RCB vs PBKS: ಕಿಂಗ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಸೋಶಿಯಲ್ ಮೀಡಿಯಾ ಶೇಕ್ !
'ಆರ್‌ಸಿಬಿ ವರ್ಸಸ್ ಪಂಜಾಬ್' (RCB vs PBKS) ಹೈ-ವೋಲ್ಟೇಜ್ ಕದನ! ಹಿಮದ ಬೆಟ್ಟಗಳ ನಡುವೆ ಇರುವ ಧರ್ಮಶಾಲಾದ ರಮಣೀಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ಮುಖಾಮುಖಿಯಾಗಿದ್ದು, ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಆರ್ಭಟಿಸಿರೋದು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ.

rcb vs pbks : ಧರ್ಮಶಾಲಾ: ಸದ್ಯ ಇಡೀ ಸೋಶಿಯಲ್ ಮೀಡಿಯಾದಲ್ಲಿ ಒಂದೇ ಟ್ರೆಂಡಿಂಗ್ ಸುದ್ದಿ, ಅದುವೇ ‘ಆರ್‌ಸಿಬಿ ವರ್ಸಸ್ ಪಂಜಾಬ್’ (RCB vs PBKS) ಹೈ-ವೋಲ್ಟೇಜ್ ಕದನ! ಹಿಮದ ಬೆಟ್ಟಗಳ ನಡುವೆ ಇರುವ ಧರ್ಮಶಾಲಾದ ರಮಣೀಯ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ಮುಖಾಮುಖಿಯಾಗಿದ್ದು, ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಆರ್ಭಟಿಸಿರೋದು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ.
ವೀಕೆಂಡ್ ಮೂಡ್‌ನಲ್ಲಿ ಇರುವ ಕ್ರಿಕೆಟ್ ಪ್ರೇಮಿಗಳು ಟಿವಿ ಹಾಗೂ ಮೊಬೈಲ್ ಸ್ಕ್ರೀನ್‌ಗಳಿಗೆ ಅಂಟಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ #RCBvsPBKS, #ViratKohli ಮತ್ತು #IPL2026 ಹ್ಯಾಶ್‌ಟ್ಯಾಗ್‌ಗಳು ಗಂಟೆಗಳಿಂದ ಟಾಪ್ ಟ್ರೆಂಡಿಂಗ್‌ನಲ್ಲಿವೆ.
Also Read : jwala gutta : 60 ಲೀಟರ್ ಎದೆಹಾಲು ದಾನ ಮಾಡಿದ ಜ್ವಾಲಾ ಗುಟ್ಟಾ : ಅಕಾಲಿಕ ಶಿಶುಗಳ ಜೀವ ಉಳಿಸುವ ‘ಅಮೃತ’ದ ಕಥೆ
ಧರ್ಮಶಾಲಾದಲ್ಲಿ ‘ಕಿಂಗ್’ ಕೊಹ್ಲಿ ಕ್ರೇಜ್!
ಧರ್ಮಶಾಲಾದ ಮೈದಾನದ ಹೊರಗೆ ಬೆಳಗ್ಗಿನಿಂದಲೇ ಸಾವಿರಾರು ಅಭಿಮಾನಿಗಳು ಆರ್‌ಸಿಬಿ ಮತ್ತು ಪಂಜಾಬ್ ಜೆರ್ಸಿ ಧರಿಸಿ ಜಮಾಯಿಸಿದ್ದರು. ಇನ್ನು ಪಂದ್ಯ ಆರಂಭವಾಗುತ್ತಿದ್ದಂತೆ ಮೈದಾನದಲ್ಲಿ ಕೊಹ್ಲಿ ಕೊಹ್ಲಿ ಎಂಬ ಘೋಷಣೆಗಳು ಮೊಳಗಿದವು. ಇದಕ್ಕೆ ತಕ್ಕಂತೆ ಬ್ಯಾಟಿಂಗ್ ಆರಂಭಿಸಿದ ವಿರಾಟ್ ಕೊಹ್ಲಿ, ಪಂಜಾಬ್ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟುವ ಮೂಲಕ ಧರ್ಮಶಾಲಾದಲ್ಲಿ ರನ್ ಮಳೆ ಹರಿಸಿದರು.
ವಿರಾಟ್ ಕೊಹ್ಲಿ ಬಾರಿಸುತ್ತಿರುವ ಒಂದೊಂದು ಸಿಕ್ಸರ್ ಮತ್ತು ಬೌಂಡರಿಗಳಿಗೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಸೀಟು ಬಿಟ್ಟು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಕೊಹ್ಲಿಯ ಈ ಕ್ಲಾಸಿಕ್ ಇನ್ನಿಂಗ್ಸ್‌ನ ವಿಡಿಯೋಗಳು ಮತ್ತು ಮೀಮ್ಸ್‌ಗಳು ಸದ್ಯ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Also Read : ಕಿಂಗ್ ಕೊಹ್ಲಿ ಸೆಂಚುರಿ ಆರ್ಭಟ: ಕೋಲ್ಕತ್ತಾ ಕದನ ಗೆದ್ದು ಅಂಕಪಟ್ಟಿಯ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ!
ಪ್ಲೇಆಫ್ ಲೆಕ್ಕಾಚಾರ: ಯಾರು ಇನ್? ಯಾರು ಔಟ್?
ಈ ಪಂದ್ಯ ಕೇವಲ ಆಟವಲ್ಲ, ಉಭಯ ತಂಡಗಳ ಪಾಲಿಗೆ ಪ್ರತಿಷ್ಠೆಯ ಹೋರಾಟ. ಆರ್‌ಸಿಬಿ ಈ ಪಂದ್ಯ ಗೆದ್ದರೆ ಪ್ಲೇಆಫ್ ಹಂತವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ. ಇತ್ತ ಸತತ ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್‌ಗೆ ಇದು ಜೀವನ್ಮರಣದ ಹೋರಾಟವಾಗಿದೆ. ಪಂಜಾಬ್ ತಂಡದ ಮಾಲೀಕರಾದ ಪ್ರೀತಿ ಜಿಂಟಾ ಕೂಡ ಮೈದಾನದಲ್ಲಿ ಹಾಜರಿದ್ದು, ತಮ್ಮ ತಂಡವನ್ನು ಹುರಿದುಂಬಿಸುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ಈ ಮೈದಾನದಲ್ಲಿ ಸಿಕ್ಸರ್ ಬಾರಿಸುವುದು ಸುಲಭವಾಗಿರುವುದರಿಂದ, ರನ್ ಚೇಸಿಂಗ್ ವೇಳೆ ಮತ್ತಷ್ಟು ರೋಚಕತೆ ಸೃಷ್ಟಿಯಾಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ ನೆಟ್ಟಿಗರು. ಸಿಕ್ಸರ್‌ಗಳ ಸುರಿಮಳೆಯಾಗುತ್ತಿರುವ ಈ ಪಂದ್ಯದಲ್ಲಿ ಅಂತಿಮವಾಗಿ ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂಬ ಕುತೂಹಲ ದುಪ್ಪಟ್ಟಾಗಿದೆ.
rcb vs pbks dharamshala stadium virat kohli fans craze social media trending



