ಮಂಗಳವಾರ, ಜೂನ್ 17, 2025
HomeCrimeಮಾರೋಕೆ ಹೋಗಿದ್ದು ಹಳೇ ಚಪ್ಲಿ….! ಕಳೆದುಕೊಂಡಿದ್ದು ಅಕೌಂಟ್ ನಲ್ಲಿದ್ದ 1 ಲಕ್ಷ ಹಣ…!!

ಮಾರೋಕೆ ಹೋಗಿದ್ದು ಹಳೇ ಚಪ್ಲಿ….! ಕಳೆದುಕೊಂಡಿದ್ದು ಅಕೌಂಟ್ ನಲ್ಲಿದ್ದ 1 ಲಕ್ಷ ಹಣ…!!

- Advertisement -

ಬೆಂಗಳೂರು: ಹಳೆ ಚಪ್ಲಿಯನ್ನು ಓಎಲ್ಎಕ್ಸ್ ನಲ್ಲಿ ಮಾರಲು ಹೋದ ಯುವಕ ಗ್ರಹಚಾರ ಕೆಟ್ಟು ತನ್ನ ಖಾತೆಯಿಂದಲೇ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನ ಬಾಗಲೂರಿನಲ್ಲಿ ನಡೆದಿದೆ.

Olx12

ವಿಮಾನಯಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕನೊಬ್ಬ ತನ್ನ ಹಳೆ ಚಪ್ಲಿ ಹಾಗೂ ಶೂಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ಅದರಂತೆ ಓಎಲ್ಎಕ್ಸ್ ನಲ್ಲಿ ಜಾಹೀರಾತು ಪೋಸ್ಟ್ ಮಾಡಿದ್ದ.

ಇದನ್ನೂ ಓದಿ : ಸಂಕಷ್ಟಗಳಿಂದ ಕಂಗೆಟ್ಟ ಚಾಲೆಂಜಿಂಗ್ ಸ್ಟಾರ್ ….! ತಿರುನಲ್ಲಾರ್ ಶನಿದೇವರ ಮೊರೆ ಹೋದ ದಚ್ಚು….!!

ಯುವಕನ ಪೋಸ್ಟ್ ನೋಡಿದ ಅಪರಿಚಿತನೊಬ್ಬ ಕಾಲ್ ಮಾಡಿದ್ದು, ತಾನು ಎಲ್ಲ ಶೂ ಹಾಗೂ ಚಪ್ಲಿಗಳನ್ನು ಖರೀದಿಸುವುದಾಗಿ ಹೇಳಿದ್ದ. ಅಲ್ಲದೇ ಗೂಗಲ್ ಪೇ ನಂಬರ್ ಸೇರಿದಂತೆ ಹಲವು ಮಾಹಿತಿ ಪಡೆದುಕೊಂಡಿದ್ದಾನೆ.

Olx13

ಬಳಿಕ ಚಪ್ಲಿ ಹಾಗೂ ಶೂ ಕೊಂಡೊಯ್ಯುವ ಮುನ್ನವೇ ದುಡ್ಡು ಹಾಕುವುದಾಗಿ ಹೇಳಿ ಪರಿಶೀಲಿಸುವಂತೆ ಹೇಳಿದ್ದಾನೆ. ಈ ವೇಳೆ ಯುವಕನ ಅಕೌಂಟ್ ನಲ್ಲಿದ್ದ 1 ಲಕ್ಷ ರೂಪಾಯಿ ಡ್ರಾ ಆಗಿದ್ದು, ಹಣ ಕಳೆದುಕೊಂಡ ಯುವಕ ಕಂಗಾಲಾಗಿದ್ದಾನೆ.

Olx14

ಚಪ್ಲಿ ಖರೀದಿಸುವುದಾಗಿ ಮಾಹಿತಿ ಪಡೆದಿದ್ದ ಯುವಕನ ಪೋನ್ ನಂಬರ್ ಸಹ ಸ್ವಿಚ್ ಆಫ್ ಆಗಿದ್ದು, ಹಣ ಕಳೆದುಕೊಂಡ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.  

RELATED ARTICLES

Most Popular