ಭಾನುವಾರ, ಏಪ್ರಿಲ್ 27, 2025
HomeCoastal Newsಆಪದ್ಭಾಂಧವ ರಕ್ತದಾನಿಯ ನೆರವಿಗೆ ಬೇಕಿದೆ ಸಹಾಯದ ಹಸ್ತ

ಆಪದ್ಭಾಂಧವ ರಕ್ತದಾನಿಯ ನೆರವಿಗೆ ಬೇಕಿದೆ ಸಹಾಯದ ಹಸ್ತ

- Advertisement -

ಕುಂದಾಪುರ : ಅಪಘಾತವೇ ಇರಲಿ, ಹೆರಿಗೆಯ ಸಂದರ್ಭವೇ ಇರಲಿ ಇಲ್ಲಾ ಯಾವುದೇ ತುರ್ತು ಸಂದರ್ಭದಲ್ಲಿಯೂ ರಕ್ತದ ಸಮಸ್ಯೆ ಎದುರಾರಾದಾಗ ಅಲ್ಲೊಬ್ಬರು ಪ್ರತ್ಯಕ್ಷರಾಗುತ್ತಿದ್ದರು. ಸಂಕಷ್ಟ ದಲ್ಲಿ ಇರುವವರು ಯಾರೂ ಅಂತಾನೂ ನೋಡದೆ ರಕ್ತದಾನ ಮಾಡುತ್ತಿದ್ದರು. ಆದ್ರೆ ಪರರ ಸಂಕಷ್ಟಕ್ಕೆ ಸದಾ ನೆರವಾಗುತ್ತಿದ್ದ ರಕ್ತದಾನಿ ಶಾಂತರಾಮ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಹಾರ್ದಳ್ಳಿ – ಮುಂಡಳ್ಳಿಯ ನಿವಾಸಿಯಾಗಿರುವ ಶಾಂತರಾಮ್ ಅವರು ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತನಗೆ ಬರುತ್ತಿದ್ದ ಅಲ್ಪ ದುಡಿಮೆಯಲ್ಲಿಯೇ ಶಾಂತರಾಮ್ ಅವರು ತನ್ನನ್ನ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ಅನಾರೋಗ್ಯಕ್ಕೆ ತುತ್ತಾಗಿ ರಕ್ತದ ಬೇಕು ಅಂತಾ ಕರೆ ಬಂದ್ರೆ ಸಾಕು ರಕ್ತದಾನಕ್ಕೆ ಮುಂದಾಗುತ್ತಿದ್ದ ವರು ಶಾಂತಾರಾಮ್. ಯಾವುದೇ ಫಲಾಪೇಕ್ಷೆ ಬಯಸದೆ ಶಾಂತರಾಮ ಅವರು ಮಾಡುತ್ತಿರುವ ಮಾನವಿಯ ಸತ್ಕಾರ್ಯವು ಅನುಪಮ ಅನನ್ಯ. ಸುಮಾರು 30ಕ್ಕೂ ಅಧಿಕ ಬಾರಿ ರಕ್ತದಾನವನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದರು.

ಸಾಮಾಜಿಕ ಸೇವಾ ಚಟುವಟಿಗಳಲ್ಲಿ ಸದಾ ನಿರತರಾಗಿದ್ದ ಇವರು ಸಾರ್ವಜನಿಕ ವಲಯದಲ್ಲಿ ಜನ ಮೆಚ್ಚುಗೆಯ ಸಜ್ಜನ ಶ್ರೀಸಾಮಾನ್ಯರಾಗಿದ್ದವರು. ಸಮಾಜದ ಹಲವಾರು ಸಮಾಜಮುಖಿ ಸಂಘ ಸಂಸ್ಥೆಗಳು ಶಾಂತರಾಮರ ಸಮಾಜಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದನ್ನು ಕಂಡಾಗ ಶಾಂತಾರಾಮ ಅವರ ಸೇವಾಗುಣದ ಪರಿಚಯವಾಗುತ್ತದೆ. ಸದಾ ಪರರ ನೋವಿನ, ಸಂಕಷ್ಟಕ್ಕೆ ಧ್ವನಿಯಾಗುತ್ತಿದ್ದ ಶಾಂತಾರಾಮ್ ಅವರ ಬದುಕಲ್ಲಿ ವಿಧಿ ಆಟವಾಡಿದೆ. 39 ವರ್ಷ ಶಾಂತಾರಾಮ್ ಅವರು ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಹಲವು ತಿಂಗಳಿನಿಂದಲೂ ಶಾಂತರಾಮ್ ಅವರು ಹಾಸಿಗೆಯಲ್ಲಿಯೇ ದಿನದೂಡುತ್ತಿದ್ದಾರೆ. ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ವಾರಕ್ಕೆರಡು ಬಾರಿ ಶಾಂತಾರಾಮ್ ಅವರು ಮಣಿಪಾಲದ ಖಾಸಗಿ ಆಸ್ಪತ್ರೆ ಯಲ್ಲಿ ಡಯಾಲಿಸೀಸ್ ಮಾಡಿಸಬೇಕಾಗಿದೆ. ಬದಲಿ ಕಿಡ್ನಿ ಜೋಡಣೆ ಮಾಡಲು ಸುಮಾರು 20 ಲಕ್ಷ ರೂಪಾಯಿ ವೆಚ್ಚ ತಗುಲಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸುವುದು ಕಡು ಬಡತನದಲ್ಲಿ ಬೆಳೆದ ಶಾಂತರಾಮ್ ಅವರಿಂದ ಅಸಾಧ್ಯವಾಗಿದೆ.

ತಾಯಿ, ಪತ್ನಿ ಹಾಗೂ ಹೈಸ್ಕೂಲು ಓದುತ್ತಿರುವ ಮಗಳೊಂದಿಗೆ ವಾಸವಾಗಿರುವ ಶಾಂತಾರಾಮ್ ಅವರು ಸಂಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆ. ಇಷ್ಟು ದಿನ ಇಡೀ ಕುಟುಂಬವು ಇವರೊಬ್ಬರ ಶ್ರಮ ದಾಯಕ ದುಡಿಮೆಯಿಂದ ಬದುಕು ಸಾಗಿಸಿಕೊಂಡಿದ್ದರು. ಎದುರಾದ ಚಿಂತಾಜನಕ ಪರಿಸ್ಥಿತಿಯಿಂದ ಒಂದು ಬಡ ಕುಟುಂಬವು ನರಕಯಾತನೆಗೆ ತುತ್ತಾಗಿದೆ.

ಸದಾ ಸಾಮಾಜಿಕ ಸೇವೆಯ ಮೂಲಕ ಸಮ್ಮಾನಗಳನ್ನು ಪಡೆದಿರುವ ಶಾಂತಾರಾಮ್ ಅವರಿಗೆ ಇದೀಗ ಆರ್ಥಿಕ ನೆರವಿನ ಅಗತ್ಯವಿದೆ. ನೆರವನ್ನು ನೀಡುವವರು ಸಿಂಡಿಕೇಟ್ ಬ್ಯಾಂಕ್ ಬಿದ್ಕಲ್ ಕಟ್ಟೆ ಶಾಖೆಯ ಖಾತೆ ಸಂಖ್ಯೆ : 01622250002856 IFSC :SYNB0000162 ಹಣವನ್ನು ವರ್ಗಾಯಿಸಬಹುದು. ಇಲ್ಲಾ ಶಾಂತಾರಾಮ್ ಅವರ 7996729561 PhonePay ಸಂಖ್ಯೆಗೆ ಕಳುಹಿಸಬಹುದಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular