ಭಾನುವಾರ, ಏಪ್ರಿಲ್ 27, 2025
HomeBreakingಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಗೆ ಹೃದಯಾಘಾತ…! ಆಸ್ಪತ್ರೆಗೆ ದಾಖಲು..!!

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಗೆ ಹೃದಯಾಘಾತ…! ಆಸ್ಪತ್ರೆಗೆ ದಾಖಲು..!!

- Advertisement -

ನವದೆಹಲಿ: ಭಾರತದ ಹಿರಿಯ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ದಂತಕತೆ ಖ್ಯಾತಿಯ ಕಪಿಲ್ ದೇವ್ ಹೃದಯಾಘಾತಕ್ಕೊಳಗಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇಂದು ಬೆಳಗ್ಗೆ ಹೃದಯಾಘಾತವಾಗಿದ್ದು, ನವದೆಹಲಿಯ ಪೋರ್ಟಿಸ್ ಎಸ್ಕಾರ್ಟ್ ಹಾರ್ಟ್ ಇನ್ ಸ್ಟಿಟ್ಯೂಟ್ ನಲ್ಲಿ ಕಪಿಲ್ ದೇವ್ ಗೆ ಚಿಕಿತ್ಸೆ ನೀಡಲಾಗುತ್ತಿದೆ‌. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಗೆ ಸಧ್ಯ ಆಂಜಿಯೋಪ್ಲ್ಯಾಸ್ಟ್ ಸರ್ಜರಿ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಕಪಿಲ್ ದೇವ್ ಅನಾರೋಗ್ಯದ ಸುದ್ದಿ ಹೊರಬೀಳುತ್ತಿದಂತೆ ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳು ಅತಂಕಕ್ಕೆ ಒಳಗಾಗಿದ್ದು ಕಪಿಲ್ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.

ಇನ್ನು ಟೀಂ ಇಂಡಿಯಾ ಆಟಗಾರರು ಕೂಡ ಟ್ವೀಟ್ ಗಳ ಮೂಲಕ ಕಪಿಲ್ ದೇವ್ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿದ್ದಾರೆ.

೧೯೮೩ ರಲ್ಲಿ ಭಾರತಕ್ಕೆ ಮೊದಲ ವಿಶ್ವ ಕಪ್ ತಂದುಕೊಟ್ಟ ಹರಿಯಾಣಾ ಮೂಲದ ಕ್ರಿಕೆಟ್ ಕಲಿ ಕಪಿಲ್ ದೇವ್ ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಆಟಗಾರರಿಗೆ ಸ್ಪೂರ್ತಿಯ ಸೆಲೆ‌.

RELATED ARTICLES

Most Popular