1 ರೂಪಾಯಿಗೆ ಒಂದು ಹೊತ್ತಿನ ಊಟ….! ಜನರಸೋಯಿ ಮೂಲಕ ಕ್ರಿಕೆಟಿಗ ಗೌತಮ್ ಗಂಭೀರ ಅನ್ನದಾಸೋಹ…!!

ದೆಹಲಿ: ಹಸಿದವರಿಗೆ ಗೊತ್ತು ಒಂದು ತುತ್ತು ಅನ್ನದ ಬೆಲೆ. ಇಂಥ ಹಸಿದ ಬಡವರಿಗಾಗಿ ಸಂಸದ ಹಾಗೂ ಮಾಜಿ‌ ಕ್ರಿಕೇಟಿಗ ಗೌತಮ್‌ಗಂಭೀರ ಮಿಡಿದಿದ್ದು 1 ರೂಪಾಯಿಗೆ ಊಟ ಒದಗಿಸುವ ಕ್ಯಾಂಟೀನ್ ಆರಂಭಿಸಿದ್ದಾರೆ.

ದೆಹಲಿಯ ಪೂರ್ವಲೋಕಸಭಾ‌ಕ್ಷೇತ್ರದ ಸಂಸದರಾಗಿರುವ ಗೌತಮ್ ಗಂಭೀರ ಜನರಸೋಯಿ ಹೆಸರಿನಲ್ಲಿ ಬಡವರಿಗಾಗಿ 1 ರೂಪಾಯಿಗೆ ಊಟ ನೀಡುವ ಕ್ಯಾಂಟೀನ್ ಆರಂಭಿಸಿದ್ದಾರೆ.

ತಾವು ಪ್ರತಿನಿಧಿಸುತ್ತಿರುವ ಪೂರ್ವ ದಿಲ್ಲಿಯ ಗಾಂಧಿ ನಗರದಲ್ಲಿ ಮೊದಲ‌ ಜನರಸೋಯಿ ಕ್ಯಾಂಟೀನ್ ಆರಂಭಿಸಿರುವ ಗೌತಮ್ ಗಂಭೀರ್ ತಮ್ಮ‌ಲೋಕಸಭಾ ವ್ಯಾಪ್ತಿಯಲ್ಲಿ ಕನಿಷ್ಠ 10 ಕ್ಯಾಂಟೀನ್ ಆರಂಭಿಸಲು ಚಿಂತನೆ ನಡೆಸಿದ್ದಾರೆ.

ಬಡವರು ಹಾಗೂ ಅಗತ್ಯ ಉಳ್ಳವರಿಗೆ ನೆರವಾಗಲೆಂದು ಗೌತಮ ಗಂಭೀರ್ ಈ ಯೋಜನೆ ರೂಪಿಸಿದ್ದು, ಇದನ್ನು ಗೌತಮ್ ಗಂಭೀರ್ ತಮ್ಮ ವೈಯಕ್ತಿಕ ಹಣದಿಂದ ನಿರ್ವಹಿಸಲಿದ್ದು, ಗೌತಮ್ ಗಂಭೀರ್ ಫೌಂಡೇಷನ್ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ.

ಬಡವರು ಊಟ ತಿಂಡಿಗೆ ಪರದಾಡುವಂತಾಗಬಾರದು ಎಂಬ ಕಾರಣಕ್ಕೆ ಕ್ಯಾಂಟೀನ್ ಅರಂಭಿಸಿದ್ದೇನೆ. ಇದು ನನ್ನ ವೈಯಕ್ತಿಕ ಹಣದಿಂದ ನಡೆಯಲಿದ್ದು ಇದಕ್ಕಾಗಿ ಸರ್ಕಾರದ ಅನುದಾನ ಬಳಸೋದಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಗಾಂಧಿನಗರದಲ್ಲಿ ಆರಂಭಿಸಲಾದ ಜನರಸೋಯಿ 3,500 ಸ್ಕೆರ್ ಫೀಟ್ ವಿಶಾಲವಾಗಿದ್ದು ಒಂದೇ ಸಲಕ್ಕೆ 100 ಕುಳಿತುಕೊಳ್ಳುವ ಅವಕಾಶವಿದೆ.ಕೊರೋನಾ ಮುಂಜಾಗ್ರತಾ ಕ್ರಮಗಳ ಜೊತೆಗೆ ಮಧ್ಯಾಹ್ನ 11.30 ರಿಂದ 3.30 ರವರೆಗೆ ಈ ಕ್ಯಾಂಟೀನ್ ಕೆಲಸ ನಿರ್ವಹಿಸಲಿದೆ.

ಮೋದಿಯವರ ಚಿಂತನೆಯಂತೆ ಯಾರೂ ಹಸಿದುಕೊಂಡಿರಬಾರದು ಎಂಬ ಉದ್ದೇಶದಿಂದ ಗಂಭೀರ ಇಂತಹದೊಂದು ಜನೋಪಯೋಗಿ ಕಾರ್ಯಕ್ಕೆ ಮುಂದಾಗಿದ್ದು ಎಲ್ಲರ ಮೆಚ್ಚುಗೆ ಗೆ ಪಾತ್ರವಾಗಿದೆ.

Comments are closed.