ಯುವತಿಯರೇ ಮೊಬೈಲ್ ರಿಚಾರ್ಜ್ ಮಾಡುವ ಮುನ್ನ ಹುಷಾರ್..! ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ ..!!!

ಬೆಂಗಳೂರು : ನೀವೇನಾದ್ರೂ ಶಾಪಿಂಗ್ ಮಾಲ್ , ಆನ್ ಲೈನ್ ಶಾಪಿಂಗ್ ಮಾಡುವಾಗ ಮೊಬೈಲ್ ನಂಬರ್ ಕೊಡ್ತೀರಾ ? ಕಂಡ ಕಂಡ ಮೊಬೈಲ್ ಅಂಗಡಿಯಲ್ಲಿ ರಿಚಾರ್ಜ್ ಮಾಡ್ತೀರಾ ..? ಹಾಗಾದ್ರೆ ಯಾವುದಕ್ಕೂ ಎಚ್ಚರವಾಗಿರಿ. ಇಲ್ಲಾಂದ್ರೆ ಅಪಾಯ ಗ್ಯಾರಂಟಿ.

ಹೌದು, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಸಂಖ್ಯೆ ಹೆಚ್ಚುತ್ತಿದೆ. ಅದ್ರಲ್ಲೂ ಯುವತಿರನ್ನು ಹಾಗೂ ಮಹಿಳೆಯರನ್ನೇ ಹೆಚ್ಚಾಗಿ ಟಾರ್ಗೇಟ್ ಮಾಡಲಾಗುತ್ತಿದೆ. ಮೊಬೈಲ್‌ ರೀಚಾರ್ಜ್‌ ಅಂಗಡಿಗಳು, ಶಾಪಿಂಗ್‌ ಮಾಲ್‌ಗ‌ಳು, ಫೇಸ್‌ಬುಕ್‌, ಆನ್‌ಲೈನ್‌ ಮೂಲಕ ಕಾಣುವ ಮಹಿಳೆಯರು ಮತ್ತು ಯುವತಿಯರ ಮೊಬೈಲ್‌ ನಂಬರ್‌ಗಳನ್ನು ಸೈಬರ್‌ ಕಳ್ಳರು ಮಾರಾಟ ಮಾಡ್ತಿರುವ ಆತಂಕದ ವಿಚಾರ ಬೆಳಕಿಗೆ ಬಂದಿದೆ. ಕೆಲ ಪ್ರಕರಣಗಳ ತನಿಖೆ ಜಾಡಿನಲ್ಲಿ ಇಂತಹ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮೊಬೈಲ್ ರೀಚಾರ್ಜ ಮಾಡೋದಕ್ಕೆ ಬರುವವರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಜಾಲ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸಕ್ರೀಯವಾಗಿದೆ. ಪ್ರತೀ ಸಂಖ್ಯೆಗೆ 50 ರೂಪಾಯಿಯಿಂದ 500 ರೂಪಾಯಿ ವರೆಗೂ ಮಾರಾಟ ಮಾಡಲಾಗು ತ್ತಿದೆ. ಅದ್ರಲ್ಲೂ ವಂಚಕರಿಗೆ ಮೊಬೈಲ್ ರಿಚಾರ್ಜ್ ಅಂಗಡಿ, ಶಾಪಿಂಗ್ ಮಾಲ್ ಸಿಬ್ಬಂದಿಗಳಿಗೆ ಯುವತಿಯರು ಹಾಗೂ ಮಹಿಳೆಯರು ಎಂದು ನಂಬರ್ ಅನ್ನು ಪ್ರತ್ಯೇಕಿಸಿ ಕೊಡುತ್ತಿದ್ದಾರೆ.

ಆನ್ ಲೈನ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರೋ ಬೆನ್ನಲ್ಲೇ ಮೊಬೈಲ್ ಸಂಖ್ಯೆ ಸಂಖ್ಯೆಗಳನ್ನು ಕದಿಯುತ್ತಿರೋ ಜಾಲ ಬಯಲಾಗುತ್ತಿರೋದು ಆತಂಕ ಮೂಡಿಸಿದೆ. ಇನ್ಮುಂದೆ ಕಂಡ ಕಂಡಲ್ಲಿ ಮೊಬೈಲ್ ಸಂಖ್ಯೆ ನೀಡುವ ಮುನ್ನ ಯಾವುದಕ್ಕೂ ಎಚ್ಚರವಾಗಿರಿ. ಕೊಂಚ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ.

Comments are closed.