ಬೆಂಗಳೂರು : ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ದರೋಡೆಯ ನಾಟಕವಾಡಿದ್ದ ದಂತವೈದ್ಯ ಡಾ.ರೇವಂತ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದ. ಕವಿತಾ ಕೊಲೆ ರಹಸ್ಯವನ್ನು ಪೊಲೀಸರು ಬೇಧಿಸುತ್ತಲೇ ರೇವಂತ್ ಪ್ರಿಯತಮೆ ಹರ್ಷಿತಾ (35 ವರ್ಷ) ಕೂಡ ನೇಣಿಗೆ ಕೊರಳೊಡ್ಡಿದ್ದಾಳೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದ ಹರ್ಷಿತಾ ಡಾ.ರೇವಂತ್ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫೆಬ್ರವರಿ 17 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಲಕ್ಷ್ಮೀಪುರದಲ್ಲಿರುವ ಮನೆಯಲ್ಲಿ ಡಾ.ರೇವಂತ್ ಪತ್ನಿ ಕವಿತಾ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಆರಂಭದಲ್ಲಿ ದರೋಡೆಕೋರರ ಕೃತ್ಯವೆಂದು ಬಾವಿಸಲಾಗಿತ್ತು. ಆದ್ರೆ ಕೊಲೆ ಪ್ರಕರಣದ ಜಾಡು ಹಿಡಿದ ಕಡೂರು ಠಾಣೆಯ ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಕವಿತಾ ಪತಿ ಡಾ.ರೇವಂತ್ ನನ್ನ ಠಾಣೆಗೆ ಕರೆಯಿಸಿ ವಿಚಾರಣೆಗೆ ಒಳಪಡಿಸುತ್ತಲೇ ಕೊಲೆ ರಹಸ್ಯ ಬಯಲಾಗಿ ಹೋಗಿದೆ. ತಮ್ಮ ಬಂಡವಾಳ ಬಯಲಾಗುತ್ತಲೇ ಡಾ.ರೇವಂತ್ ನಿನ್ನೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

ಡಾ.ರೇವಂತ್ ಅನೈತಿಕ ಸಂಬಂಧ ಹೊಂದಿದ್ದ, ಇದೇ ಪತ್ನಿಯ ಕೊಲೆಗೆ ಕಾರಣವಾಗಿದೆ ಅನ್ನೋ ಮಾಹಿತಿ ಬಯಲಾಗಿತ್ತು. ಇದೀಗ ಡಾ.ರೇವಂತ್ ಪ್ರಿಯತಮೆ ಹರ್ಷಿತಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಮೂಲಕ ಡಾ.ರೇವಂತ್ ಅನೈತಿಕ ಪ್ರೇಮಕ್ಕೆ ಕುಟುಂಬವೊಂದು ಬಲಿಯಾಗಿ ಹೋಗಿದೆ.