ಬುಧವಾರ, ಜೂನ್ 18, 2025
HomeBreakingಕಾವಿತೊಟ್ಟು ಕ್ಯಾಮರಾ ಎದುರು ಸುದೀಪ್ …! ಬಿಗ್ ಬಾಸ್ ಗೆ ಮುನ್ನವೇ ಕಿಚ್ಚ ಗೆಟಪ್...

ಕಾವಿತೊಟ್ಟು ಕ್ಯಾಮರಾ ಎದುರು ಸುದೀಪ್ …! ಬಿಗ್ ಬಾಸ್ ಗೆ ಮುನ್ನವೇ ಕಿಚ್ಚ ಗೆಟಪ್ ಚೇಂಜ್…!!

- Advertisement -

ವಿಕ್ರಾಂತ್ ರೋಣ ಬಳಿಕ ಬಿಗ್ ಬಾಸ್ ಗೆ ಸಿದ್ಧವಾಗಿರುವ ಅಭಿನಯ ಚಕ್ರವರ್ತಿ ಸುದೀಪ್ ಮತ್ತೊಮ್ಮೆ ತಮ್ಮ ಗೆಟಪ್ ಬದಲಾಯಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕಾವಿ ತೊಟ್ಟು ಕ್ಯಾಮರಾ ಎದುರು ಬಂದಿರೋ ಕಿಚ್ಚ ಸುದೀಪ್ ಗೆ ಕಲರ್ಸ್ ಕನ್ನಡ ವಾಹಿನಿ ಸಖತ್ ಹೆಡ್ಡಿಂಗ್ ನೀಡಿದೆ.

ಬಿಗ್ ಬಾಸ್ ಗೆ ದಿನಗಣನೆ ನಡೆದಿರುವ ಬೆನ್ನಲ್ಲೇ ಕಿಚ್ಚ ಕಾವಿಧಾರಿಯಾದ ಕಲರ್ ಫುಲ್ ಫೋಟೋ ಹಂಚಿಕೊಂಡಿರೋ ಕಲರ್ಸ್ ಕನ್ನಡ ವಾಹಿನಿ, ಲಾಕ್ ಡೌನ್ 8.0 ಗೆ ಕಿಚ್ಚ ಜೋಯಿಷರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ ಎಂದು ಟ್ಯಾಗ್ ಲೈನ್ ನೀಡಿದೆ.

Promo Bigboss 1

ಕಾವಿಬಟ್ಟೆ, ದೊಡ್ಡ ದೊಡ್ಡ ಮಣಿ ಸರ್, ತಲೆಗೊಂದು ಮುಂಡಾಸು ಧರಿಸಿ ಹಣೆಗೆ ದೊಡ್ಡದಾದ ಬೊಟ್ಟು ತುಂಟ ನಗೆಯೊಂದಿಗೆ ಕಿಚ್ಚ ಸುದೀಪ್ ಥೇಟ್ ಟಿವಿ ಜ್ಯೋತಿಷ್ಯಿಯಂತೆ ಪೋಸ್ ನೀಡಿದ್ದಾರೆ.

Sudeep Bigboss 1

ಆದರೆ ವಾಹಿನಿ ಅಧಿಕೃತವಾಗಿ ಬಿಗ್ ಬಾಸ್ ಯಾವಾಗ ಆರಂಭವಾಗಲಿದೆ ಎಂಬ ಮಾಹಿತಿ ನೀಡಿಲ್ಲ. ಮೂಲಗಳ ಮಾಹಿತಿ ಪ್ರಕಾರ ಈಗಾಗಲೇ ಬಿಗ್ ಬಾಸ್ ಸ್ಪರ್ಧಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಫೆ.28 ಭಾನುವಾರದಿಂದ ದೊಡ್ಮನೆ ಆಟ ಶುರುವಾಗಲಿದೆ ಎನ್ನಲಾಗುತ್ತಿದೆ.

Promo Bigboss

ಕಡ್ಡಾಯವಾಗಿ ಅಭ್ಯರ್ಥೀಗಳು ಕ್ವಾರಂಟೈನ್ ಗೆ ಒಳಪಡಬೇಕಿದ್ದು, ಬಳಿಕ ಕೊರೋನಾ ಟೆಸ್ಟ್ ನಡೆಸಿ ಬಳಿಕ ಬಿಗ್ ಬಾಸ್ ಗೆ ಎಂಟ್ರಿ ಕೊಡಲಾಗುತ್ತದೆ ಎನ್ನಲಾಗಿದೆ.

Sudeep Bigboss 2

ಈಗಾಗಲೇ ಬಿಗ್ ಬಾಸ್ ಗೆ ಸೇರೋರ ಅಭ್ಯರ್ಥಿಗಳ ಲಿಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ನಟ ರವಿಶಂಕರ್, ಗಾಯಕ-ನಾಯಕ ಸುನೀಲ್, ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ, ಯಶ್ ತಾಯಿ ಪುಷ್ಪಾ, ವಿನಯ್ ಗುರೂಜಿ ಸೇರಿದಂತೆ ಹಲವರ ಹೆಸರು ಕೇಳಿಬಂದಿದೆ.

RELATED ARTICLES

Most Popular