Marburg Virus : ಕೊರೊನಾ, ಇಟಾ ಬೆನ್ನಲ್ಲೇ ಪತ್ತೆಯಾಯ್ತು ಮಾರ್ಬರ್ಗ್ ವೈರಸ್ : ನಿಮಗೆ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ

ವಿಶ್ವ ಆರೋಗ್ಯ ಸಂಸ್ಥೆ ಪಶ್ಚಿಮ ಆಫ್ರಿಕದಲ್ಲಿ ಮತ್ತೊಂದು ಅಪಾಯಕಾರಿ ವೈರಸ್‌ ಪತ್ತೆಯಾಗಿರುವುದಾಗಿ ಹೇಳಿದೆ. ಅದನ್ನು ಮಾರ್ಬರ್ಗ್ ವೈರಸ್ ಎಂದು ಕರೆಯಲಾಗಿದೆ. ಇದು ಬಾವಲಿಗಳಿಂದ ಹರಡುವಂಥ ಕಾಯಿಲೆಯಾಗಿದ್ದು ಈ ಕಾಯಿಲೆ ಬಂದ್ರೆ ಸಾವನ್ನಪ್ಪುವ ಸಾಧ್ಯತೆ ಶೇ. 88ರಷ್ಟು ಎಂದು ಹೇಳಿದೆ. ಆಗಸ್ಟ್‌ 2ಕ್ಕೆ ಸಾವನ್ನಪ್ಪಿರುವ ವ್ಯಕ್ತಿಯ ಸ್ಯಾಂಪಲ್ ಪರೀಕ್ಷಿಸಿದಾಗ ಆ ವ್ಯಕ್ತಿ ಮಾರ್ಬರ್ಗ್ ವೈರಸ್‌ನಿಂದಾಗಿ ಸತ್ತಿದ್ದು ಎಂದು ಸಾಬೀತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕದ ಪ್ರಾದೇಶಿಕ ನಿರ್ದೇಶಕರಾಗಿರುವ ಡಾ. ಮತ್ಶಿದಿಸೋ ಮೋಯಿಟಿ ಪ್ರಕಾರ ಮಾರ್ಬರ್ಗ್ ವೈರಸ್‌ ವೇಗವಾಗಿ ಹರಡಬಹುದು, ಇದನ್ನು ಸರಿಯಾದ ಟ್ರ್ಯಾಕ್‌ನಿಂದ ನಿಲ್ಲಿಸಬೇಕಾಗಿದೆ ಎಂದಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ಗಿನಿಯದಲ್ಲಿ ಎಬೋಲೋದ ಎರಡನೇ ಅಲೆ ಮುಕ್ತಾಯವಾಗಿದೆ ಎಂದು ಹೇಳಿದ ಬೆನ್ನಲ್ಲೇ ಈ ವೈರಸ್ ಪತ್ತೆಯಾಗಿದೆ.

ಮಾರ್ಬರ್ಗ್‌ ವೈರಸ್‌ ಎಂದರೇ ಎಬೋಲಾ ವೈರಸ್‌ ಕುಟುಂಬದಿಂದಲೇ ಬರುವ ವೈರಸ್‌ ಇದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾರ್ಬರ್ಗ್‌ ಹಾಗೂ ಫ್ರಾಂಕ್‌ಫರ್ಟ್ ಜರ್ಮನಿ, ಸೆರ್ಬಿಯಾ, ಬೆಲ್‌ಗ್ರೇಡ್‌ನಲ್ಲಿ 1967ರಲ್ಲಿ ಒಂದೇ ಸಮಯದಲ್ಲಿ ಕಂಡು ಬಂದಿತ್ತು, ಆಗ ಈ ವೈರಸ್‌ ಮೊತ್ತ ಮೊದಲಿಗೆ ಪತ್ತೆಯಾಗಿತ್ತು. ಉಗಾಂಡದಿಂದ ತಂದ ಆಫ್ರಿಕನ್ ಗ್ರೀನ್ ಮಂಕಿಗಳ ಕುರಿತು ಲ್ಯಾಬ್‌ನಲ್ಲಿ ಪರೀಕ್ಷೆ ಮಾಡುತ್ತಿರುವಾಗ ಈ ವೈರಸ್‌ ಸ್ಪೋಟವಾಯ್ತು. ಬಾವಲಿಗಳು ಹೆಚ್ಚಾಗಿರುವ ಗಣಿಗಳು ಹಾಗೂ ಗುಹೆಗಳಲ್ಲಿ ಕೆಲಸ ಮಾಡಿದಾಗ ಅಥವಾ ಹೋದಾಗ ಈ ವೈರಸ್‌ ಮನುಷ್ಯರಿಗೆ ಹರಡುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಬಾವಲಿಯಿಂದ ಮುನುಷ್ಯರಿಗೆ ಹಾಗೂ ಮನುಷ್ಯರಿಂದ -ಮನುಷ್ಯರಿಗೆ ಹರಡುವುದು ಈ ವೈರಸ್‌ ಒಮ್ಮೆ ಬಾವಲಿಯಿಂದ ಮನುಷ್ಯನಿಗೆ ಹರಡಿದರೆ ಆ ವ್ಯಕ್ತಿ ಮುಖಾಂತರ ಇತರ ವ್ಯಕ್ತಿಗೆ ಹರಡುತ್ತಾ ಸಾಗುವುದು. ಸೋಂಕಿತ ವ್ಯಕ್ತಿಯ ರಕ್ತ, ಮೂತ್ರ ಅಥವಾ ಅಂಗಾಂಗಗಳ ದ್ರವ ತಾಗಿದರೆ ಅಥವಾ ಅವುಗಳು ಬಿದ್ದಿರುವ ಸ್ಥಳಕ್ಕೆ ಮತ್ತೊಬ್ಬ ವ್ಯಕ್ತಿ ಹೋದರೆ ಹರಡುವುದು. ಈ ವೈರಸ್‌ ಸೋಂಕಿದ 2-21 ದಿನಗಳಲ್ಲಿ ರೋಗ ಲಕ್ಷಣಗಳು ಕಂಡು ಬರುವುದು.

ಮಾರ್ಬರ್ಗ್ ಸೋಂಕು ತಗುಲಿದ ವ್ಯಕ್ತಿಗೆ ಅತ್ಯಧಿಕ ಜ್ವರ ತಲೆ ನೋವು ವಿಪರೀತ ಮೈಕೈ ನೋವು ಬೇಧಿ ಕಿಬ್ಬೊಟ್ಟೆ ನೋವು ಸ್ನಾಯು ಸೆಳೆತ ತಲೆ ಸುತ್ತು ವಾಂತಿ ನೋವು ವಾಂತಿ ಹಾಗೂ ತಲೆ ಸುತ್ತು ಸೋಂಕು ತಗುಲಿದ 3 ದಿನಗಳಲ್ಲಿ ಕಂಡು ಬರುವುದು. ಇದು ವಾರದವರೆಗೆ ಇರುತ್ತದೆ, ಈ ಹಂತದಲ್ಲಿ ವ್ಯಕ್ತಿ ದೆವ್ವದ ರೀತಿ ಕಂಡು ಬರುತ್ತಾನೆ ಅಂದ್ರೆ ಮುಖದಲ್ಲಿ ಯಾವುದೇ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗದ ರೀತಿಯಲ್ಲಿರುತ್ತಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜೊತೆಗೆ ರೋಗ ಲಕ್ಷಣಗಳು ಉಲ್ಭಣವಾದಾಗ ದೇಹದ ಭಾಗಗಳಿಂದ ರಕ್ತಸ್ರಾವ ಉಂಟಾಗುವುದು. ಮೂಗು, ದವಡೆಗಳು, ಗುದ್ವಾರ, ಜನನೇಂದ್ರೀಯದಿಂದ ರಕ್ತಸ್ರಾವ ಬರುವುದು. ವೈರಸ್‌ ತಗುಲಿದ 8-9 ದಿನಗಳಲ್ಲಿ ಅತ್ಯಧಿಕ ರಕ್ತಸ್ರಾವದಿಂದಾಗಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು.

ಮಾರ್ಬರ್ಗ್‌ ವೈರಸ್‌ ಕಾಯಿಲೆಯನ್ನು ಇತರ ಸೋಂಕಿನ ಕಾಯಿಲೆಗಳಾದ ಮಲೇರಿಯಾ, ಟೈಫಾಯ್ಡ್ ಜ್ವರ, ಶಿಗೆಲೋಸಿಸ್, ಮೆನಿಂಜೈಟಿಸ್ ಇವುಗಳಂತೆಯೇ ಮೊದಲಿಗೆ ಕಂಡು ಬರುವುದು. ಆದ್ದರಿಂದ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಲು ಕಷ್ಟವಾಗಬಹದುದು. ಈ ವೈರಸ್‌ ಅನ್ನು ಆ್ಯಂಟಿಜೆನ್ ಪರೀಕ್ಷೆ, ಸೆರಮ್ ನ್ಯೂಟ್ರಲೈಸೇಷನ್ ಪರೀಕ್ಷೆ, RT-PCR ಇವುಗಳ ಮೂಲಕ ಪತ್ತೆ ಮಾಡಲಾಗುವುದು. ಇದಕ್ಕೆ ರಕ್ತ ನಿಡುವುದು, ಇಮ್ಯೂನೆ ಥೆರಪಿ, ಡ್ರಗ್ ಥೆರಪಿ ಚಿಕಿತ್ಸೆ ನೀಡಲಾಗುವುದು. ಮಾರ್ಬರ್ಗ್‌ ವೈರಸ್‌ಗಾಗಿಯೇ ಪ್ರತ್ಯೇಕವಾದ ಚಿಕಿತ್ಸೆ ವಿಧಾನವಿಲ್ಲ. ದೇಹದಲ್ಲಿ ನಿರ್ಜಲೀಕರಣ ಉಂಟಾಗದಂತೆ ನೋಡಿಕೊಂಡು ರೊಗಿಗೆ ಚಿಕಿತ್ಸೆ ನೀಡಲಾಗುವುದು.

Comments are closed.