ಬೆಂಗಳೂರು : ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಸಾರ್ವಜನಿಕ ಸೇವೆಯನ್ನು ಒದಗಿಸುತ್ತಿರುವ ಕೆಎಸ್ಆರ್ ಟಿಸಿ ಹಕ್ಕು ಇದೀಗ ಕೇರಳದ ಸರಕಾರದ ಪಾಲಾಗಿದೆ. ಹೀಗಾಗಿ ಕರ್ನಾಟಕ ಇನ್ಮುಂದೆ ಕೆಎಸ್ಆರ್ ಟಿಸಿ ಹೆಸರನ್ನು ಬಳಸುವಂತಿಲ್ಲ ಅನ್ನೋ ಆದೇಶ ಹೊರಬಿದ್ದಿದೆ.
ಕೆಎಸ್ಆರ್ ಟಿಸಿ, ಲೋಗೋ ಮತ್ತು ಆನೆ ಎಂಬ ಸಂಕ್ಷಿಪ್ತ ರೂಪ ಸಂಪೂರ್ವವಾಗಿ ಕೇರಳ ಪಾಲಾಗಿದೆ. ಕರ್ನಾಟಕ ಮತ್ತು ಕೇರಳ ರಸ್ತೆ ಸಾರಿಗೆ ನಿಗಮಗಳು ಕೆಎಸ್ಆರ್ ಟಿಸಿ ಹೆಸರನ್ನು ಬಳಕೆ ಮಾಡುತ್ತಿದ್ದ ವು 2014 ರಲ್ಲಿ ಕರ್ನಾಟಕ ಸರಕಾರ ಕೆಎಸ್ಆರ್ ಟಿಸಿ ಹೆಸರು ಕರ್ನಾಟಕಕ್ಕೆ ಸೇರಿದೆ. ಹೀಗಾಗಿ ಕೇರಳ ಸಾರಿಗೆಗಳಲ್ಲಿ ಈ ಹೆಸರನ್ನು ಬಳಸುವಂತಿಲ್ಲ ಎಂಬ ನೋಟಿಸ್ ಜಾರಿ ಮಾಡಿತ್ತು.
ಅಂದಿನ ಕೇರಳ ಸಾರಿಗೆಯ ಸಿಎಂಡಿ ದಿವಂಗತ ಆಂಥೋನಿ ಚಾಕೊ ಅವರು ಕೆಎಸ್ಆರ್ ಟಿಸಿ ಹೆಸರಿನ ಟ್ರೇಡ್ಮಾರ್ಕ್ಗೆ ಅರ್ಜಿ ಸಲ್ಲಿಸಿದರು. ಸುಧೀರ್ಘ 7 ವರ್ಷಗಳ ಕಾಲ ನಡೆದ ಕಾನೂನು ಹೋರಾಟದಲ್ಲಿ ಕೆಎಸ್ಆರ್ ಟಿಸಿ ಟ್ರೇಡ್ ಮಾರ್ಕ್ ಮತ್ತು ಆನವಂಡಿ ಲೋಗೋ ಇದೀಗ ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾ ಮಂಜೂರು ಮಾಡಿದೆ.
ಈ ಆದೇಶದಿಂದಾಗಿ ಕೇರಳದ ಸಾರಿಗೆ ನಿಗಮ ಮಾತ್ರವೇ ಟ್ರೇಡ್ ಮಾರ್ಕ್ ಹೆಸರನ್ನು ಬಳಕೆ ಮಾಡಬಹುದಾಗಿದೆ. ಅಲ್ಲದೇ ಕರ್ನಾಟಕ ದಲ್ಲಿ ಕೆಎಸ್ಆರ್ ಟಿಸಿ ಹೆಸರನ್ನು ಬಳಸದಂತೆ ನೋಟೀಸ್ ನೀಡಲು ಕೇರಳ ಕೆಎಸ್ಆರ್ ಟಿಸಿ ಎಂಡಿ ಮತ್ತು ಸಾರಿಗೆ ಕಾರ್ಯದರ್ಶಿ ಬಿಜು ಪ್ರಭಾಕರ್ ಹೇಳಿದ್ದಾರೆ.