ಮುಂಬೈ: ನಮ್ಮೆಲ್ಲ ಮಾಹಿತಿ,ತಂತ್ರಜ್ಞಾನ ತಿಳುವಳಿಕೆ,ಅನುಮಾನಕ್ಕೆ ಉತ್ತರ ಕೊಡೋ ಏಕೈಕ ಶಕ್ತಿ ಎಂದರೇ ಅದು ಗೂಗಲ್. ಆದರೆ ಇನ್ಮುಂದೆ ಗೂಗಲ್ ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬೋಕೆ ಮೊದಲು ಎಚ್ಚರ ವಹಿಸಲೇ ಬೇಕು. ಯಾಕೆ ಅಂದ್ರಾ ಮತ್ತೊಮ್ಮೆ ಗೂಗಲ್ ಸರ್ಚ್ ಇಂಜೀನ್ ಪ್ರಮಾದ ಎಸಗಿದ್ದು, ಕ್ರಿಕೆಟ್ ದಂತಕತೆ ಸಚಿನ್ ಪುತ್ರಿಯನ್ನು ಕ್ರಿಕೆಟಿಗ ಶುಬ್ಮನ್ ಗಿಲ್ ಪತ್ನಿ ಎಂದು ತೋರಿಸುತ್ತಿದೆ.

ಹೌದು ಗೂಗಲ್ ನಲ್ಲಿ ಶುಬ್ಮನ್ ಗಿಲ್ ವೈಫ್ ಎಂದು ಟೈಪ್ ಮಾಡಿದರೇ ಅದು ಸಾರಾ ತೆಂಡೂಲ್ಕರ್ ಹೆಸರು ತೋರಿಸುತ್ತಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಮಿಂಚುತ್ತಿರುವ ಶುಬ್ಮನ್ ಗಿಲ್ ಹಾಗೂ ಸಾರಾ ತೆಂಡೂಲ್ಕರ್ ನಡುವೆ ಲವ್ವಿ ಡವ್ವಿ ಇದೆ ಎಂಬ ಗಾಸಿಪ್ ಈ ಹಿಂದೆ ಕೇಳಿಬಂದಿತ್ತು. ಆದರೆ ಗೂಗಲ್ ಮಾತ್ರ ಗಾಸಿಪ್ ಗಿಂತ ಒಂದು ಹೆಜ್ಜೆ ಮುಂದೇ ಹೋಗಿ ಅವರಿಬ್ಬರನ್ನು ಪತಿ-ಪತ್ನಿ ಎನ್ನುವ ಮೂಲಕ ಅವಾಂತರ ಎಸಗಿದೆ.

ಶುಬ್ಮನ್ ಗಿಲ್ ಹಾಗೂ ಸಾರಾ ಅಲಿಕಾನ್ ನಡುವೆ ಪ್ರೀತಿ-ಪ್ರೇಮವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕೆ ಪೂರಕ ಎಂಬಂತೆ ಕ್ರಿಕೆಟಿಗ ಸಚಿನ್ ಪ್ರೀತಿಯ ಪುತ್ರಿ ಸಾರಾ ಕೂಡ ಶುಬ್ಮನ್ ಜೊತೆ ಹಲವೆಡೆ ಕಾಣಿಸಿಕೊಂಡು ಈ ಗಾಸಿಪ್ ಗಳಿಗೆ ಜೀವ ತುಂಬಿದ್ದರು. ಸಧ್ಯದಲ್ಲೇ ಇವರಿಬ್ಬರು ಹಸೆಮಣೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದೀಗ ಗೂಗಲ್ ಈ ರೀತಿ ಸರ್ಚ್ ರಿಸಲ್ಟ್ ತೋರಿಸುತ್ತಿದ್ದು, ಈ ಸ್ಕ್ರಿನ್ ಶಾಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಹಾಗೂ ಶೇರ್ ಆಗುತ್ತಿದೆ. ಆದರೆ ಇದುವರೆಗೂ ಈ ಬಗ್ಗೆ ಗೂಗಲ್ ಆಗಲಿ ಅಥವಾ ಸಚಿನ್ ಪುತ್ರಿ ಸಾರಾ ಆಗಲಿ ಯಾವುದೇ ರಿಯಾಕ್ಷನ್ ನೀಡಿಲ್ಲ.

ಈ ಮೊದಲು ಕೂಡ ಗೂಗಲ್ ಈ ರೀತಿಯ ಹಲವು ಎಡವಟ್ಟು ಎಸಗಿದೆ. ಇತ್ತೀಚಿಗಷ್ಟೇ ಅನುಷ್ಕಾ ಶರ್ಮಾ ವಿಷಯದಲ್ಲೂ ಗೂಗಲ್ ಇಂತದ್ದೇ ಪ್ರಮಾದ ಎಸಗಿತ್ತು. ಈಗ ಮತ್ತೊಮ್ಮೆ ಗೂಗಲ್ ಮಿಸ್ಟೇಕ್ ರಿಪೀಟ್ ಆಗಿದೆ. ಅತಿ ಹೆಚ್ಚು ಜನರು ಯಾವುದನ್ನು ಸರ್ಚ್ ಮಾಡುತ್ತಾರೋ ಅದನ್ನೇ ಗೂಗಲ್ ಅಪ್ಡೇಟ್ ಮಾಡುತ್ತದೆ ಎಂಬ ಮಾತು ಇದೆ. ಆದರೆ ಸಧ್ಯಕ್ಕಂತೂ ಗೂಗಲ್ ಈ ಸರ್ಚ್ ರಿಸಲ್ಟ್ ಜನರಿಗೆ ನಗು ತರಿಸ್ತಾ ಇರೋದಂತು ಸತ್ಯ.