ಕುವೈತ್ : ಗಲ್ಫ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರೋ ಬೆನ್ನಲ್ಲೇ ಕುವೈತ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ತನ್ನ ನಿವಾಸಿಗಳಿಗೆ ಪ್ರಯಾಣ ನಿರ್ಬಂಧ ಹೇರಿದ್ದ ಕುವೈತ್ ಇದೀಗ ತನ್ನ ದೇಶ ಪ್ರವೇಶಿಸೋ ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಕೊರೊನಾ ತಪಾಸಣಾ ಸರ್ಟಿಫಿಕೆಟ್ ತರಲೇ ಬೇಕೆಂಬ ಆದೇಶ ಹೊರಡಿಸಿದೆ.

ಇತ್ತೀಚಿನ ದಿನಗಳಲ್ಲಿ ಕುವೈತ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋ ಬೆನ್ನಲ್ಲೇ ಕುವೈತ್ ಸರಕಾರ ಸಾಕಷ್ಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.

ಯಾವುದೇ ದೇಶದಿಂದ ತನ್ನ ದೇಶವನ್ನು ಪ್ರವೇಶಿಸೋ ಪ್ರಯಾಣಿಕರು ತನ್ನ ದೇಶದಿಂದಲೇ ಕೊರೊನಾ ಸರ್ಟಿಫಿಕೆಟ್ ಕಡ್ಡಾಯವಾಗಿ ತರಲೇ ಬೇಕು. ಒಂದೊಮ್ಮೆ ಪ್ರಯಾಣಿಕರ ಬಳಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇಲ್ಲವಾದ್ರೆ ಪ್ರಯಾಣಿಕರನ್ನು ತಾಯ್ನಾಡಿಗೆ ಮರಳಿ ಕಳುಹಿಸೋದಾಗಿ ಕುವೈತ್ ಸಚಿವಾಲಯ ಆದೇಶ ಹೊರಡಿಸಿದೆ.