ದಿನ ಭವಿಷ್ಯ 27 ಮೇ 2026: ದ್ವಾದಶ ರಾಶಿಗಳಿಗೆ ಇಂದು ಗ್ರಹಗತಿಗಳ ಬದಲಾವಣೆ; ಯಾರಿಗೆ ಒಲಿಯಲಿದೆ ಧನಲಕ್ಷ್ಮಿ?
Dina Bhavishya 27 May 2026 : ಗೃಹಗಳ ಸಂಚಾರ ಮತ್ತು ನಕ್ಷತ್ರಗಳ ಪ್ರಭಾವದಿಂದಾಗಿ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿವೆ.

ದಿನ ಭವಿಷ್ಯ (Dina Bhavishya 27 May 2026) :ಗೃಹಗಳ ಸಂಚಾರ ಮತ್ತು ನಕ್ಷತ್ರಗಳ ಪ್ರಭಾವದಿಂದಾಗಿ ದ್ವಾದಶ ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳು ಕಂಡುಬರಲಿವೆ. ಕೆಲವು ರಾಶಿಯವರಿಗೆ ಇಂದು ಹಠಾತ್ ಧನಲಾಭ ಮತ್ತು ವೃತ್ತಿಜೀವನದಲ್ಲಿ ಭಾರಿ ಪ್ರಗತಿಯ ಯೋಗವಿದ್ದರೆ, ಇನ್ನು ಕೆಲವು ರಾಶಿಯವರು ಆರ್ಥಿಕ ನಷ್ಟ ಹಾಗೂ ವಿವಾದಗಳಿಂದ ದೂರವಿರಬೇಕಾದ ಎಚ್ಚರಿಕೆ ಸಂದೇಶವಿದೆ.
ಮೇಷ ರಾಶಿ (Aries)
ಇಂದು ಮೇಷ ರಾಶಿಯವರಿಗೆ ವೃತ್ತಿರಂಗದಲ್ಲಿ ಹೊಸ ಜವಾಬ್ದಾರಿಗಳು ಸಿಗಲಿವೆ. ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಶ್ಲಾಘನೆ ವ್ಯಕ್ತವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕುವುದು ಒಳ್ಳೆಯದು. ಉದ್ಯಮಿಗಳಿಗೆ ಹೊಸ ಹೂಡಿಕೆಯಿಂದ ಲಾಭವಾಗಲಿದೆ. ದಾಂಪತ್ಯ ಜೀವನದಲ್ಲಿ ಮಧುರತೆ ಇರಲಿದ್ದು, ಹಿರಿಯರ ಆರೋಗ್ಯದ ಕಡೆ ಗಮನವಿರಲಿ.
ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ಇಂದು ಧನಲಾಭದ ಬಲವಾದ ಯೋಗವಿದೆ. ದೀರ್ಘಕಾಲದ ಬಾಕಿ ವಸೂಲಿಯಾಗಲಿದ್ದು, ಆರ್ಥಿಕ ಮುಗ್ಗಟ್ಟು ದೂರಾಗಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದ್ದು, ಸಂಗಾತಿಯೊಂದಿಗೆ ಆನಂದದ ಕ್ಷಣಗಳನ್ನು ಕಳೆಯುವಿರಿ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಇಂದು ಶುಭ ಸುದ್ದಿ ಸಿಗಲಿದೆ. ಆರೋಗ್ಯ ಉತ್ತಮವಾಗಿರುತ್ತದೆ, ಪ್ರಯಾಣದಿಂದ ಲಾಭ ಉಂಟಾಗಲಿದೆ.
ಮಿಥುನ ರಾಶಿ (Gemini)
ಮಿಥುನ ರಾಶಿಯವರು ಇಂದು ಮಾತಿನ ಮೇಲೆ ಹಿಡಿತ ಸಾಧಿಸುವುದು ಅತ್ಯಂತ ಅವಶ್ಯಕ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ವ್ಯಾಪಾರಸ್ಥರಿಗೆ ಸಾಧಾರಣ ಲಾಭ ಸಿಗಲಿದ್ದು, ಹೊಸ ಒಪ್ಪಂದಗಳಿಗೆ ಸಹಿ ಹಾಕುವಾಗ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ. ಸಂಜೆ ವೇಳೆಗೆ ಶುಭ ಸಮಾಚಾರ ಸಿಗಲಿದೆ.
ಕರ್ಕಾಟಕ ರಾಶಿ (Cancer)
ಇಂದು ಕರ್ಕಾಟಕ ರಾಶಿಯವರಿಗೆ ಮಾನಸಿಕ ಶಾಂತಿ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಕುಟುಂಬದೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ಆಸ್ತಿ ಖರೀದಿ ಅಥವಾ ಮಾರಾಟ ಪ್ರಕ್ರಿಯೆಗಳಿಗೆ ಇಂದು ಸಕಾಲ. ವೃತ್ತಿಜೀವನದಲ್ಲಿ ನಿಮ್ಮ ಪ್ರಗತಿಗೆ ಹೊಸ ದಾರಿಗಳು ತೆರೆದುಕೊಳ್ಳಲಿವೆ. ಆರ್ಥಿಕವಾಗಿ ದಿನವು ಅನುಕೂಲಕರವಾಗಿದ್ದು, ಆರೋಗ್ಯ ಸುಧಾರಿಸಲಿದೆ.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಿದೆ. ಉದ್ಯೋಗದಲ್ಲಿ ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದ್ದು, ಬಡ್ತಿ ಅಥವಾ ಸಂಬಳ ಹೆಚ್ಚಳದ ಸೂಚನೆಗಳಿವೆ. ಕೌಟುಂಬಿಕ ಆಸ್ತಿ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸು ಪ್ರಫುಲ್ಲವಾಗಲಿದೆ. ಆರ್ಥಿಕ ಸ್ಥಿತಿ ಅತ್ಯಂತ ಭದ್ರವಾಗಿರುತ್ತದೆ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಿರಲಿದೆ. ಯಾವುದೇ ಕೆಲಸವನ್ನು ಆತುರದಿಂದ ಮಾಡದೆ ಯೋಜನಾಬದ್ಧವಾಗಿ ಮಾಡಿ. ಆರ್ಥಿಕ ವ್ಯವಹಾರಗಳಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ, ನಷ್ಟದ ಸಾಧ್ಯತೆ ಇದೆ. ಸಂಗಾತಿಯ ಬೆಂಬಲವು ನಿಮಗೆ ಧೈರ್ಯ ತುಂಬಲಿದೆ. ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಿ, ವಿಶೇಷವಾಗಿ ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ.
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ಇಂದು ಕಲೆ, ಸಾಹಿತ್ಯ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಆಲೋಚನೆಗಳು ನಿಮ್ಮ ವ್ಯಾಪಾರವನ್ನು ವೃದ್ಧಿಸಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಹಠಗಳು ಮೂಡದಂತೆ ಜಾಗ್ರತೆ ವಹಿಸಿ. ಧನ ಹರಿವು ಚೆನ್ನಾಗಿದ್ದು, ಹಳೆಯ ಸಾಲಗಳಿಂದ ಮುಕ್ತಿ ಸಿಗಲಿದೆ.
ವೃಶ್ಚಿಕ ರಾಶಿ (Scorpio)
ವೃಶ್ಚಿಕ ರಾಶಿಯವರಿಗೆ ಇಂದು ಮಿಶ್ರಫಲ ತರಲಿದೆ. ಕೋಪ ಮತ್ತು ಹಠದ ಸ್ವಭಾವದಿಂದಾಗಿ ಕೈಗೆ ಬಂದ ಅವಕಾಶಗಳು ಕೈತಪ್ಪಬಹುದು, ಶಾಂತರಾಗಿರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗಲು ಕಾಯಬೇಕಾಗಬಹುದು. ಯುವಕರಿಗೆ ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿದ್ದು, ಯಾವುದೇ ದೊಡ್ಡ ಹೂಡಿಕೆಗೆ ಇಂದು ಕೈಹಾಕಬೇಡಿ.
ಧನಸ್ಸುರಾಶಿ (Sagittarius)
ಇಂದು ಆತ್ಮವಿಶ್ವಾಸ ಹೆಚ್ಚಿರಲಿದೆ. ದೀರ್ಘಕಾಲದ ಯೋಜನೆಯೊಂದು ಯಶಸ್ವಿಯಾಗಿ ಪೂರ್ಣಗೊಳ್ಳುವುದರಿಂದ ನೆಮ್ಮದಿ ಸಿಗಲಿದೆ. ತಂದೆಯ ಕಡೆಯಿಂದ ಆರ್ಥಿಕ ಸಹಾಯ ಅಥವಾ ಮಾರ್ಗದರ್ಶನ ಸಿಗಲಿದೆ. ಉದ್ಯೋಗಿಗಳಿಗೆ ವಿದೇಶ ಪ್ರವಾಸದ ಯೋಗವಿದೆ. ಉದ್ಯಮಿಗಳಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
ಮಕರ ರಾಶಿ (Capricorn)
ಮಕರ ರಾಶಿಯವರಿಗೆ ಇಂದು ಖರ್ಚುಗಳು ದುಪ್ಪಟ್ಟಾಗುವ ಸಾಧ್ಯತೆ ಇದೆ. ಬಜೆಟ್ ಪ್ರಕಾರ ನಡೆದುಕೊಳ್ಳುವುದು ಸೂಕ್ತ. ಉದ್ಯೋಗ ಸ್ಥಳದಲ್ಲಿ ರಾಜಕೀಯದಿಂದ ದೂರವಿರಿ, ಇಲ್ಲದಿದ್ದರೆ ಮುಜುಗರ ಎದುರಿಸಬೇಕಾಗಬಹುದು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರಾಗಬಹುದು, ವೈದ್ಯರ ಸಲಹೆ ಪಡೆಯಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಲಿದೆ.
ಕುಂಭ ರಾಶಿ (Aquarius)
ಕುಂಭ ರಾಶಿಯವರಿಗೆ ಇಂದು ಅತ್ಯಂತ ಲಾಭದಾಯಕ ದಿನವಾಗಿದೆ. ನಿರೀಕ್ಷಿತ ಮೂಲಗಳಿಂದ ಧನಲಾಭವಾಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೊಸ ಉದ್ಯೋಗದ ಆಫರ್‌ಗಳು ನಿಮ್ಮ ಕೈಸೇರಲಿವೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ನೂತನ ಮಿತ್ರರ ಸೇರ್ಪಡೆಯಾಗಲಿದೆ. ನಿವೇದಿಸಿದ ಪ್ರೀತಿಯ ಪ್ರಸ್ತಾಪಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿದೆ.
ಮೀನ ರಾಶಿ (Pisces)
ಮೀನ ರಾಶಿಯವರಿಗೆ ಇಂದು ಕೆಲಸ ಕಾರ್ಯಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಕೌಟುಂಬಿಕ ವಾತಾವರಣವು ಸಂತೋಷದಿಂದ ಕೂಡಿರಲಿದೆ. ಮನೆಗೆ ಅತಿಥಿಗಳ ಆಗಮನದಿಂದ ಸಂಭ್ರಮದ ವಾತಾವರಣವಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಆರ್ಥಿಕ ಹೂಡಿಕೆಗಳಿಗೆ ಇಂದು ಅತ್ಯಂತ ಪ್ರಶಸ್ತವಾದ ದಿನವಾಗಿದೆ.
Dina Bhavishya 27 May 2026 Horoscope Today



