Royal Pop Watch Launch : ‘ರಾಯಲ್ ಪಾಪ್’ ವಾಚ್ ಬಿಡುಗಡೆ ವೇಳೆ ನೂಕು ನುಗ್ಗಲು : ಬೆಂಗಳೂರಲ್ಲೂ ಬಾರೀ ಡಿಮ್ಯಾಂಡ್
ಲಂಡನ್: ವಿಶ್ವದಾದ್ಯಂತ ಬಾರೀ ಬೇಡಿಕೆ ಪಡೆದುಕೊಂಡಿರುವ ವಿಶ್ವ ಪ್ರಸಿದ್ದ ವಾಚ್ ಬ್ರ್ಯಾಂಡ್‌ಗಳಾದ ಸ್ವಾಚ್ (Swatch) ಮತ್ತು ಆಡೆಮಾರ್ಸ್ ಪಿಗೆ (Audemars Piguet) ಬಾರೀ ಬೇಡಿಕೆ ಕಂಡು ಬಂದಿದೆ.

Royal Pop Watch Launch : ಲಂಡನ್: ವಿಶ್ವದಾದ್ಯಂತ ಬಾರೀ ಬೇಡಿಕೆ ಪಡೆದುಕೊಂಡಿರುವ ವಿಶ್ವ ಪ್ರಸಿದ್ದ ವಾಚ್ ಬ್ರ್ಯಾಂಡ್‌ಗಳಾದ ಸ್ವಾಚ್ (Swatch) ಮತ್ತು ಆಡೆಮಾರ್ಸ್ ಪಿಗೆ (Audemars Piguet) ಬಾರೀ ಬೇಡಿಕೆ ಕಂಡು ಬಂದಿದೆ. ‘ರಾಯಲ್ ಪಾಪ್’ (Royal Pop) ವಾಚ್ ಸರಣಿಯ ಲಾಂಚಿಂಗ್ ಕಾರ್ಯಕ್ರಮ ಇದೀಗ ಗೊಂದಲ, ಹಿಂಸಾಚಾರಕ್ಕೆ ಕಾರಣವಾಗಿದೆ. ದುಬೈ, ಸಿಂಗಾಪುರ, ಲಂಡನ್ ಹಾಗೂ ಭಾರತದ ಮುಂಬೈ, ದೆಹಲಿಯಲ್ಲಿ ಜನ ಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಸ್ವಾಚ್ ಮಳಿಗೆಗಳನ್ನೇ ಪೊಲೀಸರು ಬಂದ್ ಮಾಡಿದ್ದಾರೆ.
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲೇ ಈ ವಾಚ್ ಖರೀದಿಯ ಕ್ರೇಜ್ ಆರಂಭಗೊಂಡಿದ್ದು, ಇದೀಗ ಜಗತ್ತಿನಾದ್ಯಂತ ಬಾರೀ ಬೇಡಿಕೆ ಕಂಡು ಬಂದಿದೆ. ಅದ್ರಲ್ಲೂ ಈ ಬಾರಿಯ ಎಡಿಷನ್ ಬಿಡುಗಡೆಯ ವೇಳೆಯಲ್ಲಿ ಗ್ರಾಹಕರು ಮುಗಿಬಿದ್ದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹಲವು ಕಡೆಗಳಲ್ಲಿ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
Royal Pop Watch Launch : ಬೆಂಗಳೂರು, ದೆಹಲಿ, ಮುಂಬೈನಲ್ಲಿ ಬಾರೀ ಡಿಮ್ಯಾಂಡ್
ಭಾರತದ ಪ್ರಮುಖ ನಗರಗಳಾದ ನವದೆಹಲಿ, ಬೆಂಗಳೂರು, ಮುಂಬೈನಲ್ಲಿರುವ ಸ್ವಾಚ್ ಸ್ಟೋರ್‌ಗಳ ಮುಂದೆ ಸಾವಿರಾರು ಜನ ಜಮಾಯಿಸಿದ್ದರು. ಲಿಮಿಟೆಡ್ ಎಡಿಷನ್ ಆಗಿರೋ ಕಾರಣಕ್ಕೆ ದುಬಾರಿ ಹಣ ನೀಡಿ ವಾಚ್ ಖರೀದಿಸಿದ್ದಾರೆ. ಆದರೆ ಸ್ಟೋರ್‌ಗಳಲ್ಲಿ ಜನದಟ್ಟಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸೋದಕ್ಕೆ ಸಾಧ್ಯವಾಗಿಲ್ಲ. ಕಂಪೆನಿಯ ವಿರುದ್ದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿವೆ.
Royal Pop Watch Launch : ಅಮೆರಿಕಾದಲ್ಲಿ 16 ಸ್ವಾಚ್ ಸ್ಟೋರ್‌ಗಳು ಬಂದ್
ಜಾಗತಿಕವಾಗಿ ಉಂಟಾದ ಈ ಅವಾಂತರವನ್ನು ಕಂಡು ಎಚ್ಚೆತ್ತ ಸ್ವಾಚ್ ಯುಎಸ್‌ಎ (Swatch USA), ಪರಿಸ್ಥಿತಿ ನಿಯಂತ್ರಿಸಲು ಅಮೆರಿಕಾದಲ್ಲಿ ಬೆಳಿಗ್ಗೆ 10 ಗಂಟೆಗೆ ತನ್ನ ಪ್ರಮುಖ 16 ಸ್ಟೋರ್‌ಗಳನ್ನು ತೆರೆಯದೇ ಮುಚ್ಚಲು ನಿರ್ಧರಿಸಿದೆ. ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳ ಸಲಹೆಯ ಮೇರೆಗೆ ಗ್ರಾಹಕರ ಸುರಕ್ಷತಾ ಕ್ರಮವಾಗಿ ನಿರ್ಧಾರ ಕೈಗೊಂಡಿರುವುದಾಗಿ ಸ್ವಾಚ್ ಕಂಪೆನಿ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದೆ.
Also Read : ಅರ್ಧ ಬೆಲೆಗೆ ಸ್ಯಾಮ್‌ಸಂಗ್ 5G ಮೊಬೈಲ್‌ಗಳು! ಫೋನ್‌ಗಳಿಗೆ ವಿಶೇಷ ರಿಯಾಯಿತಿ
ದುಬೈ ಮಾಲ್‌ನಲ್ಲೂ ಸ್ವಾಚ್ ವಾಚ್ ಬಿಡುಗಡೆ ರದ್ದು
ವಿಶ್ವದ ಅತಿ ದೊಡ್ಡ ಶಾಪಿಂಗ್ ಮಾಲ್ ಆದ ದುಬೈ ಮಾಲ್ (Dubai Mall) ಮತ್ತು ಮಾಲ್ ಆಫ್ ದಿ ಎಮಿರೇಟ್ಸ್‌ನಲ್ಲಿಯೂ ರಾಯಲ್ ಪಾಪ್ ವಾಚ್ ಖರೀದಿಸಲು ಸಾವಿರಾರು ಜನ ಮುಗಿಬಿದ್ದಿದ್ದರು. 2022ರ ‘ಮೂನ್‌ಸ್ವಾಚ್’ ಕ್ರೇಜ್ ನೆನಪಿಸುವಂತಿದ್ದ ಈ ಜನಸಾಗರವನ್ನು ಕಂಡು ಹೆದರಿದ ಯುಎಇ ಸ್ವಾಚ್ ಸಂಸ್ಥೆಯು ಭದ್ರತೆಯ ಹಿತದೃಷ್ಟಿಯಿಂದ ವಾಚ್ ಮಾರಾಟವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಇನ್ನು ಸಿಂಗಾಪುರದಲ್ಲಿಯೂ ಕೇವಲ 40 ವಾಚ್‌ಗಳನ್ನು ಮಾತ್ರವೇ ಮಾರಾಟ ಮಾಡಿ ಸ್ಟೋರ್ ಬಂದ್ ಮಾಡಲಾಗಿದೆ. ಕಳೆದ 24 ಗಂಟೆಗಳಿಂದ ಕ್ಯೂನಲ್ಲಿ ನಿಂತಿದ್ದ ಗ್ರಾಹಕರು ಆಕ್ರೋಶಗೊಂಡು ಗಲಾಟೆ ನಡೆಸಿದರು. ಲಂಡನ್ ಮತ್ತು ಲಿವರ್‌ಪೂಲ್‌ನಲ್ಲೂ ಸ್ಟೋರ್ ಮುಚ್ಚಿದ್ದನ್ನು ಕೇಳಿ ಉದ್ರಿಕ್ತರಾದ ಜನರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
Also Read : ಫೋನ್ ಓವರ್‌ಹೀಟ್ ಸಮಸ್ಯೆಗೆ ತಜ್ಞರ ಸಲಹೆ! ತಪ್ಪಾದ ಚಾರ್ಜಿಂಗ್ ವಿಧಾನಗಳು ತಪ್ಪಿಸಿ
ಏನಿದು ರಾಯಲ್ ಪಾಪ್ ವಾಚ್ ? ಇದರ ಬೆಲೆ ದುಬಾರಿ ಯಾಕೆ ?
ಮಾರುಕಟ್ಟೆಯಲ್ಲಿ ಭಾರಿ ಹೈಪ್ ಸೃಷ್ಟಿಸಿರುವ ಈ ‘ಆಡೆಮಾರ್ಸ್ ಪಿಗೆ x ಸ್ವಾಚ್ ರಾಯಲ್ ಪಾಪ್’ ವಾಚ್ ಸಂಗ್ರಹವು ಒಟ್ಟು 8 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇದು 1980ರ ದಶಕದ ಸ್ವಾಚ್ ಪಾಪ್ ವಾಚ್‌ಗಳ ವಿನ್ಯಾಸಗಳಿಗೆ ಗ್ರಾಹಕರು ಫಿದಾ ಆಗಿದ್ದಾರೆ
ಈ ವಾಚ್‌ನ ಆರಂಭಿಕ ಬೆಲೆ ಸುಮಾರು £335 (ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹35,000ಕ್ಕೂ ಹೆಚ್ಚು).
ಏನಿದರ ಫೀಚರ್ಸ್: ಇದರಲ್ಲಿ ಸ್ವಿಸ್ ಮೇಡ್ ಮೆಕ್ಯಾನಿಕಲ್ ಸಿಸ್ಟಮ್51 (Sistem51) ಮೂವ್‌ಮೆಂಟ್ ಬಳಸಲಾಗಿದ್ದು, 90 ಗಂಟೆಗಳ ಪವರ್ ರಿಸರ್ವ್ ಹೊಂದಿದೆ. ಪ್ರಸಿದ್ಧ ‘ರಾಯಲ್ ಓಕ್’ ವಾಚ್‌ನ ಎಂಟುಕೋನದ ಬೆಜೆಲ್ ಮಾದರಿಯನ್ನು ಇದು ಹೊಂದಿದೆ.
Royal Pop Watch Launch : swatch audemars piguet royal pop watch launch chaos stores closed



