- – ರಕ್ಷಾ ಬಡಾಮನೆ
ಗೊರಕೆ… ಈ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಡುತ್ತದೆ. ಆದ್ರೆ ಕೆಲವರ ಗೊರಕೆ ಇನ್ನೊಬ್ಬರ ನಿದ್ರಾ ಭಂಗ ತರುತ್ತೆ. ಹೀಗಾಗಿ ಕಿವಿಗೆ ಹತ್ತಿ ಇಟ್ಟುಕೊಂಡು ಮಲಗಬೇಕಾಗುತ್ತದೆ. ಅಷ್ಟಕ್ಕೂ ಈ ಗೊರಕೆಗೆ ಕಾರಣವೇನು.. ಗೊರಕೆಯಿಂದ ಮುಕ್ತಿ ಪಡೆಯೋದು ಹೇಗೆ ಗೊತ್ತಾ ?

ಸಾಮಾನ್ಯವಾಗಿ ನಿದ್ರಿಸುವಾಗ ಮೂಗು ಮತ್ತು ಗಂಟಲಿನಲ್ಲಿ ಸರಿಯಾಗಿ ಗಾಳಿ ಸಂಚಾರವಾಗದೇ ಇದ್ದಾಗ ಗೊರಕೆ ಕಾಣಿಸಿಕೊಳ್ಳುತ್ತದೆ. ಗೊರಕೆ ಅನ್ನೋದು ಉಸಿರುಗಟ್ಟುವಿಕೆ, ಬಾಯಿ ಗಂಟಲು, ಉಸಿರಿನ ಸಮಸ್ಯೆ ಹಾಗೂ ನಿದ್ರಾ ಹೀನತೆಯ ಸಂಕೇತವೂ ಹೌದು. ಅತೀಯಾಗಿ ಮಧ್ಯಸೇವನೆ ಮಾಡುವರಿಗೆ ಗೊರಕೆ ಮಾಮೂಲು. ನೀವೇನಾದ್ರೂ ಗೊರಕೆಯ ಸಮಸ್ಯೆಯಿಂದ ಬಳಲುತ್ತಿದ್ರೆ ನಾವು ಹೇಳೋ ಸುಲಭವಾದ ಮನೆ ಮದ್ದು ಮಾಡಿ. ಗೊರಕೆಯ ಸಮಸ್ಯೆಗೆ ಮುಕ್ತಿ ಪಡೆದುಕೊಳ್ಳಿ.

ಶುಂಠಿ ಮತ್ತು ಜೇನು ತುಪ್ಪಕ್ಕೆ ಗೊರಕೆಯನ್ನು ಹೋಗಲಾಡಿಸೋ ಶಕ್ತಿಯಿದೆ. ದಿನಕ್ಕೆ ಎರಡು ಬಾರಿ ಶುಂಠಿ ಮತ್ತು ಜೇನುತುಪ್ಪದ ಚಹಾ ಮಾಡಿ ಕುಡಿಯುವುದರಿಂದ ಗೊರಕೆಯ ಸಮಸ್ಯೆಯನ್ನು ಹೋಗಲಾಡಿಸಬಹುದು.

ಇನ್ನು ಮಲಗುವ ಭಂಗಿಯೂ ಕೆಲವೊಮ್ಮೆ ಗೊರಕೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಮುಖವನ್ನು ಮೇಲೆ ಮಾಡಿ ಮಲಗಿಕೊಂಡ್ರೆ ಗೊರಕೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ರಾತ್ರಿ ಮಲಗುವ ಭಂಗಿಯನ್ನು ಬದಲಾಯಿಸಿಕೊಂಡ್ರೆ ಗೊರಕೆಯಿಂದ ಮುಕ್ತಿ ಪಡೆಯಬಹುದು.

ಸಾಮಾನ್ಯವಾಗಿ ಮಾನವನ ದೇಹದಲ್ಲಿ ಮೆಲಟೋನಿಸ್ ಅಂಶ ವೃದ್ದಿಸಿದ್ರೆ ಗೊರಕೆ ನಮ್ಮತ್ತ ಸುಳಿಯುವುದೇ ಇಲ್ಲಾ. ಹೀಗಾಗಿ ಬಾಳೆಹಣ್ಣು, ಕಿತ್ತಳೆ, ಅನಾನಸು ಹಣ್ಣನ್ನು ಹೆಚ್ಚಾಗಿ ಸೇವನೆ ಮಾಡೋದ್ರಿಂದ ಗೊರಕೆ ನಮ್ಮತ್ತ ಸುಳಿಯದಂತೆ ಮಾಡುತ್ತದೆ.

ಇನ್ನು ಡಿಹಡ್ರೇಶನ್ ಕೂಡ ಗೊರಕೆಗೆ ಕಾರಣವಾಗುತ್ತದೆ. ಪುರುಷರು 3.7 ಲೀಟರ್ ಮತ್ತು ಮಹಿಳೆಯರು 2.7 ಲೀಟರ್ ನೀರು ಕುಡಿಯುವುದು ಉತ್ತಮ. ಮಧ್ಯಪಾನಿಗಳಂತೆ ಧೂಮಪಾನ ಮಾಡುವವರಲ್ಲಿಯೂ ಗೊರಕೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಧೂಮಪಾನ ತ್ಯೆಜಿಸೋದ್ರಿಂದ ಗೊರಕೆಯಿಂದ ಪಾರಾಗಬಹುದು.