ಬಣ್ಣದ ಹೋಳಿಯೊಂದಿಗೆ ಸನ್ನಿ ಲಿಯೋನ್….! ಮಾದಕ ನಟಿ ಪೋಸ್ಟ್ ಗೆ ಬಂತು ಲಕ್ಷಗಟ್ಟಲೇ ಲೈಕ್ಸ್….!

ಮಾದಕ ನಟಿ ಸನ್ನಿ ಲಿಯೋನ್ ಏನು ಮಾಡಿದರೂ ಸುದ್ದಿಯೇ. ಸದಾ ಆಕೆಯ ಪೋಟೋಸ್, ವಿಡಿಯೋಸ್ ,ಸೋಷಿಯಲ್ ಮೀಡಿಯಾ ಅಪ್ಡೇಟ್ ನೋಡೋರಿಗೆ ಹೋಳಿ ಹಬ್ಬದಂದು ಸನ್ನಿ ಲಿಯೋನ್ ಬಣ್ಣದ ಓಕುಳಿಯ ಪೋಟೋದ ಜೊತೆ ಫ್ಯಾಮಿಲಿ ಟೈಂನ ಖುಷಿ ಹಂಚಿಕೊಂಡಿದ್ದಾರೆ.

ಏನೇ ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡೋ ಸನ್ನಿ ಲಿಯೋನ್ ಫ್ಯಾಮಿಲಿ ಜೊತೆ ಹೋಳಿ ಆಡಿದ ಖುಷಿಯನ್ನು ಕಲರ್ ಫುಲ್ ಪೋಟೋದ ಜೊತೆ ಹಂಚಿಕೊಂಡಿದ್ದಾರೆ. ತಮ್ಮ  ಪತಿ ಡೇನಿಯಲ್ ವೆಬ್ಬರ್ ಹಾಗೂ ಮಕ್ಕಳಾದ ನಿಶಾ,ಅಶೇರ್ ಹಾಗೂ ಸೋನಾ ಜೊತೆ ಸನ್ನಿ ಲಿಯೋನ್ ಬಣ್ಣದ ಹೋಳಿ ಆಡಿದ್ದಾರೆ.

ಹೋಳಿಯ ಬಣ್ಣದಲ್ಲಿ ಮಿಂದೆದ್ದ ಸನ್ನಿ ಲಿಯೋನ್ ಮಕ್ಕಳನ್ನು ತಬ್ಬಿಕೊಂಡು ಪತಿ ಜೊತೆ ಪೋಟೋಗೆ ಪೋಸ್ ನೀಡಿದ್ದು, ಈ ಪೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ವೆಬ್ಬರ್ ಕಡೆಯಿಂದ ಹೋಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

https://www.instagram.com/p/CNAs_8gDK9a/?igshid=i5g43239rsvf

ಸನ್ನಿ ಲಿಯೋನ್ ಗೆ ವಿಶ್ವದಾದ್ಯಂತ ಕೋಟ್ಯಾಂತರ ಫ್ಯಾನ್ಸ್ ಇರೋದು ಎಲ್ಲರಿಗೂ ತಿಳಿದ ವಿಚಾರ. ಸೋಷಿಯಲ್ ಮೀಡಿಯಾದಲ್ಲೂ ಆಕೆಯ ಫ್ಯಾನ್ಸ್ ಗೇನು ಕಡಿಮೆಯಿಲ್ಲ. ಫ್ಯಾಮಿಲಿ ಜೊತೆ ಹೋಳಿ ಆಡಿದ ಸನ್ನಿ ಪೋಸ್ಟ್ ಗೆ ಬರೋಬ್ಬರಿ 11 ಲಕ್ಷ ಲೈಕ್ಸ್ ಗಳು ಬಂದಿದ್ದು ಅಭಿಮಾನಿಗಳು ಮುಗಿಬಿದ್ದು ಕಮೆಂಟ್ ಮಾಡ್ತಿದ್ದಾರೆ.

ವಿದೇಶದಲ್ಲಿದ್ದರೂ ಭಾರತೀಯರ ಹಲವು ಹಬ್ಬ-ಆಚರಣೆಗಳನ್ನು ಪಾಲಿಸುವ ಸನ್ನಿ ರಂಗಿನಾಟದಲ್ಲಿ ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ದು, ಈ ಹಬ್ಬದ ಸಂಭ್ರಮದಲ್ಲೂ ಗಂಡನ ತುಟಿಗೆ ತುಟಿ ಬೆಸೆಯೋದು ಮತ್ತು ಆ ಪೋಟೋ ಹಂಚಿಕೊಳ್ಳೋದರಲ್ಲಿ ಸನ್ನಿ ಹಿಂದೆ ಬಿದ್ದಿಲ್ಲ.

ಮೂವರು ಮಕ್ಕಳ ತಾಯಾಗಿರುವ ಸನ್ನಿ ಲಿಯೋನ್ ಒಂದು ಮಗುವನ್ನು ಸೆರೋಗಶಿ ಮೂಲಕ ಪಡೆದಿದ್ದು, ಮೂವರು ಮಕ್ಕಳೊಂದಿಗೆ ಔಟಿಂಗ್ ಹೋಗೋ ಪೋಟೋಗಳನ್ನು ಶೇರ್ ಮಾಡೋ ಮೂಲಕ ಆಗಾಗ ಅಭಿಮಾನಿಗಳಿಗೆ ಸಪ್ರೈಸ್  ನೀಡ್ತಿತಾರೆ.

Comments are closed.