ಮಂಗಳವಾರ, ಏಪ್ರಿಲ್ 29, 2025
HomeBreakingRashmika mandanna:ಫಾದರ್ಸ್ ಡೇ ದಿನ ಬಿಗ್ ಬಿಗೆ ಸ್ಪೆಶಲ್ ವಿಶ್….! ಅಮಿತಾಬ್ ಗೆ ರಶ್ಮಿಕಾ ಮಂದಣ್ಣ...

Rashmika mandanna:ಫಾದರ್ಸ್ ಡೇ ದಿನ ಬಿಗ್ ಬಿಗೆ ಸ್ಪೆಶಲ್ ವಿಶ್….! ಅಮಿತಾಬ್ ಗೆ ರಶ್ಮಿಕಾ ಮಂದಣ್ಣ ನೀಡಿದ್ರು ಗಿಫ್ಟ್….!!

- Advertisement -

ಸಾಲು ಸಾಲು ಚಿತ್ರಗಳಿಗೆ ಸಹಿ ಹಾಕುತ್ತ, ಬಾಲಿವುಡ್,ಸ್ಯಾಂಡಲವುಡ್,ಟಾಲಿವುಡ್ ಹೀಗೆ ಎಲ್ಲೆಡೆಗೂ ಹೆಸರು ಮಾಡ್ತಿರೋ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಫಾದರ್ಸ್ ಡೇ ದಿನ ಬಿಗ್ ಬಿ ಗೆ ವಿಶ್ ಮಾಡಿ ಗಿಫ್ಟ್ ಕೊಟ್ಟ ರಶ್ಮಿಕಾ ಗಮನಸೆಳೆದಿದ್ದಾರೆ.

ಇತ್ತೀಚಿಗೆ ಬಾಲಿವುಡ್ ಗೆ ಎಂಟ್ರಿಕೊಟ್ಟ ರಶ್ಮಿಕಾ ಮಂದಣ್ಣ ಬಾಲಿವುಡ್ ಗೆ ಕಾಲಿಟ್ಟು ಎರಡನೇ ಸಿನಿಮಾದಲ್ಲಿ ನಟಿಸುವ ವೇಳೆಗೇ ಬಿಗ್ ಬೀ ಜೊತೆ ಮಗಳಾಗಿ ನಟಿಸೋ ಅವಕಾಶ ಪಡೆದು ಗಮನ ಸೆಳೆದಿದ್ದರು.

ಸದ್ಯ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿರುವ  ರಶ್ಮಿಕಾ, ಫಾದರ್ಸ್ ಡೇ ದಿನ ಸೆಟ್ ಗೆ ಬಂದ ಬಿಗ್ ಬಿ ಗೆ ಸ್ಪೆಶಲ್ ಗಿಫ್ಟ್, ನೀಡಿದ್ದಾರೆ. ಹೂವಿನ ಬೊಕೆ, ಗಿಫ್ಟ್ ಹಾಗೂ ಕೇಕ್ ನೀಡಿ ಬಿಗ್ ಬೀ ಆಶಿರ್ವಾದ ಪಡೆದಿದ್ದಾರೆ.

ರಶ್ಮಿಕಾ ಜೊತೆ ನಟ ಎಲಿ ಅವ್ರಾಮ್ ಕೂಡ ಬಿಗ್ ಬೀಗೆ ಕೇಕ್ ನೀಡಿದ್ದಾರೆ.

ಈ ವಿಚಾರವನ್ನು ಸ್ವತಃ ಬಿಗ್ ಬೀ ಅಮಿತಾಬ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಂದೆಯ ದಿನವನ್ನು ಗಂಭೀರವಾಗಿ ಪರಿಗಣಿಸಿ ನನಗೆ ಕೇಕ್ ಹಾಗೂ ಹೂವಿನ ಗುಚ್ಚ ನೀಡಲು ಒಟ್ಟಿಗೆ ಸೇರಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಪ್ರತಿದಿನವೂ ತಂದೆಯ ದಿನಾಚರಣೆ. ನಾನು ತಂದೆಯಂತೆಯೇ ಕಾಣುತ್ತಿದ್ದೇನೆ ಎಂದು ನೀವು ಗಮನಿಸಿರಬಹುದು. ನಿಮ್ಮೆಲ್ಲರ ಪ್ರೀತಿ,ಹಾರೈಕೆಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

RELATED ARTICLES

Most Popular