈ ಬರಿದಾದೀತು. ಕೆಲಸ ಕಾರ್ಯಗಳಲ್ಲಿ ಯಶಸ್ಸು, ತಂದೆ ಮಕ್ಕಳಲ್ಲಿ ಕಿರಿಕಿರಿ, ಮಕ್ಕಳಿಂದ ಮಾನಹಾನಿ, ದಾಂಪತ್ಯದಲ್ಲಿ ವಿರಸ, ದುಶ್ಚಟಗಳು ಅಧಿಕ. ಆದರೂ ನಿಶ್ಚಿಂತರಾಗಿರಿ. ಹಣಕಾಸು ನೆರವು ಒದಗಿ ಬರಲಿದೆ. ಮನೆಯಲ್ಲಿ ಹಿರಿಯರಿಂದ ಹಿತೋಪದೇಶವು ಕೂಡಿ ಬಂದೀತು. ಆರೋಗ್ಯದಲ್ಲಿ ಜಾಗ್ರತೆ ಇರಲಿ.

ಸಿಂಹರಾಶಿ
ನಿಮ್ಮ ನಿಸ್ವಾರ್ಥಭಾವದಿಂದ ಮಾಡಿದ ಕೆಲಸವು ಸಫ‌ಲವಾದೀತು. ರಾಜಯೋಗದ ದಿವಸ, ಮಾನಸಿಕವಾಗಿ ಆಲಸ್ಯ, ಸೋಮಾರಿತನ, ಜಿಗುಪ್ಸೆ, ಕಾಲಿಗೆ ಪೆಟ್ಟು. ಕಷ್ಟವೆಂದು ಭಾವಿಸಿದ ಕೆಲಸವು ಸುಲಭವಾಗುವುದು. ಮನಸ್ಸು ಉದ್ವೇಗದಿಂದ ಕೂಡಿರುತ್ತದೆ. ಧನಾತ್ಮಕವಾಗಿ ಚಿಂತಿಸಿರಿ.

ಕನ್ಯಾರಾಶಿ
ಬಂಧುಗಳು ಆತ್ಮೀಯರು ದೂರವಾಗುವರು, ನೆರೆಹೊರೆಯವರಿಂದ ನಿದ್ರಾಭಂಗ, ವಿಚ್ಛೇದನ ಕೇಸುಗಳಲ್ಲಿ ಜಯ, ಹಿರಿಯರೊಡನೆ ಸ್ವಲ್ಪ ಅಭಿಪ್ರಾಯಭೇದ ತಂದೀತು. ನೀವು ನಿಮ್ಮ ಹಠ ಸಾಧನೆ ಮಾಡಬೇಡಿರಿ. ನಿಮಗೆ ಭಡ್ತಿಯು ಕಂಡು ಬಂದು ವರ್ಗಾವಣೆ ಇದ್ದೀತು. ಆರೋಗ್ಯದಲ್ಲಿ ಸುಧಾರಣೆ ಇದೆ.

ತುಲಾರಾಶಿ
ನೀವು ಕೈಗೊಂಡ ಎಲ್ಲಾ ಕೆಲಸವು ನಿಮಗೆ ಪೂರಕವಾಗಿ ಸಾಗಲಿದೆ. ಉದ್ಯೋಗ ನಷ್ಟ, ಆಹಾರ ವ್ಯತ್ಯಾಸಗಳಿಂದ ಅನಾರೋಗ್ಯ, ಆರ್ಥಿಕ ಸಂಕಷ್ಟಗಳನ್ನು ಎದುರಿಸುವಿರಿ. ನಿಮ್ಮ ಹಿತಶತ್ರುಗಳು ನಿಮ್ಮ ಬಗ್ಗೆ ಮೆಚ್ಚುಗೆಯ ಮಾತನ್ನಾಡಿಯಾರು. ಎಲ್ಲಾ ಸುಖ ದುಃಖವನ್ನು ಸಮಾನವಾಗಿ ಸ್ವೀಕರಿಸಿರಿ.

ವೃಶ್ಚಿಕರಾಶಿ
ಪ್ರಾರಂಭಿಸಿ ಅರ್ಧಕ್ಕೆ ನಿಂತ ಕೆಲಸಕಾರ್ಯಗಳು ನಿಧಾನಗತಿಯಿಂದಲಾದರೂ ಮುಕ್ತಾಯಗೊಳ್ಳಲಿದೆ. ಹೆಣ್ಣು ಮಕ್ಕಳಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಆರೋಗ್ಯ ವ್ಯತ್ಯಾಸ, ಆರ್ಥಿಕ ಸಂಕಷ್ಟಗಳು ದೂರ. ಕುಲದೇವತಾ ಆರಾಧನಾ ಯೋಗವು ಕಂಡು ಬರುವುದು. ಆರೋಗ್ಯದಲ್ಲಿ ಸುಧಾರಣೆ ಇದೆ.

ಧನಸ್ಸುರಾಶಿ
ನಿಮ್ಮ ನೆರವಿಗೆ ಇತರರು ಬಂದು ನಿಲ್ಲುವರು. ದೂರ ಪ್ರದೇಶಗಳಿಗೆ ಪ್ರಯಾಣ, ಮಾನಸಿಕ ವಿಕಲತೆ, ಆತುರದಿಂದ ಧನ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಪಘಾತಗಳಾಗುವ ಸಂಭವ. ಆಪ್ತ ಮಿತ್ರರಿಂದ ಸಹಾಯವು ಕೂಡಿ ಬರಲಿದೆ. ಮನೆಯಲ್ಲಿ ಪತ್ನಿಯಿಂದ ಹಿತನುಡಿ ಹಾಗೂ ಸಮಾಧಾನವು ದೊರಕಲಿದೆ. ದಿನಾಂತ್ಯ ಶುಭವಿದೆ.

ಮಕರರಾಶಿ
ಕಂಕಣ ಭಾಗ್ಯ ಪ್ರಾಪ್ತಿ, ಅಕ್ರಮ ಧನ ಸಂಪಾದನೆ, ಹೊಸ ಸ್ನೇಹಿತರ ಪರಿಚಯ. ಎಂತೆಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಂಯಮದಿಂದ ಇರುವ ನಿಮಗೆ ತಾಳ್ಮೆಯೇ ಅಸ್ತ್ರ. ದೈವದತ್ತವಾಗಿ ಒದಗಿರುವ ವಿದ್ಯೆಯು ನಿಮ್ಮನ್ನು ರಕ್ಷಿಸುವುದು. ಅತಿಥಿಗಳ ಆಗಮನವಿದೆ.

ಕುಂಭರಾಶಿ
ನೀವು ಕೈಗೊಂಡ ಕೆಲಸಕಾರ್ಯಗಳು ಪೂರ್ಣಗೊಳ್ಳಲಿವೆ. ಅಧಿಕ ಖರ್ಚು, ಸಾಲ ಮಾಡುವ ದುಸ್ಥಿತಿ, ಕಾರ್ಮಿಕರಿಂದ ತೊಂದರೆ. ನಿಮ್ಮ ದೃಢ ನಿರ್ಧಾರ ಹಾಗೂ ಆತ್ಮವಿಶ್ವಾಸವು ನಿಮ್ಮನ್ನು ಕಾಪಾಡಲಿದೆ. ಆರೋಗ್ಯವು ಉತ್ತಮ ರೀತಿಯಲ್ಲಿ ಸುಧಾರಣೆಗೊಂಡೀತು.

ಮೀನರಾಶಿ
ವೃತ್ತಿಯಲ್ಲಿ ಬದಲಾವಣೆ ಕಂಡು ಬಂದೀತು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರತ್ವದಿಂದ ಮಾನಹಾನಿ, ಅಧ್ಯಾತ್ಮಿಕ ಮತ್ತು ದೈವ ಚಿಂತನೆ. ಮಂಗಲಕಾರ್ಯಕ್ಕೆ ಸುಮುಹೂರ್ತವು ಕೂಡಿ ಬಂದೀತು. ನಿಮ್ಮ ಪರಿಶ್ರಮ ಹಾಗೂ ಆತ್ಮವಿಶ್ವಾಸವು ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಮುನ್ನಡೆಯಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular