ಪುಟ್ಟ ಪೋರನಿಗೆ ಅಸ್ಥಿಪಂಜರಾನೇ ಬೆಸ್ಟ್ ಫ್ರೆಂಡ್ : ಮಿಸ್ ಮಾಡದೇ ಓದಿ ಫ್ರೆಂಡ್ ಶಿಪ್ ಸ್ಟೋರಿ

0
  • ವಂದನ ಕೊಮ್ಮುಂಜೆ

ಸ್ನೇಹ, ಇದನ್ನು ಒಂದು ಶಬ್ದದಲ್ಲಿ ವರ್ಣಿಸೋಕೆ ಸಾಧ್ಯನೇ ಇಲ್ಲ. ಸ್ನೇಹಿತ ಇಲ್ಲದ ವ್ಯಕ್ತಿಯೇ ಇರಲಿಕ್ಕಿಲ್ಲ. ಕೆಲವರಿಗೆ ಬಾಲ್ಯ ಸ್ನೇಹಿತರೇ ಕೊನೆವರೆಗೂ ಬೆಸ್ಟ್ ಫ್ರೆಂಡ್ ಆಗಿರುತ್ತಾರೆ. ಇನ್ನು ಕೆಲವರಿಗೆ ಜೀವನ ಪೂರ್ತಿ ಹೊಸ ಸ್ನೇಹಿತರು ಸಿಗ್ತಾನೇ ಇರುತ್ತಾರೆ . ಪ್ರಾಣಿಗಳನ್ನೂ ಬೆಸ್ಟ್ ಫ್ರೆಂಡ್ಸ ಅಂದುಕೊಳ್ಳೋರು ಇದ್ದಾರೆ . ಹೀಗಾಗಿ ಸ್ನೇಹಕ್ಕೆಯಾವ ಬಂಧನವಿಲ್ಲ.

ಆದ್ರೆ ಇಲ್ಲೊಬ್ಬ ಬಾಲಕನ ಸ್ನೇಹಿತನ ಬಗ್ಗೆ ಕೇಳಿದ್ರೆ ನೀವೇ ಬೆಚ್ಚಿ ಬೀಳುತ್ತೀರಿ. ಯಾಕೆ ಗೊತ್ತಾ ಈತ ಸ್ನೇಹವನ್ನು ಮಾಡಿರೋದು ಒಂದು ಅಸ್ತಿಪಂಜರದ ಜೊತೆ. ಈತ ಅಮೇರಿಕಾದ ಉತ್ತಾಹ್ ರಾಜ್ಯದ ಬಾಲಕ. ಈತನ ಹೆಸರು ಥಿಯೋ. ಎರಡು ವರ್ಷದ ಪುಟ್ಟ ಪೋರ. ಇವನಿಗೆ ಬೆಸ್ಟ್ ಫ್ರೆಂಡ್ ಅಂದ್ರೆನೇ ಒಂದು ಸ್ಕೆಲಿಟನ್ ಮಾಡೆಲ್.

ಇವನು ಈ ಅಸ್ತಿಪಂಜವನ್ನು ಎಷ್ಟು ಇಷ್ಟಪಟ್ಟಿದ್ದಾನೆ ಅಂದರೆ ಅದನ್ನು ಬಿಟ್ಟು ಒಂದು ಕ್ಷಣನೂ ಇರಲ್ಲ. ಮಾಲ್ ಹೋಗೋಕೂ ಇದೇ ಅಸ್ಥಿಪಂಜರ ಪ್ರೆಂಡ್ ಬೇಕು, ಸುತ್ತಾಡೋಕು ಇದೇ ಬೇಕು ಕೊನೆಗೆ ಮಲಗೋಕೂ ಇದೇ ಅಸ್ಥಿಪಂಜರ ಬೇಕು .

https://www.instagram.com/p/CFmoqWHBXjq/

ಅಂದ ಹಾಗೆ ಇದು ಹ್ಯಾಲೋವೀನ್ ಅಸ್ಥಿಪಂಜರ ಮಾದರಿ. ಥಿಯೋ ತಾಯಿ ಅಬಿಗೈಲ್ ಬ್ರಾಡಿಯ ಪ್ರಕಾರ ಕಳೆದ ಸೆಪ್ಟೆಂಬರ್ ನಲ್ಲಿ ಅಬಿಗೈಲ್ ಬ್ರಾಡಿಯ ಕುಟುಂಬ ಹತ್ತಿರದ ಜಲಾಶಯಕ್ಕೆ ಭೇಟಿ ಯೋಚಿಸಿತ್ತು . ಹೀಗಾಗಿ ನಾಯಿಯನ್ನು ಮೋರಿಯ ಬಳಿ ಇರಿಸಲು ನೆಲಮಾಳಿಗೆಗೆ ಇಳಿದಿದ್ದಾರೆ.

https://www.instagram.com/p/CFM5kBVhRiV/

ಆದರೆ ಕೆಲವು ಪ್ರವಾಹದ ಸಮಸ್ಯೆಯಿಂದಾಗಿ ಅಲ್ಲಿ ಕಸ ತುಂಬೊಕೊಂಡಿತ್ತು. ಹೀಗಾಗಿ ನಾಯಿಯನ್ನು ಅಲ್ಲೇ ಬಿಟ್ಟು ನೆಲಮಾಳಿಗೆಯನ್ನು ಸ್ವಲ್ಪ ಸ್ವಚ್ಚಗೊಳಿಸಲು ಮುಂದಾದರು . ಇದೇ ವೇಳೆ ಈ ಹ್ಯಾಲೋವೀನ್ ಅಸ್ಥಿಪಂಜರ ಮಾದರಿ ಸಿಕ್ಕಿದೆ. ಇದನ್ನು ಗಮನಿಸಿದ ಥಿಯೋ ಅದನ್ನು ಮೇಲೆ ತೆಗೆದುಕೊಂಡು ಹೋಗಿದ್ದಾನೆ. ಅಂದಿನಿಂದ ಇದು ಥಿಯೋಗೆ ಬೆಸ್ಟ್ ಪ್ರೆಂಡ್ ಆಗಿದೆ.

https://www.instagram.com/p/CFSHEBfhMkx/

ಇನ್ನು ಕೊರೋನಾ ಲಾಕ್ ಡೌನ್ ನಲ್ಲೂ ಈ ಅಸ್ಥಿಪಂಜರದಿಂದ ತುಂಬಾ ಯೂಸ್ ಆಗಿದೆ ಅಂತಾರೆ ಬ್ರಾಡಿ. ಯಾಕಂದ್ರೆ ಈ ಸಮಯದಲ್ಲಿ ಥಿಯೋವನ್ನು ಮನೆಯಲ್ಲೇ ಇರಿಸೋದು ಕಷ್ಟವಾಗುತ್ತಿತ್ತು. ಆದರೆ ಅಸ್ಥಿಪಂಜರ ಸಿಕ್ಕನಂತ್ರ ಅದರ ಜೊತೆ ಆಡುತ್ತಾ ಥಿಯೋ ತುಂಬಾ ಖುಷಿಯಾಗಿದ್ದಾನೆ.

ಇನ್ನು ಇದಕ್ಕೆ ಥಿಯೋ ಹೆಸರು ಕೂಡಾ ಇಟ್ಟಿದ್ದಾನೆ ಅದೇನು ಗೊತ್ತಾ ಬಿನ್ನಿ . ಸದ್ಯಕ್ಕೆ ಬಿನ್ನಿ ಥಿಯೋ ಸುಖವಾಗಿದ್ದಾರೆ . ಅದಕ್ಕೆ ಹೇಳೋದು ಸ್ನೇಹಕ್ಕೆ ಬೇಧವಿಲ್ಲ. ಮತ್ತೊಂದು ಮಕ್ಕಳಲ್ಲಿ ಮಾತ್ರ ಇಂತಹ ಸ್ನೇಹ ಹುಟ್ಟೋದು ಯಾಕಂದ್ರೆ ಅವರು ದೇವರಲ್ಲವಾ ?

Leave A Reply

Your email address will not be published.