Delta Plus : ರಾಜ್ಯಕ್ಕೂ ಒಕ್ಕರಿಸಿದ ರೂಪಾಂತರಿ ವೈರಸ್ : ಇಬ್ಬರಲ್ಲಿ ಕಾಣಿಸಿಕೊಂಡ ಡೆಲ್ಟಾ ಪ್ಲಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ಕೊಂಚ ಮಟ್ಟಿಗೆ ತಗ್ಗಿದೆ. ಆದ್ರೀಗ ಮೂರನೇ ಅಲೆ ಕರ್ನಾಟಕದ ಜನರಲ್ಲಿ ಆತಂಕ ಮೂಡಿಸಿದೆ. ಅದ್ರಲ್ಲೂ ರಾಜ್ಯದ ಇಬ್ಬರಲ್ಲಿ ಡೆಲ್ಟಾ ಪ್ಲಸ್ ಸೋಂಕು ಕಾಣಿಸಿಕೊಂಡಿದೆ.

ವಿದೇಶದಲ್ಲಿ ಡೆಲ್ಟಾ ಪ್ಲಸ್ ವೈರಸ್ ಈಗಾಗಲೇ ಮರಣ ಮೃದಂಗ ಬಾರಿಸಿದೆ. ಅಷ್ಟೇ ಅಲ್ಲದೇ ಹಲವು ರಾಜ್ಯಗಳಲ್ಲಿಯೂ ರೂಪಾಂತರಿ ವೈರಸ್ ಸೋಂಕು ಕಾಣಿಸಿಕೊಂಡಿದೆ. ಇದೀಗ ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲಾ ಇಬ್ಬರಿಗೆ ಡೆಲ್ಟಾ ಪ್ಲಸ್ ರೋಗ ಕಾಣಿಸಿಕೊಂಡಿದೆ‌. ಈ ಮೂಲಕ ಜನರಲ್ಲಿ ಭಯ ಹುಟ್ಟಿಸಿದೆ.

ಕೊರೊನಾ ಎರಡನೇ ಅಲೆಯಿಂದ ತತ್ತರಿಸಿದ್ದ ರಾಜ್ಯ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ‌. ಜೊತೆಗೆ ಬ್ಲ್ಯಾಕ್, ವೈಟ್ ಫಂಗಸ್ ರೋಗ ಜನರನ್ನು ಬಲಿ ಪಡೆಯುತ್ತಿದೆ. ಇದೀಗ ಅಪಾಯಕಾರಿಯಾಗಿರುವ ಡೆಲ್ಟಾ ವೈರಸ್ ಸೋಂಕು ರಾಜ್ಯದಲ್ಲಿ ಪತ್ತೆಯಾಗಿದೆ.

ಅಮೇರಿಕಾದ ಡೆಲ್ಟಾ ವೈರಸ್ ಅತೀ ಹೆಚ್ಚು ಜನರನ್ನು ಬಲಿಪಡೆದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Comments are closed.