ಬುಧವಾರ, ಜೂನ್ 18, 2025
Homeಮಿಸ್ ಮಾಡಬೇಡಿಪೋಟೋಶೂಟ್ ಸೃಷ್ಟಿಸಿದ ಅವಾಂತರ….! ಮೈಚಳಿ ಬಿಟ್ಟು ಪೋಸ್ ಕೊಟ್ಟಿದ್ದಕ್ಕೆ ಎದುರಾಯ್ತು ಸಂಕಷ್ಟ…!!

ಪೋಟೋಶೂಟ್ ಸೃಷ್ಟಿಸಿದ ಅವಾಂತರ….! ಮೈಚಳಿ ಬಿಟ್ಟು ಪೋಸ್ ಕೊಟ್ಟಿದ್ದಕ್ಕೆ ಎದುರಾಯ್ತು ಸಂಕಷ್ಟ…!!

- Advertisement -

ಬೆಂಗಳೂರು: ವೆಡ್ಡಿಂಗ್ ಪೋಟೋಶೂಟ್ ನಿಂದ ಒಂದು ಹೆಜ್ಜೆ ಮುಂದೇ ಹೋಗಿ ಬೌಡಿಯರ್ ಸೆಸನ್ ಹೆಸರಿನಲ್ಲಿ ಅರೆಬರೆ ಬಟ್ಟೆ ತೊಟ್ಟು ಪೋಟೋಶೂಟ್ ಮಾಡಿಸಿಕೊಂಡಿಸಿದ್ದ ನವಜೋಡಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ.

Photo Size

ಸ್ವಾತಂತ್ರ್ಯ ಮತ್ತು ಸ್ವೆಚ್ಛೆಯ ನಡುವೆ ಒಂದು ಅಂತರವಿದೆ. ಹಾಗೆಯೇ ಬೋಲ್ಡ್‌ ಮತ್ತು ಅಶ್ಲೀಲದ ನಡುವೆ ಒಂದು ಚಿಕ್ಕ ಗೆರೆಇದೆ. ಆದರೇ ನೀವು ಪೋಟೋ ಶೂಟ್ ಹೆಸರಿನಲ್ಲಿ ಆ ನೈತಿಕಗೆರೆಯನ್ನು ದಾಟಿದ್ದಿರಿ ಎಂದು ಜನರು ಈ ಯುವಜೋಡಿಗೆ ಛೀಮಾರಿ ಹಾಕುತ್ತಿದ್ದಾರೆ.

Namami Shankara 1 1

ಕೇರಳ ಮೂಲದ ರಿಶಿ ಕಾರ್ತಿಕೇಯನ್ ಹಾಗೂ ಲಕ್ಷ್ಮೀ ಎಂಬ ನವಜೋಡಿ ವೆಡ್ಡಿಂಗ್ ಪೋಟೋಶೂಟ್ ಬಳಿಕ ಬೌಡಿಯರ್ ಸೆಸನ್ ಎಂಬ ಹೆಸರಿನಲ್ಲಿ ಮಾದಕ ಪೋಟೋ ಶೂಟ್ ಮಾಡಿಸಿಕೊಂಡು ಪೋಟೋಗಳನ್ನು ಹಂಚಿಕೊಂಡಿತ್ತು.

Photo Shoot 3 E1602855449976

ಅದಾಗ ತಾನೇ ಮಲಗುವ ಕೋಣೆಯಿಂದ ಎದ್ದುಬಂದಂತಿರೋ ಈ ಪೋಟೋ ಶೂಟ್ ನೋಡಿ ನೆಟ್ಟಿಗರ ಕಣ್ಣು ಕೆಂಪಾಗಿದ್ದು ಮೊದಲೇ ಸ್ತ್ರೀಯರ‌ ಮೇಲಿನ ಕಿರುಕುಳದಂತಹ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಿನಲ್ಲಿ ಇದೆಂತ ಅಶ್ಲೀಲ‌ ಮಾದರಿಯನ್ನು ಸಮಾಜದ ಮುಂದಿಡುತ್ತಿದ್ದೀರಿ ಎಂದು ಜನರು ಈ ರಿಶಿ ಹಾಗೂ ಲಕ್ಷ್ಮೀ ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Photo Shoot 5 2

ಕೇರಳದ ಇಡುಕ್ಕಿಯಲ್ಲಿ ನಡೆದ ಈ ಪೋಟೋ ಶೂಟ್ ಪೋಟೋಗಳನ್ನು ಆಧಾರವಾಗಿಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬದುಕಿನ ಖಾಸಗಿತನವನ್ನು ಖಾಸಗಿಯಾಗಿಟ್ಟುಕೊಳ್ಳಿ ಎಂಬ ಟ್ರೋಲ್ ಕೂಡ ಆರಂಭವಾಗಿದೆ.

Photo Shoot 1

ಕೆಲ ಪ್ರಜ್ಞಾವಂತರು ಈ ಜೋಡಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲತೆ ಹರಡುವ ಪ್ರಯತ್ನ ಎಂದು ಆರೋಪಿಸಿ ಕಾನೂನು ಕ್ರಮಕ್ಕೆ ಪೊಲೀಸರಿಗೆ ಮನವಿ ಮಾಡಲು ನಿರ್ಧರಿಸಿದ್ದಾರಂತೆ.

Photo Shoot 2

ಒಟ್ಟಿನಲ್ಲಿ ಹನಿಮೂನ್ ನಲ್ಲಿ ಓಡಾಡ್ಕೊಂಡು ಹಾಯಾಗಿರೋದನ್ನು ಬಿಟ್ಟು ಪೋಟೋಶೂಟ್ ಹೆಸರಿನಲ್ಲಿ ಮೈಚಳಿ ಬಿಟ್ಟ ಜೋಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿ ಮುಜುಗರ ಎದುರಿಸುವಂತಾಗಿದೆ.

Photo Shoot 1 4

ರಿಶಿ ಕಾರ್ತಿಕೇಯನ್ ಹಾಗೂ ಲಕ್ಷ್ಮೀ ಪೋಟೋ ಶೂಟ್

Photo Shoot 7

ರಿಶಿ ಕಾರ್ತಿಕೇಯನ್ ಹಾಗೂ ಲಕ್ಷ್ಮೀ ಪೋಟೋ ಶೂಟ್

RELATED ARTICLES

Most Popular