ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್, ಟಾಲಿವುಡ್ ನಲ್ಲಿ ಬಹುಬೇಡಿಕೆಯಲ್ಲಿರೋ ನಟಿ. ಇಂತಿಪ್ಪಕೊಡಗಿನ ಸುಂದರಿ ದೀಢೀರ್ ನಟರೊಬ್ಬರಿಗೆ ಬಾಡಿಗಾರ್ಡ್ ಆಗ್ತಿನಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋ ಮೂಲಕ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಇಷ್ಟಕ್ಕೂ ಇದೇನು ಕತೆ ಅಂದ್ರಾ….ಇಲ್ಲಿದೆ ಡಿಟೇಲ್ಸ್…!

ತಮಿಳು,ತೆಲುಗು ಹಾಗೂ ಹಿಂದಿಯಲ್ಲಿ ಸಖತ್ ಬ್ಯುಸಿಯಾಗಿರೋ ಕೊಡಗಿನ ಬೆಡಗಿ ರಶ್ಮಿಕಾ ಸಡನ್ ಆಗಿ ಟಾಲಿವುಡ್ ನಟ ನಾಗಾರ್ಜುನ್ ಗೆ ಬಾಡಿ ಗಾಡ್ ಆಗೀರ್ತಿನಿ ಅನ್ನೋ ಮೂಲಕ ಅಭಿಮಾನಿಗಳೆಲ್ಲ ಹುಬ್ಬೇರಿಸುವಂತೆ ಮಾಡಿದ್ದಾರೆ. ಇಷ್ಟಕ್ಕೂ ರಶ್ಮಿಕಾ ಬಾಡಿ ಗಾಡ್ ಆಗೋಕೆ ಫಿಟ್ ಆಗೋಣ ಅಂತ ವರ್ಕೌಟ್ ಕೂಡ ಶುರು ಮಾಡಿದ್ದು, ಆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದೇನು ಕತೆ ಅಂತ ಗಾಬರಿ ಆಗಬೇಡಿ. ನಡೆದಿರೋದು ಇಷ್ಟೇ, ಟಾಲಿವುಡ್ ನ ನಾಗಾರ್ಜುನ್ ನಟನೆಯ ವೈಲ್ಡ್ ಡಾಗ್ ಚಿತ್ರ ಏಪ್ರಿಲ್ 2 ರಂದು ತೆರೆ ಕಾಣುತ್ತಿದೆ. ಈ ಚಿತ್ರದಲ್ಲಿ ನಾಗಾರ್ಜುನ್ ಸಖತ್ ಆಕ್ಷ್ಯನ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರತಂಡ ಸಿನಿಮಾ ಪ್ರಮೋಶನ್ ಗಾಗಿ #WildDogPushUpChalleng ಆರಂಭಿಸಲಾಗಿದೆ.
ಈ ಚಾಲೆಂಜ್ ಸ್ವೀಕರಿಸಿದ ನಟಿ ರಶ್ಮಿಕಾಮಂದಣ್ಣ ತಮ್ಮ ವರ್ಕೌಟ್ ನಡುವೆ 30 ಸೆಕೆಂಡ್ ನಲ್ಲಿ ಫುಶ್ ಅಪ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ರಶ್ಮಿಕಾ ಈ ವಿಡಿಯೋಗೆ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಈ ವಿಡಿಯೋಗೆ ಅಕ್ಕಿನೇನಿ ನಾಗಾರ್ಜುನ್ ವಾವ್ ಎಂದು ಕಮೆಂಟ್ ಮಾಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ್ ಕಮೆಂಟ್ ಗೆ ಸಖತ್ ಖುಷಿಯಾಗಿದ್ದು, ಸರ್ ನಾನು ವರ್ಕೌಟ್ ಮಾಡುತ್ತಿದ್ದೇನೆ. ಸಧ್ಯದಲ್ಲೇ ನಿಮ್ಮ ಬಾಡಿಗಾರ್ಡ್ ಆಗಿ ಜಾಯಿನ್ ಆಗುತ್ತೇನೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಈ ವಿಡಿಯೋ ಹಾಗೂ ಪೋಸ್ಟ್ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಕೊಡಗಿನ ಕಿತ್ತಳೆ ನಿನಗ್ಯಾಕಮ್ಮ ಬಾಡಿಗಾರ್ಡ್ ಆಗೋ ಕೆಲಸ ಅಂತ ರಶ್ಮಿಕಾನ್ನ ಕೇಳ್ತಿದ್ದಾರೆ.