ಸೋಮವಾರ, ಏಪ್ರಿಲ್ 28, 2025
HomeSportsIND W vs ENG W: ಇಂಗ್ಲೆಂಡ್‌ ವಿರುದ್ದ 2ನೇ ಟಿ20 ಪಂದ್ಯ ಗೆದ್ದ ಭಾರತ

IND W vs ENG W: ಇಂಗ್ಲೆಂಡ್‌ ವಿರುದ್ದ 2ನೇ ಟಿ20 ಪಂದ್ಯ ಗೆದ್ದ ಭಾರತ

- Advertisement -

ಇಂಗ್ಲೆಂಡ್‌ ವಿರುದ್ದ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತ ಎರಡನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ದೀಪ್ತಿ ಶರ್ಮಾ ಹಾಗೂ ಶಿಫಾಲಿ ವರ್ಮಾ ಅದ್ಬುತ ಆಟದಿಂದ ಭಾರತೀಯ ವನಿತೆಯರು 8 ರನ್‌ಗಳ ರೋಚಕ ಗೆಲುವು ಸಾಧಿಸಿದ್ದಾರೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ1-1 ಅಂತರದ ಸಮಬಲ ಸಾಧಿಸಿದ್ದಾರೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಭಾರತ ಮಹಿಳಾ ತಂಡಕ್ಕೆ ಆರಂಭಿಕರಾದ ಸ್ಮೃತಿ ಮಂದಾನ ಹಾಗೂ ಶಿಫಾಲಿ ವರ್ಮಾ ಭರ್ಜರಿ ಆರಂಭ ಒದಗಿಸಿದ್ರು. ಸ್ಮೃತಿ ಮಂದಾನ 16 ಎಸೆತಗಳನ್ನು ಎದುರಿಸಿ ೨೦ ರನ್‌ ಬಾರಿಸಿ ಔಟಾದ್ರೆ, ಹರ್ಮನ್‌ ಪ್ರಿತ್‌ ಕೌರ್‌ ಜೊತೆಯಾದ ಯುವ ಪ್ರತಿಭೆ ಶಫಾಲಿ ವರ್ಮಾ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್‌ ಮಾಡಿ ಕೇವಲ 38 ಎಸೆತಗಳಲ್ಲಿ 8 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡಂತೆ 48 ರನ್‌ ಬಾರಿಸಿ ತಂಡಕ್ಕೆ ಭರ್ಜರಿ ಆರಂಭ ಕೊಟ್ಟರು.

ಹರ್ಮನ್‌ಪ್ರೀತ್‌ ಕೌರ್‌ 25 ಎಸೆತಗಳಲ್ಲಿ 31 ರನ್‌ಗಳ ಕಾಣಿಕೆ ನೀಡಿದರೆ, ಆಲ್‌ರೌಂಡರ್‌ ದೀಪ್ತಿ ಶರ್ಮಾ ಅಜೇಯ 24 ರನ್‌ಗಳ ಕೊಡುಗೆ ಸಲ್ಲಿಸಿದರು. ಭಾರತ ತಂಡ ಅಂತಿಮವಾಗಿ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 148 ರನ್‌ಗಳ ಗಳಿಸಲು ಮಾತ್ರವೇ ಸಾಧ್ಯವಾಯಿತು. ಭಾರತ ವನಿತೆಯರು ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್‌ ತಂಡಕ್ಕೆ ಅರುಂದತಿ ರೆಡ್ಡಿ, ರಿಚಾ ಘೋಷ್ ಆರಂಭಿಕ ಆಘಾತವನ್ನು ನೀಡಿದ್ರು.

ಟೇಮಿ ಬೆಯೂಮೌಂಟ್‌ ಭರ್ಜರಿ ಅರ್ಧ ಶತಕ ಸಿಡಿಸಿದ್ರೆ, ಹೆದರ್ ನೈಟ್‌ 30 ರನ್‌ ಬಾರಿಸಿದ್ರು. ಉಳಿದಂತೆ ಎಲ್ಲಾ ಆಟಗಾರರು ವೈಫಲ್ಯ ಅನುಭವಿಸಿದ್ರು. ಭಾರತದ ಪರ ಪೂನಮ್‌ ಯಾದವ್‌ ಎರಡು ವಿಕೆಟ್‌ ಪಡೆದ್ರೆ, ದೀಪ್ತಿ ಶರ್ಮಾ, ಅರುಂದತಿ ರೆಡ್ಡಿ ತಲಾ ಒಂದೊಂದು ವಿಕೆಟ್‌ ಗಳಿಸಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್‌ ನ ನಾಲ್ಕು ಆಟಗಾರರು ರನೌಟ್‌ ಗೆ ಬಲಿಯಾಗಿದ್ದಾರೆ

ಇಂಗ್ಲೆಂಡ್‌ ತಂಡಕ್ಕೆ ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 140 ರನ್‌ ಮಾತ್ರ ಗಳಿಸಲು ಮಾತ್ರವೇ ಸಾಧ್ಯವಾಯಿತು. ಆಲ್‌ರೌಂಡ್‌ ಆಟವಾಡಿದ ದೀಪ್ತಿ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ : ಭಾರತ ಮಹಿಳಾ ತಂಡ: 20 ಓವರ್‌ 4 ವಿಕೆಟ್‌ 148 ರನ್‌
ಶಫಾಲಿ ವರ್ಮಾ 48, ಸ್ಮೃತಿ ಮಂದನಾ 20, ಹರ್ಮನ್‌ಪ್ರೀತ್‌ ಕೌರ್‌ 31, ದೀಪ್ತ ಶರ್ಮಾ 24, ನಥಾಲಿ ಶಿವರ್‌ 20/1, ಫ್ರೇಯಾ ಡೇವಿಸ್‌ 31/1, ಸರಾ ಗ್ಲೆನ್ 32/1, ಮ್ಯಾಡಿ ವಿಲ್ಲಿಯರ್ಸ್‌ 9/1
ಇಂಗ್ಲೆಂಡ್ ಮಹಿಳಾ ತಂಡ : 20 ಓವರ್‌ 8 ವಿಕೆಟ್‌ 180 ರನ್‌
ಟೇಮಿ ಬೆಯೂಮೌಂಟ್‌ 59, ಹೆದರ್‌ ನೈಟ್‌ 30, ಪೂನಮ್‌ ಯಾದವ್ 17/2, ದೀಪ್ತಿ ಶರ್ಮಾ 18/1, ಅರುಂಧತಿ ರೆಡ್ಡಿ 30/1

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular