ಸ್ಯಾಂಡಲ್ ವುಡ್ ನ ಸಿನಿಮಾವೊಂದು ಸಂಚಲನ ಮೂಡಿಸಿ ಎಲ್ಲರೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಖ್ಯಾತಿ ಕೆಜಿಎಫ್ ಗಿದೆ. ಸಧ್ಯ ಕೆಜಿಎಫ್- 2 ಶೂಟಿಂಗ್ ಮುಗಿಸಿರುವ ತಂಡಕ್ಕೆ ಎಲ್ಲ ಕಡೆ ಎದುರಾಗೋ ಪ್ರಶ್ನೆ ಕೆಜಿಎಫ್-3 ಬರುತ್ತಾ ಅಂತ.

ಕೆಜಿಎಫ್ ಸೃಷ್ಟಿಸಿದ ಹವಾ ಹಾಗಿತ್ತು.ಫಿಲ್ಮ ಮೇಕಿಂಗ್ ನಿಂದ ಆರಂಭಿಸಿ ಎಲ್ಲ ವಿಷ್ಯದಲ್ಲೂ ಇದ್ದ ಅದ್ದೂರಿತನ, ವಿಭಿನ್ನ ನಿರೂಪಣೆ ಚಿತ್ರಕ್ಕೆ ಇನ್ನಿಲ್ಲದ ಯಶಸ್ಸು ತಂದುಕೊಟ್ಟಿತು.

ಕೆಜಿಎಫ್ ಯಶಸ್ಸಿನ ಬೆನ್ನಲ್ಲೇ ಕೆಜಿಎಪ್-2 ಅನೌನ್ಸ್ ಮಾಡಿದ ಚಿತ್ರತಂಡ ಮತ್ತಷ್ಟು ಅದ್ದೂರಿತನ ಹಾಗೂ ಸಾಕಷ್ಟು ಹೊಸತನಗಳಿಂದ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ವಿಲನ್ ಪಾತ್ರಕ್ಕೆ ಬಾಲಿವುಡ್ ನಿಂದ ಸಂಜಯ್ ದತ್ತ ಬಣ್ಣ ಹಚ್ಚಿದ್ದು ಚಿತ್ರದ ತುಂಬಾ ಅದ್ದೂರಿ ತಾರಾಗಣವಿದೆ. ಹಾಡುಗಳು, ಫೈಟಿಂಗ್ ಹೀಗೆ ಎಲ್ಲದರಲ್ಲೂ ಕೆಜಿಎಫ್-2 ಸದ್ದು ಮಾಡಿದೆ.

ಹೀಗೆ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಮತ್ತು ಅದ್ದೂರಿತನದ ಕೆಜಿಎಫ್ 2 ಶೂಟಿಂಗ್ ಮುಗಿಸಿ ಎಡಿಟಿಂಗ್ ಹಂತಕ್ಕೆ ಹೋಗುತ್ತಿರು ವಂತೆ ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿ ಕೆಜಿಎಫ್ 3 ಘೋಷಿಸುತ್ತಾರಾ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮನೆ ಮಾಡಿದೆ.

ಯಶ್ ಸಿನಿ ಕೆರಿಯರ್ ಗೆ ಅತಿದೊಡ್ಡ ಬ್ರೇಕ್ ನೀಡಿದ ಕೆಜಿಎಫ್ ಇನ್ನೊಂದು ಸಿಕ್ವೆನ್ಸ್ ಮಾಡಬಹುದು ಅನ್ನೋ ಪ್ರೇಕ್ಷಕರ ಚಿಂತನೆ ಯೂ ತಪ್ಪಲ್ಲ ಬಿಡಿ.ಆದರೆ ಈ ಪ್ರಶ್ನೆಗೆ ಪ್ರಶಾಂತ್ ನೀಲ್ ಖಡಾಖಂಡಿತವಾದ ಉತ್ತರ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಕೆಜಿಎಫ್ -3 ಚಿತ್ರನಿರ್ಮಿಸುವ ಚಿಂತನೆ ಇಲ್ಲ.

ಕೆಜಿಎಫ್ ಜೊತೆ ಕೆಜಿಎಫ್ -2 ಅಗತ್ಯವಿತ್ತು. ಒಂದೊಮ್ಮೆ ಸಿಕ್ವೆನ್ಸ್ 2 ಮಾಡದೇ ಇದ್ದಿದ್ದರೇ ಪ್ರೇಕ್ಷಕರಿಗೆ ಅನ್ಯಾಯವಾಗುತ್ತಿತ್ತು. ಹೀಗಾಗಿ ಭಾಗ ಎರಡು ನಿರ್ಮಿಸಿದ್ದೇವೆ.ಆದರೆ ಕೆಜಿಎಫ್ ಕತೆ ಭಾಗ ಎರಡಲ್ಲಿ ಮುಗಿಯುತ್ತದೆ. ಇಲ್ಲದ ಕತೆಯನ್ನು ಕೇವಲ ಪ್ರೇಕ್ಷಕರ ಹಣಕ್ಕಾಗಿ ಮೂರನೇ ಭಾಗವಾಗಿ ಹಿಂಜಲು ನಮಗೆ ಮನಸ್ಸಿಲ್ಲ.

ಹೀಗಾಗಿ ಕೆಜಿಎಫ್ ಸಿಕ್ವೆನ್ಸ್ ಮುಂದುವರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಕೆಲದಿನಗಳಿಂದ ಕೆಜಿಎಫ್ 3 ತೆರೆಗೆ ಬರಲಿದೆ ಎಂಬ ಸುದ್ದಿ ಹರಿದಾಡಲಾರಂಭಿಸಿದ್ದಲ್ಲದೇ ಅದರಲ್ಲಿ ಸ್ಟಾರ್ ಕಪಲ್ಸ್ ಯಶ್ ಮತ್ತು ರಾಧಿಕಾ ಒಟ್ಟಿಗೆ ನಟಿಸಿದ್ದಾರೆ ಎಂಬ ಮಾತು ಕೇಳಿಬಂದಿತ್ತು.