ಸೋಮವಾರ, ಜೂನ್ 16, 2025
HomeCinemaSudeep:ಮತ್ತೊಮ್ಮೆ ಮೈಕ್ ಮುಂದೇ….! ಸುದೀಪ್ ಕೊಟ್ಟ ಸಿಹಿಸುದ್ದಿ ಏನು ಗೊತ್ತಾ…?!

Sudeep:ಮತ್ತೊಮ್ಮೆ ಮೈಕ್ ಮುಂದೇ….! ಸುದೀಪ್ ಕೊಟ್ಟ ಸಿಹಿಸುದ್ದಿ ಏನು ಗೊತ್ತಾ…?!

- Advertisement -

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸುದೀಪ್ ಸಿನಿಮಾಗಳದ್ದೇ ಸದ್ದು.  ವಿಕ್ರಾಂತ್ ರೋಣಾದಲ್ಲಿ ಜ್ವಾಕಲಿನ್ ಜೊತೆ ಸುದೀಪ್ ಹೆಜ್ಜೆ ಹಾಕಿದ ಪೋಟೋಗಳು ವೈರಲ್ ಆದ ಬೆನ್ನಲ್ಲೇ, ಸುದೀಪ್  ಬಹುನೀರಿಕ್ಷಿತ ಸಿನಿಮಾ ಕೋಟಿಗೊಬ್ಬ-3 ಬಗ್ಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.

Sudeep1

ತಮ್ಮ ಕೋಟಿಗೊಬ್ಬ ಸಿಕ್ವೆನ್ಸ್ ಕೊನೆಯ ಸಿನಿಮಾ ಕೋಟಿಗೊಬ್ಬ-3 ಬಗ್ಗೆ ಅಪ್ಡೇಟ್ ನೀಡಿರುವ ಸುದೀಪ್, ಕೋಟಿಗೊಬ್ಬ -3 ಡಬ್ಬಿಂಗ್ ಕೂಡ ಮುಗಿದಿದ್ದು, ಚಲನಚಿತ್ರದಲ್ಲಿ ನನ್ನ ಪಾತ್ರದ ಡಬ್ಬಿಂಗ್ ಮುಗಿದರೇ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಂತೆ ಎಂದಿದ್ದಾರೆ.

Sudeep2

ಕೋಟಿಗೊಬ್ಬ-3 ಬಗ್ಗೆ ಅಪ್ಡೇಟ್ ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್, ಮತ್ತೊಮ್ಮೆ ಮೈಕ್ ಮುಂದೆ. ಆದರೆ ಈ ಭಾರಿ ಕೋಟಿಗೊಬ್ಬ-3 ಡಬ್ಬಿಂಗ್ ಗಾಗಿ. ಮತ್ತೊಮ್ಮೆ ಸತ್ಯ ಹಾಗೂ ಶಿವ್ ನ ಫನ್ ಸಮಯವಾಗಿದೆ. ಪ್ರತಿಯೊಬ್ಬರು ಅವರವರ ಡಬ್ಬಿಂಗ್ ಮುಗಿಸಿದ್ದಾರೆ. ಹಿನ್ನೆಲೆ ಸ್ಕೋರ್ ಕೂಡ ಮುಗಿದಿದೆ. ನಾನು ಡಬ್ಬಿಂಗ್ ಮುಗಿಸಿದರೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಂತಾಗಲಿದ್ದು, ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ ಎಂದಿದ್ದಾರೆ.

Sudeep3

ಶಿವಕಾರ್ತೀಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೋಟಿಗೊಬ್ಬದಲ್ಲಿ ಸುದೀಪ್ ಮತ್ತೆ ಎರಡು ಶೇಡ್ ಪಾತ್ರಗಳಲ್ಲಿ ಮಿಂಚಿದ್ದು, ಸುದೀಪ್ ಗೆ ನಾಯಕಿಯಾಗಿ ಮೆಡೊನ್ನಾ ಸಬಾಸ್ಟಿಯನ್ ನಟಿಸಿದ್ದಾರೆ. ಸೂರಪ್ಪಬಾಬು ಸಿನಿಮಾ ನಿರ್ಮಿಸಿದ್ದಾರೆ.

Sudeep4

ಎಲ್ಲ ಅಂದುಕೊಂಡಂತೆ ಆಗಿದ್ದರೇ ಈಗಾಗಲೇ ಕೋಟಿಗೊಬ್ಬ-3 ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಕೊರೋನಾದಿಂದಾಗಿ ಚಿತ್ರ ತೆರೆಗೆ ಬರೋದು ವಿಳಂಬವಾಗಿದ್ದು, ದಸರಾ ವೇಳೆಗೆ ಚಿತ್ರ ತೆರೆಗೆ ಬರಬಹುದು ಅಂತ ಸುದೀಪ್ ಅಭಿಮಾನಿಗಳು ಕಾಯ್ತಿದ್ದಾರೆ.

RELATED ARTICLES

Most Popular