ಸಂಗೀತ ಪ್ರೀಯರಿಗೆ ಕಿವಿಗಿಂಪು ನೀಡುತ್ತಿದೆ ಗಡಿಯಾರ : ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್.. !

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಹೆಚ್ಚು ಕುತೂಹಲ ಮೂಡಿಸಿರುವುದು ಪ್ರಬೀಕ್ ಮೊಗವೀರ್ ನಿರ್ದೇಶನದ ಗಡಿಯಾರ ಸಿನಿಮಾ. ಈಗಾಗಲೇ ಪೋಸ್ಟರ್, ಟೀಸರ್ ನಿಂದಲೇ ಸದ್ದು ಮಾಡಿದ್ದ ಗಡಿಯಾರ ಇದೀಗ ಸಾಂಗ್ಸ್ ಮೂಲಕ ಸಂಗೀತ ಪ್ರಿಯರಿಗೆ ಹುಚ್ಚು ಹಿಡಿಸುತ್ತಿದೆ.

ಗಡಿಯಾರ ಸಿನಿಮಾದ ಹಾಡುಗಳ ಟ್ರ್ಯಾಕ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸಿನಿಮಾದಲ್ಲಿನ ನಾಲ್ಕು ಹಾಡುಗಳು ಸಂಗೀತ ಪ್ರಿಯರಿಗೆ ಕಿವಿಗಿಂಪು ನೀಡುತ್ತಿದೆ. ನಿರ್ದೇಶಕ ಪ್ರಬೀಕ್ ಮೊಗವೀರ್, ಸುಭಾಶ್ ಬೆಟಗೇರಿ, ರಂಗನಾಥ್ ಬರೆದಿರುವ ಹಾಡುಗಳಿಗೆ ಖ್ಯಾತ ಗಾಯಕರಾದ ಹೇಮಂತ್ ಕುಮಾರ್, ವ್ಯಾಸರಾಜ್, ಅನುರಾಧ ಭಟ್ ಹಾಗೂ ಅಪೂರ್ವ ಶ್ರೀಕುಮಾರ್ ಧ್ವನಿ ನೀಡಿದ್ದಾರೆ. ರಾಘವ್ ಸುಭಾಶ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಅದ್ಬುತವಾಗಿ ಮೂಡಿಬಂದಿದೆ.

ಕೊರೊನಾ ಆರ್ಭಟದ ನಡುವಲ್ಲೇ ಬಿಡುಗಡೆಯಾಗಿದ್ದ ಸ್ಮೋಕಿಂಗ್ ಇಂಜುರಿಯಸ್ ಟು ಹೆಲ್ತ್ ಅಂತಾ ಸಿಗರೇಟ್ ಪ್ಯಾಕ್ ಮೇಲೆ ಬರೆದಿರುವ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಸಿಗರೇಟ್ ಸಾಂಗ್ ನ್ನು ವಿಭಿನ್ನವಾಗಿ ಸಿದ್ದಪಡಿಸಲಾಗಿದೆ. ಎಲ್ಲಾ ವಯೋಮಾನದವರಿಗೂ ಈ ಸಾಂಗ್ ಇಷ್ಟವಾಗುತ್ತೆ.

https://youtu.be/Rf6HCQMuYLg

ಇನ್ನು ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಂಗ್ ಕೂಡ ಇದ್ದು ಅನುರಾಧ ಭಟ್ ಧ್ವನಿಯಲ್ಲಿ ಇನಿಯ ನಿನ್ನ ಧ್ಯಾನದಲ್ಲಿ ಹಾಡು ಅದ್ಬುತವಾಗಿ ಮೂಡಿಬಂದಿದೆ.

https://youtu.be/WpbIzw6rSbg

ಗಡಿಯಾರ ಸಿನಿಮಾದ ಇನ್ನೊಂದು ವಿಶೇಷತೆಯೇ ಅಘೋರಿ ಹಾಡು. ಸಿನಿಮಾದಲ್ಲಿ ಅಗೋರಿಯ ಪಾತ್ರವನ್ನು ವಿಭಿನ್ನವಾಗಿ ಚಿತ್ರೀಕರಿಸಿರುವ ಚಿತ್ರ ತಂಡ ಅಘೋರಿಗಳ ಮೇಲೆಯೇ ಹಾಡೊಂದನ್ನು ರೆಡಿ ಮಾಡಿದೆ. ಖ್ಯಾತ ಗಾಯಕ ಹೇಮಂತ್ ಧ್ವನಿಯಲ್ಲಿ ಹಾಡು ಕೇಳುಗರಿಗೆ ಇಷ್ಟವಾಗುತ್ತಿದೆ.

https://youtu.be/GTfL4kWzQ84

ಇನ್ನು ನಿರ್ದೇಶಕ ಪ್ರಬೀಕ್ ಮೊಗವೀರ್ ಬರೆದಿರುವ ಸಿನಿಮಾದ ಟೈಟಲ್ ಟ್ರ್ಯಾಕ್ ಗಾಯಕ ವ್ಯಾಸರಾಜ್ ಧ್ವನಿಯಲ್ಲಿ ಸಖತ್ ಆಗಿ ಮೂಡಿಬಂದಿದೆ. ಸಮಯದ ಮಹತ್ವವನ್ನು ಸಾರುವ ಹಾಡನ್ನು Rap ಶೈಲಿಯಲ್ಲಿ ರೆಡಿ ಮಾಡಲಾಗಿದೆ.

https://youtu.be/Den-zTW3W0Q

ಈಗಾಗಲೇ ಶೂಟಿಂಗ್ ಮುಗಿಸಿರುವ ಗಡಿಯಾರ ಸಿನಿಮಾ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಹಲವು ಕನಸುಗಳನ್ನು ಹೊತ್ತು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದ ಪ್ರಬೀಕ್ ಮೊಗವೀರ್ ವಿಭಿನ್ನ ಸಿನಿಮಾವನ್ನು ತೋರಿಸಬೇಕೆಂಬ ನಿಟ್ಟಿನಲ್ಲಿಯೇ ಗಡಿಯಾರವನ್ನು ಸಿದ್ದಪಡಿಸಿ ದ್ದಾರೆ. ಬಹುತಾರಾಗಣವನ್ನು ಹೊಂದಿರುವ ಗಡಿಯಾರ ಮ್ಯೂಸಿಕಲ್ ಹಿಟ್ ಸಿನಿಮವಾಗೋದು ಗ್ಯಾರಂಟಿ ಅಂತಿದ್ದಾರೆ ಸಂಗೀತ ಪ್ರಿಯರು.

Comments are closed.