Landslide: ಹಿಮಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ…! 50 ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ…!!

ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಿಮಾಚಲ ಪ್ರದೇಶದ ಕಿನ್ನೌರ ಬಳಿ ಭಾರಿ ಭೂ ಕುಸಿತ ಉಂಟಾಗಿದೆ. ಸರ್ಕಾರಿ ಬಸ್ ಸೇರಿದಂತೆ ಹಲವು ವಾಹನಗಳ ಮೇಲೆ ಮಣ್ಣು ಕುಸಿದಿದ್ದು, ಮಣ್ಣಿನಡಿಯಲ್ಲಿ 40 ಜನರು ಸಿಲುಕಿರುವ ಶಂಕೆ  ವ್ಯಕ್ತವಾಗಿದೆ.

ಕಿನ್ನೌರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, 40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸರ್ಕಾರಿ ಬಸ್ ಮೇಲೆ ಮಣ್ಣು ಕುಸಿದಿದೆ. ಡ್ರೈವರ್ ನನ್ನು ರಕ್ಷಿಸಲಾಗಿದೆ. ಇತರ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯನಡೆದಿದ್ದು, ಸ್ಥಳಕ್ಕೆ ಎನ್.ಡಿ.ಆರ್ಎಫ್ ತಂಡ ಧಾವಿಸಿದೆ. ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜಯರಾಮ್ ಠಾಕೂರ್ ಜೊತೆ ಮಾತನಾಡಿದ್ದು, ವಿವರಣೆ ಪಡೆದುಕೊಂಡಿದ್ದಾರೆ. ಅಲ್ಲದೇ ರಕ್ಷಣಾ ಕಾರ್ಯಕ್ಕೆ ಅಗತ್ಯ ಸಹಾಯ ನೀಡಲು ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದನ್ನು ಮುಖ್ಯಮಂತ್ರಿ ಜಯರಾಮ್ ಠಾಕೂರ್ ಖಚಿತಪಡಿಸಿದ್ದು, 50-60 ಜನರು ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಸ್ಥಳದಲ್ಲಿ ಪೊಲೀಸ್ ,ಎನ್ಡಿಆರ್ಎಫ್, ಐಟಿಆರ್ಎಫ್ ಸೇರಿದಂತೆ ಹಲವು ತಂಡಗಳು ಬೀಡುಬಿಟ್ಟಿದ್ದು ರಕ್ಷಣಾ ಕಾರ್ಯ ಚುರುಕಾಗಿ ನಡೆದಿದೆ.  

Comments are closed.