ಕಾಕ್ರೋಚ್ ಜನತಾ ಪಾರ್ಟಿ ನಿಷೇಧ..! ಕೇಂದ್ರದಿಂದ ಬಿಗ್ ಶಾಕ್

ತಮಾಷೆಗೆಂದು ಅಭಿಜಿತ್ ದಿಪ್ಕೆ ಎಂಬವರು ಸ್ಥಾಪಿಸಿದ ಕಾಕ್ರೋಚ್ ಜನತಾ ಪಾರ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೆಸರು ಕಾಕ್ರೋಚ್ ಜನತಾ ಪಾರ್ಟಿ (Cockroach Janta Party). ತಮಾಷೆಗೆಂದು ಅಭಿಜಿತ್ ದಿಪ್ಕೆ ಎಂಬವರು ಸ್ಥಾಪಿಸಿದ ಕಾಕ್ರೋಚ್ ಜನತಾ ಪಾರ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.

ಬರೋಬ್ಬರಿ 13 ಮಿಲಿಯನ್ ಫಾಲೋವರ್ಸ್ ಗಳಿಸಿದ್ದ ಈ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.  ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಈ ವಿಚಾರವನ್ನು ಖುದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡುವ ಮೂಲಕ ಖಚಿತಪಡಿಸಿದ್ದಾರೆ. “ನಿರೀಕ್ಷೆಯಂತೆ ಕಾಕ್ರೋಚ್ ಜನತಾ ಪಕ್ಷದ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ” ಎಂದು ಬರೆದುಕೊಂಡಿದ್ದಾರೆ.

ಅಭಿಜಿತ್ ದಿಪ್ಕೆ ಸ್ಥಾಪಿಸಿದ ಈ ಕಾಕ್ರೋಚ್ ಜನತಾ ಪಾರ್ಟಿ ಪಕ್ಷವು ಕೇವಲ 5 ದಿನಗಳಲ್ಲಿ 13 ಮಿಲಿಯನ್ ಫಾಲೋವರ್ಸ್ ಸಂಪಾದಿಸಿತ್ತು. ವಿಪರ್ಯಾಸ ಎಂದರೆ ಈ ಪಕ್ಷದ ಫಾಲೋವರ್ಸ್ ಸಂಖ್ಯೆ ಬಿಜೆಪಿಗಿಂತಲೂ ಜಾಸ್ತಿಯಾಗಿತ್ತು. ಎಕ್ಸ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಕ್ರೇಜ್ ಹೆಚ್ಚುತ್ತಿರುವ ನಡುವೆಯೇ ಬ್ಯಾನ್ ಶಾಕ್ ಎದುರಾಗಿದೆ.

ಈಗ ಕಾಕ್ರೋಚ್ ಜನತಾ ಪಾರ್ಟಿ ಫಾಲೋ ಮಾಡಲು ಯತ್ನಿಸುತ್ತಿರುವವರಿಗೆ ಕಾನೂನು ಸುವ್ಯವಸ್ಥೆ ಅಥವಾ ಕಾನೂನು ಪ್ರತಿಕ್ರಿಯೆಯ ಭಾಗವಾಗಿ ಈ ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ ಎಂಬ ಸಂದೇಶ ಬರುತ್ತಿದೆ ಎನ್ನಲಾಗಿದೆ.

ಕಾಕ್ರೋಚ್ ಜನತಾ ಪಾರ್ಟಿಯು ಹಾಸ್ಯದ ವಿಚಾರಕ್ಕಾಗಿ ಸ್ಥಾಪನೆಗೊಂಡಿತ್ತು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲವನ್ನು ಗಳಿಸಿತ್ತು. ಎಲ್ಲೆಡೆ ಸಿಜೆಪಿ ಪಕ್ಷದ ಸುದ್ದಿಯೇ ಕೇಳಿ ಬರುತ್ತಿತ್ತು. ಬಿಜೆಪಿಯನ್ನೂ ಮೀರಿ ಸೋಶಿಯಲ್ ಮೀಡಿಯಾದಲ್ಲಿ ತನ್ನಕ್ರೇಜ್ ಹೆಚ್ಚಿಸಿಕೊಂಡಿದ್ದ ಈ ಪಕ್ಷವು, ದೇಶದ ರಾಜಕಾರಣದಲ್ಲೆನಾದರೂ ಬದಲಾವಣೆ ತರುತ್ತಾ ಎಂದು ಯೋಚಿಸುತ್ತಿರುವಾಗಲೇ ಈ ಬೆಳವಣಿಗೆ ಸಂಭವಿಸಿದೆ.  ಈ ಸವಾಲಾನ್ನು ಕಾಕ್ರೋಚ್ ಯಾವ ರೀತಿ ಎದುರಿಸುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories