Sukanya Samriddhi Yojana : ಸುಕನ್ಯಾ ಸಮೃದ್ದಿ ಯೋಜನೆ ಪೋಷಕರ ಗಮನಕ್ಕೆ : ಈ ತಪ್ಪು ಮಾಡಿದ್ರೆ 5 ಲಾಭ ಕಟ್
ಹೆಣ್ಣು ಮಕ್ಕಳಿವಗೆ ಭವಿಷ್ಯದಲ್ಲಿ ಆರ್ಥಿಕ ನೆರವಾಗುವ ದೃಷ್ಟಿಯಿಂದಲೇ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆ' (Sukanya Samriddhi Yojana) ಜಾರಿಗೆ ತಂದಿದೆ. ಆದರೆ ಈ ಯೋಜನೆಯಲ್ಲಿ ನೀವು ಮಾಡುವ ಈ ಐದು ತಪ್ಪುಗಳಿಂದ ನಿಮ್ಮ ಲಾಭಕ್ಕೆ ಕುತ್ತು ಬರೋದು ಗ್ಯಾರಂಟಿ.

ಹೆಣ್ಣು ಮಕ್ಕಳಿವಗೆ ಭವಿಷ್ಯದಲ್ಲಿ ಆರ್ಥಿಕ ನೆರವಾಗುವ ದೃಷ್ಟಿಯಿಂದಲೇ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆ’ (Sukanya Samriddhi Yojana) ಜಾರಿಗೆ ತಂದಿದೆ. ಆದರೆ ಈ ಯೋಜನೆಯಲ್ಲಿ ನೀವು ಮಾಡುವ ಈ ಐದು ತಪ್ಪುಗಳಿಂದ ನಿಮ್ಮ ಲಾಭಕ್ಕೆ ಕುತ್ತು ಬರೋದು ಗ್ಯಾರಂಟಿ. ಒಂದೊಮ್ಮೆ ಸುಕನ್ಯ ಸಮೃದ್ದಿ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದ್ರೆ ಈ ಸ್ಟೋರಿಯನ್ನು ತಪ್ಪದೇ ಓದಿ.
ಸುಕನ್ಯಾ ಸಮೃದ್ದಿ ಯೋಜನೆ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿರುವ ಯೋಜನೆಗಳಲ್ಲಿ ಒಂದು. ಆದರೆ ನೀವು ಮಾಡುವ ತಪ್ಪುಗಳು ನಿಮ್ಮ ಮಗಳ ಹೆಸರಿನ ಖಾತೆಯೇ ಸ್ಥಗಿತಗೊಳ್ಳಬಹುದು. ಅಷ್ಟೇ ಅಲ್ಲಾ ಪಾಲಿಸಿಯ ಮೆಚುರಿಟಿ (Maturity) ವೇಳೆಯಲ್ಲಿ ಸಿಗಬೇಕಾದ ಬಡ್ಡಿಯೂ ಕೂಡ ಸಿಗದೇ ಇರಬಹುದು. ಹಾಗಾದ್ರೆ ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಗರಿಷ್ಠ ಲಾಭ ಪಡೆಯಲು ಏನು ಮಾಡಬೇಕು ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
1. ಕನಿಷ್ಠ ಮೊತ್ತ ಪಾವತಿಸದಿದ್ದರೆ ಅಕೌಂಟ್ ಡಿಫಾಲ್ಟ್
ಅತ್ಯಂತ ಕಡಿಮೆ ಹಣವನ್ನು ಪಾವತಿ ಮಾಡುವ ಮೂಲಕ ಸುಕನ್ಯಾ ಸಮೃದ್ದಿ ಯೋಜನೆಗೆ ಸೇರ್ಪಡೆ ಆಗೋದಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದು ಆರ್ಥಿಕ ವರ್ಷದಲ್ಲಿ ನೀವು ನಿಮ್ಮ ಮಗಳ ಖಾತೆಗೆ ಕನಿಷ್ಠ 250 ರೂಪಾಯಿ ಜಮೆ ಮಾಡಲೇ ಬೇಕು. ಒಂದೊಮ್ಮೆ ಈ ಮೊತ್ತವನ್ನು ನೀವು ಪಾವತಿ ಮಾಡದೆ ಇದ್ರೆ, ಖಾತೆ ಢಿಫಾಲ್ಟ್ ಆಗುವ ಸಾಧ್ಯತೆಯಿದೆ. ಒಂದೊಮ್ಮೆ ಖಾತೆ ಡಿಫಾಲ್ಟ್ ಆದ್ರೆ ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಸಿಗುವ ಬಡ್ಡಿದರದ ಬದಲು ಉಳಿತಾಯ ಖಾತೆ (Savings Account)ಗೆ ನೀಡುವ ಬಡ್ಡಿಯನ್ನಷ್ಟೇ ಜಮೆ ಮಾಡಲಾಗುತ್ತದೆ.
2. ತಿಂಗಳ ಕೊನೆಯಲ್ಲಿ ಹಣ ಜಮೆ ಮಾಡಬೇಡಿ
ನೀವು ಯಾವುದೇ ಕಾರಣಕ್ಕೂ ಈ ಯೋಜನೆಯ ಹಣವನ್ನು ಜಮೆ ಮಾಡೋದಕ್ಕೆ ತಿಂಗಳ ಕೊನೆಯವರೆಗೂ ಕಾಯೋದಕ್ಕೆ ಹೋಗಬೇಡಿ. ಯಾಕೆಂದ್ರೆ ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ಬಡ್ಡಿಯನ್ನು 5ನೇ ತಾರೀಕಿನ ನಂತರದ ಕನಿಷ್ಟ ಬ್ಯಾಲೆನ್ಸ್ ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಆರ್ಥಿಕ ವರ್ಷದ ಆರಂಭ ಅಂದ್ರೆ ಎಪ್ರಿಲ್ 5ನೇ ತಾರೀಕಿನ ಒಳಗಾಗಿ ಹಣ ಜಮೆ ಆಗಿದ್ರೆ ಹೆಚ್ಚಿನ ಲಾಭ ಸಿಗೋದು ಗ್ಯಾರಂಟಿ.
3. ಗರಿಷ್ಠ ಮಿತಿ ಮೀರದಂತೆ ಎಚ್ಚರವಾಗಿರಿ
ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ ಗರಿಷ್ಠವಾಗಿ 1.5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಲು ಅವಕಾಶವಿದೆ. ಒಂದೊಮ್ಮೆ ನೀವು ಅದಕ್ಕಿಂತ ಹೆಚ್ಚಿನ ಹಣವನ್ನು ಜಮೆ ಮಾಡಿದ್ರೆ ಯಾವುದೇ ಲಾಭ ಸಿಗೋದಿಲ್ಲ. ಅಷ್ಟೇ ಅಲ್ಲಾ ಹೆಚ್ಚುವರಿಯಾಗಿ ಪಾವತಿ ಮಾಡುವ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಸಿಗೋದಿಲ್ಲ ಅನ್ನೋದು ನೆನಪಿರಲಿ.
4. ಹಣ ಹಿಂಪಡೆಯಲು ಕಠಿಣ ನಿಯಮ
ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಒಮ್ಮೆ ಹೂಡಿಕೆ ಮಾಡಿರುವ ಹಣವನ್ನು ಯಾವಾಗ ಬೇಕಾದ್ರೂ ತೆಗೆಯೋದಕ್ಕೆ ಅವಕಾಶವಿಲ್ಲ. ನಿಮ್ಮ ಮಗಳಿಗೆ 18 ವರ್ಷ ಪೂರ್ಣಗೊಂಡ ನಂತರವೇ ಅಥವಾ 10ನೇ ತರಗತಿ ಪೂರ್ಣಗೊಳಿಸಿದ ಬಳಿಕ ಆಕೆಯ ಉನ್ನತ ಶಿಕ್ಷಣಕ್ಕೆ ಖಾತೆಯಲ್ಲಿ ಶೇಕಡಾ 50 ರಷ್ಟು ಹಣವನ್ನು ಬಳಕೆ ಮಾಡಬಹುದಾಗಿದೆ. ಈ ಯೋಜನೆಯ ಮೆಚ್ಯುರಿಟಿ ಅವಧಿ 21 ವರ್ಷ ಅನ್ನೋದನ್ನು ನೆನಪಡಿ. ಅದಕ್ಕೂ ಮೊದಲು ಹಣವನ್ನು ವಾಪಾಸ್ ಪಡೆಯೋದಕ್ಕೆ ಸಾಧ್ಯವಿಲ್ಲ.
ಇಬ್ಬರಿಗಿಂತ ಹೆಚ್ಚು ಹೆಣ್ಣು ಮಕ್ಕಳಿಗೆ ಇಲ್ಲ ಅವಕಾಶ
ಒಂದು ದಂಪತಿಯ ಇಬ್ಬರು ಮಕ್ಕಳಿಗೆ ಮಾತ್ರವೇ ಸುಕನ್ಯಾ ಸಮೃದ್ದಿ ಯೋಜನೆಯ ಅಡಿಯಲ್ಲಿ ಲಾಭ ಪಡೆಯೋದಕ್ಕೆ ಅವಕಾಶವಿದೆ. ಒಂದೊಮ್ಮೆ ಮೊದಲ ಹೆರಿಗೆ ಒಂದು ಹೆಣ್ಣು ಮಗು ಹುಟ್ಟಿ, ಎರಡನೇ ಹೆರಿಕೆಯಲ್ಲಿ ಅವಳಿ ಹೆಣ್ಣು ಮಕ್ಕಳು ಜನಿಸಿದ್ರೆ ಅಂತಹ ಮಕ್ಕಳು ಈ ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆಯಬಹುದಾಗಿದೆ.
ಹೆಣ್ಣು ಮಕ್ಕಳ ಭವಿಷ್ಯವನ್ನು ಸುಭದ್ರವಾಗಿಸುವ ಉದ್ದೇಶದಿಂದಲೇ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಕಡಿಮೆ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಗರಿಷ್ಠ ಲಾಭವನ್ನು ಪಡೆಯಬಹುದಾಗಿದೆ.
sukanya samriddhi yojana rules mistakes to avoid Kannada News

