ಕನ್ನಡಿಗ ರಾಹುಲ್, ಗೇಲ್, ಮಾಯಂಕ್ ಅಬ್ಬರ: RCBಗೆ ಮತ್ತೆ ಮುಳುವಾದ ಕನ್ನಡಿಗರು

ದುಬೈ : ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಪರ ಆರಂಭಿಕರಾಗಿ ಕಣಕ್ಕಿಳಿದ ಆರೋನ್ ಪಿಂಚ್ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭವೊದಗಿಸುವ ಭರವಸೆಯನ್ನು ನೀಡಿದ್ರು.

ಆದರೆ 18 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್ ವಿಕೆಟ್ ಒಪ್ಪಿಸಿದ್ರೆ, ಸ್ವಲ್ಪ ಹೊತ್ತಲ್ಲೇ ಆರೋನ್ ಪಿಂಚ್ ಕೂಡ 20 ರನ್ ಗಳಿಸಿ ಔಟಾದ್ರು.

ನಂತರ ನಾಯಕ ವಿರಾಟ್ ಕೊಯ್ಲಿ ಉತ್ತಮ ಆಟವಾಡಿದ್ರು, ವಿರಾಟ್ ಕೊಯ್ಲಿ 48, ಕ್ರಿಸ್ ಮೊರಿಸ್ 25, ಶಿವಮ್ ದುಬೆ 23 ರನ್ ನೆರವಿನಿಂದ ಬೆಂಗಳೂರು ತಂಡ 6 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು.

ನಂತರ ಬ್ಯಾಟಿಂಗ್ ಗೆ ಇಳಿದ ಕನ್ನಡಿಗ ಜೋಡಿ ಕೆ.ಎಲ್.ರಾಹುಲ್ ಹಾಗೂ ಮಾಯಂಕ್ ಅಗರ್ ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು ಮಾಯಂಕ್ ಅಗರ್ ವಾಲ್ 25 ಎಸೆತಗಳಲ್ಲಿ ಬರೋಬ್ಬರಿ 45 ರನ್ ಗಳಿಸಿ ಔಟಾದ್ರೆ, ನಂತರ ರಾಹುಲ್ ಜೊತೆಯಾದ ಗೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ರು.

ಈ ಬಾರಿಯ ಐಪಿಎಲ್ ನಲ್ಲಿ ಮೊದಲ ಪಂದ್ಯವನ್ನಾಡಿದ ಕ್ರಿಸ್ ಗೇಲ್ ಆರಂಭದಲ್ಲಿ ರನ್ ಗಳಿಸಲು ಪರದಾಡಿದ್ರೂ ಕೂಡ ನಂತರದಲ್ಲಿ ವಿಕೆಟ್ ಗೆ ಕಚ್ಚಿಕೊಂಡು ಆಟವಾಡಿದ್ರು.

ಕೆ.ಎಲ್.ರಾಹುಲ್ 49 ಎಸೆತಗಳಲ್ಲಿ 61ರನ್ ಗಳಿಸಿದ್ರೆ, ಕ್ರಿಸ್ ಗೇಲ್ 45 ಎಸೆತಗಳಲ್ಲಿ 53 ರನ್ ಸಿಡಿಸುವ ಮೂಲಕ ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದ್ರು.

ಕೊನೆಯ 6 ಎಸೆತಗಳಲ್ಲಿ ಕೇವಲ 2 ರನ್ ಅವಶ್ಯಕತೆಯಿದ್ದಾ ರಾಹುಲ್ ಹಾಗೂ ಗೇಲ್ ಕ್ರೀಸ್ ನಲ್ಲಿದ್ದರೂ ಕೂಡ ರನ್ ಗಳಿಸಲು ಪರದಾಡಿದ್ರು. 5 ನೇ ಎಸೆತದಲ್ಲಿ ಗೇಲ್ ರನೌಟಾದ್ರೆ, ಅಂತಿಮವಾಗಿ ಪೂರನ್ ಭರ್ಜರಿ ಸಿಕ್ಸರ್ ನೆರವಿನಿಂದ ಕಿಂಗ್ಸ್ ಇಲೆವೆನ್ ತಂಡ ಗೆಲುವಿನ ನಗೆ ಬೀರಿದೆ.

ಸಂಕ್ಷಿಪ್ತ ಸ್ಕೋರ್ :
ರಾಯಲ್ ಚಾಲೆಂಜರ್ಸ್ ಬೆಂಗಳೂರು : ವಿರಾಟ್ ಕೊಯ್ಲಿ 48 (39). ಕ್ರಿಸ್ ಮೊರಿಸ್ 25 (8), ಶಿವಂ ದುಬೆ 23 (19), ಆರೋನ್ ಪಿಂಚ್ 20 (18), ದೇವದತ್ತ ಪಡಿಕ್ಕಲ್ 18 (12). ಮುರುಗನ್ ಅಶ್ವಿನ್ 2/23, ಮೊಹಮ್ಮದ್ ಶೆಮಿ 2/45. ಅರ್ಶದೀಪ್ ಸಿಂಗ್ 1/20, ಕ್ರಿಸ್ ಜೋರ್ಡನ್ 1/20
ಕಿಂಗ್ಸ್ ಇಲೆವೆನ್ ಪಂಜಾಬ್ : ಕೆ.ಎಲ್.ರಾಹುಲ್ 61 (49). ಕ್ರಿಸ್ ಗೇಲ್ 53 ( 45), ಮಾಯಂಕ್ ಅಗರ್ ವಾಲ್ 45 (25), ಚಹಲ್ 1/35

Comments are closed.