ಕೊರೋನಾ ನಡುವೆ ನ.17 ರಿಂದ ಪದವಿ ಶಿಕ್ಷಣ ಆರಂಭ…! ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ…!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವ ಬೆನ್ನಲ್ಲೇ ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಪುನರಾರಂಭಿಸಲು ಸರ್ಕಾರ ನಿರ್ಧರಿಸಿದ್ದು, ಶಿಕ್ಷಣ ಸಂಸ್ಥೆಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ಅವಕಾಶಗಳನ್ನು ಮುಕ್ತವಾಗಿಟ್ಟಿದೆ.

ನಗರದಲ್ಲಿ ಸಿಎಂ ಬಿ.ಎಸ್.ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪದವಿ ಕಾಲೇಜುಗಳ ಪುನರಾರಂಭದ ಕುರಿತು ಚರ್ಚೆ ನಡೆಯಿತು. ಈ ಸಭೆಯಲ್ಲಿ ನವೆಂಬರ್ 17 ರಿಂದ ಕಾಲೇಜುಗಳನ್ನು ಆರಂಭಿಸುವ ನಿರ್ಧಾರಕ್ಕೆ ಬರಲಾಗಿದ್ದು, ಇದಕ್ಕೆ ನಿಯಮಾವಳಿಗಳನ್ನು ಬಿಡುಗಡೆಮಾಡಲಾಗಿದೆ.

ಇಂಜೀನಿಯರಿಂಗ್, ಮೆಡಿಕಲ್,ಡಿಪ್ಲೋಮಾ ತರಗತಿಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ವಿದ್ಯಾರ್ಥಿಗಳಿಗೆ ಆಫ್ ಲೈನ್ ಹಾಗೂ ಆನ್ ಲೈನ್ ಎರಡು ಅವಕಾಶವನ್ನು ಮುಕ್ತವಾಗಿ ಇರಿಸಲಾಗಿದೆ.

ಈ ಬಗ್ಗೆ ವಿವರಣೆ ನೀಡಿದ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, ನವೆಂಬರ್ `17 ರಿಂದ ಡಿಗ್ರಿ,ಇಂಜೀನಿಯರಿಂಗ್, ಡಿಪ್ಲೋಮಾ  ತರಗತಿ ಆರಂಭಿಸಲಿದ್ದೇವೆ.  ಇದರೊಂದಿಗೆ ಹೈಬ್ರಿಡ್ ಶಿಕ್ಷಣ ವ್ಯವಸ್ಥೆಯೂ ಜಾರಿಗೆ ಬರಲಿದೆ. ಅಂದ್ರೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಹಾಗೂ ಆಫ್ ಲೈನ್ ಎರಡು ವಿಧಾನದಲ್ಲೂ ತರಗತಿಗೆ ಹಾಜರಾಗಲು ಅವಕಾಶವಿದೆ.

ಸರ್ಕಾರದ ನಿಯಮದಂತೆ ಕಾಲೇಜುಗಳು ಆರಂಭವಾಗಲಿದೆ. ಆದರೆ ಕಾಲೇಜಿಗೆ ಬರಲು ಬಯಸುವ ವಿದ್ಯಾರ್ಥಿಗಳು ಕಾಲೇಜಿಗೆ ಬರಬಹುದು.  ಆದರೆ ಹೀಗೆ ಕಾಲೇಜಿಗೆ ಬರುವ  ವಿದ್ಯಾರ್ಥಿಗಳು ಕಡ್ಡಾಯವಾಗಿ  ಪಾಲಕರಿಂದ ಒಪ್ಪಿಗೆ ಪತ್ರ ತರಬೇಕು. ಕಾಲೇಜಿಗೆ ಬರಲು ಇಷ್ಟವಿಲ್ಲದಿದ್ದರೇ ಆನ್ ಲೈನ್ ಶಿಕ್ಷಣ ಪಡೆಯಬಹುದು.

ಆನ್ ಲೈನ್ ಶಿಕ್ಷಣವನ್ನು ಪಡೆದು ಕಾಲೇಜಿಗೆ ಹಾಜರಾಗಲು ಅವಕಾಶವಿದೆ. ಆದರೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮೊದಲೇ ಕಾಲೇಜಿನಲ್ಲಿ  ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಸಿದ್ಧತೆ ನಡೆಸಲು ಅನುಕೂಲವಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಪ್ರ್ಯಾಕ್ಟಿಕಲ್ ಶಿಕ್ಷಣ ಅನಿವಾರ್ಯವಾಗಿರೋದರಿಂದ ಲ್ಯಾಬ್ ಗಳು ರೀಓಫನ್ ಆಗಲಿದೆ. ಕಾಲೇಜಿನಲ್ಲಿ ಮಾಸ್ಕ್ ಕಡ್ಡಾಯ. ಜೊತೆಗೆ ಸ್ಯಾನಿಟೈಸರ್ ಬಳಕೆ, ಸೋಷಿಯಲ್ ಡಿಸ್ಟಂನ್ಸ್ ಕೂಡ ಕಡ್ಡಾಯ. ಪ್ರತಿ ಕಾಲೇಜಿನಲ್ಲೂ ಒಂದು ಟಾಸ್ಕ್ ಪೋರ್ಸ್ ಕೆಲಸ ಮಾಡಲಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವ ಇರಲಿದೆ.

Comments are closed.