ನಿತ್ಯಭವಿಷ್ಯ : 04-03-2020

0

ಮೇಷರಾಶಿ
ನೌಕರರಿಗೆ ಬಡ್ತಿ. ಬಹುದಿನಗಳ ಆಶೋತ್ತರ ಈಡೇರಲಿದೆ. ಹಣಕಾಸಿನ ಸ್ಥಿತಿ ಉತ್ತಮ. ವೃತ್ತಿ ರಂಗದಲ್ಲಿ ಮುನ್ನಡೆಗೆ ಅವಕಾಶ, ಕೆಲಸದ ವೇಳೆ ಸಹೋದ್ಯೋಗಿಗಳ ಸಹಕಾರ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ವಿವಾಹ ಸಮಸ್ಯೆ ಬಗೆಹರಿಯುತ್ತದೆ. ಭೂ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಯಾರನ್ನೂ ನಂಬೋದಕ್ಕೆ ಹೋಗಬೇಡಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭರಾಶಿ
ಆರೋಗ್ಯದಲ್ಲಿ ಏರುಪೇರು, ಧನನಷ್ಟ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ. ನಿರ್ಣಯ ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ಪ್ರೀತಿಪಾತ್ರರೊಂದಿಗೆ ಒಡನಾಟ. ವಿದ್ಯಾರ್ಥಿಗಳಿಗೆ ಆಲಸ್ಯದಿಂದ ನಿರುತ್ಸಾಹ. ಪರಿಚಿತರು ಸಹಾಯ ಕೇಳುವ ಸಾಧ್ಯತೆ. ತಾಳ್ಮೆಯಿಂದ ನಡೆದುಕೊಂಡಲ್ಲಿ ಇಡೀ ದಿನ ಯಶಸ್ಸು. ಸಂತಾನ ಪ್ರಾಪ್ತಿ.

ಮಿಥುನರಾಶಿ
ಸರಕಾರಿ ಕೆಲಸದಲ್ಲಿ ಪ್ರಗತಿ, ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗ ಬದಲಾವಣೆಯಿಂದ ಅಧಿಕ ಲಾಭ. ರಾಜಕೀಯರಂಗದವರಿಗೆ ಅಪವಾದ. ಯತ್ನ ಕಾರ್ಯಭಂಗದಿಂದ ಬೇಸರ. ಅತೀ ಹಣದ ಆಸೆಯಿಂದ ಸಂಕಷ್ಟ. ಮಾನಹಾನಿ ಸಾಧ್ಯತೆ. ಸುಖ ಬೋಜನ. ಪ್ರಿಯರ ಜನರ ಭೇಟಿ. ಅಧಿಕಾರಿ ವರ್ಗಕ್ಕೆ ಕೆಲಸ ಕೊಡಿಸುವಿರಿ.

ಕಟಕರಾಶಿ
ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳುವಿರಿ. ವಿವಾಹ ಮಾತುಕತೆಯಲ್ಲಿ ಯಶಸ್ಸನ್ನು ಕಾಣುವಿರಿ. ಷೇರು ವ್ಯವಹಾರದಲ್ಲಿ ಅಲ್ಪಲಾಭ. ಖರ್ಚುವೆಚ್ಚಗಳು ಆತಂಕಕ್ಕೆ ದೂಡುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರು. ಉದ್ಯೋಗಕ್ಕಾಗಿ ವಿದೇಶಿ ಪ್ರಯಾಣ. ಗೃಹ ನಿರ್ಮಾಣದಿಂದ ನೆಮ್ಮದಿ. ಹಿರಿಯರ ಆರೋಗ್ಯದಲ್ಲಿ ಏರುಪೇರು. ದಿನಾಂತ್ಯಕ್ಕೆ ಶುಭವಾರ್ತೆ.

ಸಿಂಹರಾಶಿ
ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಕರೆ ಬಂದೀತು. ಗೃಹ ನಿರ್ಮಾಣ ಕಾರ್ಯಗಳಿಗೆ ಸಕಾಲ. ವಾಹನ ಖರೀದಿ ಯೋಗ. ಹೊಸ ಯೋಜನೆಯೊಂದಕ್ಕೆ ನಾಂದಿ ಹಾಡುವಿರಿ. ಗೃಹ ಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಮನೆಯಲ್ಲಿ ನೆಮ್ಮದಿಯ ವಾತಾವರಣ. ವಾಹನ ಖರೀದಿ ಯೋಗ. ಹಿಂದಿನ ಅಧಿಕಾರದ ಗತ್ತನ್ನು ಮರೆತರೆ ಸಮಸ್ಯೆಯಿಲ್ಲ. ದಾಂಪತ್ಯ ಸುಖ. ಹಿತಶತ್ರುಗಳಿಂದ ತೊಂದರೆ. ವಾಹನ ರಿಪೇರಿ.

ಕನ್ಯಾರಾಶಿ
ಸಾಂಸಾರಿಕ ಸುಖದಲ್ಲಿ ಗೊಂದಲ. ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಅಲೆದಾಟ. ಅಧಿಕ ಖರ್ಚು, ದಾನಧರ್ಮದಲ್ಲಿ ಆಸಕ್ತಿ. ಮಹಿಳೆಯರಿಗೆ ಲಾಭ. ಸಮಸ್ಯೆಯಿನ್ನು ಅತ್ಯಂತ ನಾಜೂಕಿನಿಂದ ಬಗೆಹರಿಸುವಿರಿ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ. ಮನಸ್ಸಿಗೆ ಚಿಂತೆ. ಮಕ್ಕಳ ಆರೋಗ್ಯದಲ್ಲಿ ಎಚ್ಚರ.

ತುಲಾರಾಶಿ
ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ವಸ್ತುಗಳ ಮಾರಾಟದಿಂದ ಹೆಚ್ಚಿನ ಫಲ. ಮಾನಸಿಕವಾಗಿ ನೆಮ್ಮದಿಯಿದ್ದರೂ ಆರೋಗ್ಯದ ಸಮಸ್ಯೆ, ಇತರರಿಂದ ಸಹಾಯ ಕೇಳುವ ಸಾಧ್ಯತೆ. ಮಹಿಳೆಯರಿಗೆ ಉದ್ಯೋಗ ಭಾಗ್ಯ. ಪ್ರಯತ್ನಗಳಿಗೆ ಉತ್ತಮ ಫಲ. ಆರ್ಥಿಕ ವ್ಯವಹಾರಗಳಲ್ಲಿ ಅಲ್ಪಲಾಭ. ಸ್ತ್ರೀಯರಿಗೆ ಅನುಕೂಲ. ಮಾನಸಿಕ ನೆಮ್ಮದಿಗೆ ತೀರ್ಥಕ್ಷೇತ್ರಗಳ ದರ್ಶನ.

ವೃಶ್ಚಿಕರಾಶಿ
ಉದ್ಯೋಗ ವ್ಯವಹಾರದಲ್ಲಿ ಲಾಭ. ನಾನಾ ರೀತಿಯಲ್ಲಿ ಆದಾಯದ ಮೂಲಗಳು ಗೋಚರಕ್ಕೆ ಬರಲಿದೆ. ಕೆಲಸಕ್ಕೆ ಹೋಗುವಾಗ ಕುಬೇರನನ್ನು ಸ್ತುತಿಸಿ. ಮೇಲಾಧಿಕಾರಿಗಳ ಅವಕೃಪೆಯಿಂದ ತಪ್ಪಿಸಿಕೊಳ್ಳಿ. ಬೇಡಿಕೆಗಳು ಸ್ವಲ್ಪ ಮಟ್ಟಿಗೆ ಈಡೇರುವ ಸಾಧ್ಯತೆ. ದೂರ ಪ್ರಯಾಣ. ಶುಭ ವಿಚಾರಗಳು ಕಾರ್ಯಗತ, ಚಿತ್ರರಂಗದವರಿಗೆ ಅದೃಷ್ಟ ಕೈಕೊಡಲಿದೆ. ಕೆಂಪು ವಸ್ತ್ರಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಡಿ.

ಧನಸ್ಸುರಾಶಿ
ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಮಹಿಳೆಯರಿಗೆ ಶುಭದಾಯಕ ದಿನ. ವಿದೇಶಾಗಮನ, ಕೃಷಿ ಕ್ಷೇತ್ರದವರಿಗೆ ಉತ್ತಮ. ಮಹತ್ತರ ಜವಾಬ್ದಾರಿಯನ್ನು ಹೊರುವ ಸಾಧ್ಯತೆ. ಕಾರ್ಯಗಳಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿ, ಅನಗತ್ಯ ಖರ್ಚು, ಉದ್ಯಮಿಗಳಿಗೆ ವ್ಯವಹಾರದಲ್ಲಿ ಚೇತರಿಕೆ. ವಿದ್ಯಾರ್ಥಿಗಳಿಗೆ ಯಶಸ್ಸು.

ಮಕರರಾಶಿ
ಆರ್ಥಿಕವಾಗಿ ಚೇತರಿಕೆ. ನಿರೀಕ್ಷಿತ ಆದಾಯ ಕೈ ಸೇರುವುದು. ಮಕ್ಕಳಿಂದ ಶುಭವಾರ್ತೆ. ಹಣಕಾಸಿನ ವಿಚಾರದಲ್ಲಿ ಜಾಗೃತೆವಹಿಸಿ, ಅನಿರೀಕ್ಷಿತ ಪರಿವರ್ತನೆಯಿಂದ ಸಂತಸ. ಶುಭಮಂಗಲ ಕಾರ್ಯದಲ್ಲಿ ಭಾಗಿ, ದೂರ ಪ್ರಯಾಣದಲ್ಲಿ ಎಚ್ಚರಿಕೆ. ಆರೋಗ್ಯದಲ್ಲಿ ಎಚ್ಚರಿಕೆ. ಸ್ವತಃ ಉದ್ಯಮದವರಿಗೆ ಯಶಸ್ಸು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗೃತೆ.

ಕುಂಭರಾಶಿ
ಪರಿಶ್ರಮದಿಂದ ಬಹುದಿನದ ಕನಸು ನನಸು. ಹಣಕಾಸಿನ ವಿಚಾರದಲ್ಲಿ ಎಚ್ಚರ. ಸುಳ್ಳು ಹೇಳಿದರೆ ಸಿಕ್ಕಿ ಹಾಕಿಕೊಳ್ಳುವಿರಿ. ಆರ್ಥಿಕ ಸಹಾಯ ಕೇಳುವ ಪರಿಸ್ಥಿತಿ ಎದುರಾಗಲಿದೆ. ವೃತ್ತಿರಂಗದಲ್ಲಿ ಮುಂಬಡ್ತಿ ಯೋಗವಿದೆ. ಮನೆಗೆ ಬಂಧುಗಳ ಆಗಮನ. ವಿದ್ಯಾರ್ಥಿಗಳಿಗೆ ಗೊಂದಲ. ಧರ್ಮ ಕಾರ್ಯಗಳಿಗಾಗಿ ಓಡಾಟ. ಒತ್ತಡದಲ್ಲಿಯೇ ದಿನದೂಡುವ ಸ್ಥಿತಿ ಬರಲಿದೆ.

ಮೀನರಾಶಿ
ಇಷ್ಟಾರ್ಥ ಸಿದ್ದಿ. ಮನಸ್ಸಿಗೆ ಸಂತೋಷ. ನಿಮ್ಮ ಪಾಲಿಗಿಂದು ಅದೃಷ್ಟದ ದಿನ. ಕೆಟ್ಟ ಆಲೋಚನೆಯನ್ನು ಕೈಬಿಡಿ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಮಾತಾನಾಡುವ ಎಚ್ಚರಿಕೆ ಅಗತ್ಯ. ಜೀವ ವಿಮಾ ವಿಭಾಗದವರಿಗೆ ಆದಾಯ ವೃದ್ದಿಯಾಗಲಿದೆ. ರಕ್ತದೋಷದಿಂದ ಅನಾರೋಗ್ಯ. ಹೊಸ ಹೊಸ ಯೋಜನೆಯಿಂದ ಹೆಚ್ಚು ಲಾಭ. ದಿನಾಂತ್ಯಕ್ಕೆ ಶುಭ ಸುದ್ದಿ ಕೇಳುವಿರಿ.

Leave A Reply

Your email address will not be published.