ಸಿಲಿಕಾನ್ ಸಿಟಿಯಲ್ಲಿ ಪತ್ತೆಯಾಯ್ತು ಅಪಾಯಕಾರಿ ಡ್ರಗ್ಸ್ : ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಡ್ರಗ್ಸ್ ಸಾಗಾಟ

0

ಬೆಂಗಳೂರು : ಮದುವೆಯ ಆಮಂತ್ರಣ ಪತ್ರಿಕೆಗಳಲ್ಲಿ ಮಧುರೈನಿಂದ ಆಸ್ಟ್ರೇಲಿಯಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 5 ಕೆ.ಜಿ. ತೂಕದ ಎಫ್ರಿಡಿನ್ ಅಪಾಯಕಾರಿ ಮಾದಕವಸ್ತು ಕಳ್ಳಸಾಗಾಣಿಕೆಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಅಮಂತ್ರಣ ಪತ್ರಿಕೆಯಲ್ಲಿ ಎಫ್ರಿಡಿನ್ ಮಾದಕ ವಸ್ತುವನ್ನು ಕೋರಿಯಲ್ ಮೂಲಕ ಆಸ್ಟ್ರೇಲಿಯಾಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಾರೀ ತೂಕವಿದ್ದ ಮದುವೆ ಆಮಂತ್ರಣ ಪತ್ರಿಕೆಯನ್ನು ತೆಗೆದು ನೋಡಿದಾಗ ಡ್ರಗ್ಸ್ ಕಳ್ಳಸಾಗಾಣಿಕೆ ಬಯಲಾಗಿದೆ. 5 ಕೆ.ಜಿ. ತೂಕದ ಎಫ್ರಿಡಿನ್ ಮಾದಕ ವಸ್ತುವಿನ ಬೆಲೆ ಸುಮಾರು 5 ಕೋಟಿ ರೂಪಾಯಿಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದಾರೆ.

ಎಫ್ರಿಡಿನ್ ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿಯಾದ ಡ್ರಗ್ಸ್ ಆಗಿದ್ದು, ಕ್ಯಾಪ್ಸೂಲ್ಸ್, ಟ್ಯಾಬ್ಲೆಟ್, ಚುಚ್ಚುಮದ್ದುಗಳ ರೂಪದಲ್ಲಿ ಬಳಕೆ ಮಾಡಲಾಗುತ್ತಿದೆ. ಎಫ್ರಿಡಿನ್ ಹೃದಯ ಬಡಿತ ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದನ್ನು ನಿರಂತರವಾಗಿ ಬಳಕೆ ಮಾಡುವುದರಿಂದ ಪ್ರಾಣಾಪಾಯವೂ ಇದೆ. ಹೀಗಾಗಿಯೇ ಎಫ್ರಿಡಿನ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಡ್ರಗ್ಸ್ ಎಂದು ಹೇಳಲಾಗುತ್ತಿದೆ.

ಇದೀಗ ಅಪಾಯಕಾರಿ ಡ್ರಗ್ಸ್ ಸಾಗಾಟವನ್ನು ಬೇಧಿಸಿರೋ ಪೊಲೀಸರು ಡ್ರಗ್ಸ್ ಜಾಲಕ್ಕಾಗಿ ಬಲೆ ಬೀಸಿದ್ದಾರೆ. ಕೇವಲ ಆಸ್ಟ್ರೇಲಿಯಾ ಮಾತ್ರವಲ್ಲದೇ ಇತರ ರಾಷ್ಟ್ರಗಳಿಗೂ ಕೂಡ ಈ ಜಾಲ ಡ್ರಗ್ಸ್ ಸಾಗಾಟ ಮಾಡಲಾಗುತ್ತಿದ್ಯಾ. ಡ್ರಗ್ಸ್ ಜಾಲದ ಕಿಂಗ್ ಪಿನ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave A Reply

Your email address will not be published.