ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತವಾಗಿದೆ. ಸಚಿವ ಬದಲಾವಣೆಗೆ ಪಟ್ಟು ಹಿಡಿದಿರುವ ಆನಂದ್ ಸಿಂಗ್ ಇದೀಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಭೇಟಿಗೆ ಕಾಲಾವಕಾಶ ಕೋರಿರುವುದು ಕುತೂಹಲ ಮೂಡಿಸಿದೆ.
ಹೊಸಪೇಟೆ ಶಾಸಕ ಆನಂದ್ ಸಿಂಗ್ ನಿನ್ನೆಯಷ್ಟೇ ಶಾಸಕರ ಕಚೇರಿಯ ನಾಮಫಲಕ ತೆರವುಗೊಳಿಸಿದ್ದರು. ಇಂದು ಹೋಮ ನಡೆಸಿದ ಆನಂದ್ ಸಿಂಗ್ ಸ್ಪೀಕರ್ ಕಾಗೇರಿ ಅವರಿಗೆ ಕರೆ ಮಾಡಿ ಕಾಲಾವಕಾಶ ಕೋರಿದ್ದಾರೆ. ಆದರೆ ಸ್ಪೀಕರ್ ತಾನು ಶಿರಸಿಯಲ್ಲಿದ್ದೇನೆ ಶುಕ್ರವಾರ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರ ಸ್ಪೀಕರ್ ಭೇಟಿಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಸಿಎಂ ಕಾಲ್ ಸ್ವೀಕರಿಸದ ಆನಂದ್ ಸಿಂಗ್ : ಬೊಮ್ಮಾಯಿ ಸಂಪುಟದಲ್ಲಿ ಮೊದಲ ವಿಕೆಟ್ ಪತನ…!
ಸ್ಪೀಕರ್ ಭೇಟಿಯ ವೇಳೆಯಲ್ಲಿ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡ್ತಾರಾ ಅನ್ನೋ ಬಗ್ಗೆ ಖಚಿತತೆ ಇಲ್ಲ. ಈ ನಡುವಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನೂ ಕೂಡ ಆನಂದ್ ಸಿಂಗ್ ಭೇಟಿಯಾಗಲಿದ್ದಾರೆ.